alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಹೊಟೇಲ್ ನಲ್ಲಿ ನೀವೇ ಮಾಡ್ಬಹುದು ಅಡುಗೆ..!

pick-pakwangali_520_091516062049

ದೊಡ್ಡ ಹೊಟೇಲ್ ಗೆ ಹೋಗ್ತೀರಾ. ಸಿಕ್ಕಾಪಟ್ಟೆ ಹಣ ಕೊಟ್ಟು ಏನೋ ತಿನ್ನುತ್ತೀರಾ. ಆದ್ರೆ ಸ್ವಲ್ಪವೂ ರುಚಿ ಇರೋದಿಲ್ಲ. ಇದಕ್ಕಿಂತ ಮನೆಯಲ್ಲಿ ನಾನೇ ಚೆನ್ನಾಗಿ ಮಾಡ್ತಿದ್ದೆ ಎನ್ನುತ್ತಾ ಹೊರಗೆ ಬರ್ತೀರಾ. ಆದ್ರೆ ಹೊಟೇಲ್ಲೊಂದು ನಿಮಗೆ ಆ ಅವಕಾಶ ನೀಡಿದೆ. ಮನೆಯಲ್ಲಿ ಮಾಡುವ ಬದಲು ಹೊಟೇಲ್ ಗೆ ಹೋಗಿ ನಿಮಗಿಷ್ಟವಾಗುವ ತಿಂಡಿ ಮಾಡಿ ತಿಂದು ಬರಬಹುದು.

ಮನೆಗೆ 20 ಜನ ಬಂದ್ರೆ ಅವರಿಗೆ ಪಾರ್ಟಿ ಕೊಡೋದು ಕಷ್ಟ. ಜಾಗದ ಅಭಾವವಿದೆ ಎನ್ನುವವರು ಈ ಹೊಟೇಲ್ ಗೆ ಹೋಗಬಹುದು. ಲಂಡನ್ ಶೋರ್ಡಿಚ್ ಹೈ ಸ್ಟ್ರೀಟ್ನ ದಿ ಡೈನಿಂಗ್ ಕ್ಲಬ್ ರೆಸ್ಟೋರೆಂಟ್ ಕೇವಲ 13 ದಿನಗಳಿಗೆ ಮಾತ್ರ ತೆರೆದಿದೆ. ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ತೆರೆದಿರುತ್ತದೆ. ಸೆಪ್ಟೆಂಬರ್ 10 ರಂದೇ ರೆಸ್ಟೋರೆಂಟ್ ಶುರುವಾಗಿದ್ದು ಸೆಪ್ಟೆಂಬರ್ 25 ರವರೆಗೆ ಮಾತ್ರ ತೆರೆದಿರಲಿದೆ.

ತರಕಾರಿ ಹೆಚ್ಚಿಕೊಡಲು, ಸಹಾಯ ಮಾಡಲು ನಿಮ್ಮ ಸಹಾಯಕ್ಕೆ ಹೊಟೇಲ್ ಸಿಬ್ಬಂದಿ ಇರ್ತಾರೆ. ಸರ್ವ್ ಕೂಡ ನೀವು ಮಾಡಬೇಕಾಗಿಲ್ಲ. ಪಾತ್ರೆ ತೊಳೆಯುವ ತಾಪತ್ರಯವಿಲ್ಲ. ನಿಮ್ಮ ಜೊತೆ ನಿಮ್ಮ ಸ್ನೇಹಿತರಿಗೂ ರುಚಿಯಾದ ಅಡುಗೆ ಮಾಡಿ ಬಡಿಸಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...