alex Certify
ಕನ್ನಡ ದುನಿಯಾ       Mobile App
       

Kannada Duniya

ಕಂಪ್ಯೂಟರ್ ಸ್ಲೋ ಆದ್ರೆ ಏನೇನ್ಮಾಡ್ತಾರೆ ಗೊತ್ತಾ…?

computer

ತಡೆರಹಿತವಾಗಿ, ವೇಗವಾಗಿ ಕೆಲಸ ನಿರ್ವಹಿಸುವಂತಹ ಹೊಸ ಕಂಪ್ಯೂಟರ್ ಹೊಂದಬೇಕಾದ ಅಗತ್ಯದ ಬಗ್ಗೆ ಮೈಕ್ರೋಸಾಫ್ಟ್ ರೆಡ್ಮೊಂಡ್ ಇತ್ತೀಚೆಗಷ್ಟೆ ಸಮೀಕ್ಷೆಯೊಂದನ್ನು ನಡೆಸಿದೆ.

ಅದರ ಫಲಿತಾಂಶ ನಿಜಕ್ಕೂ ಅಚ್ಚರಿ ಹುಟ್ಟಿಸುವಂತಿದೆ. ಸಮೀಕ್ಷೆಯ ಪ್ರಕಾರ ಬಹುತೇಕ ಎಲ್ಲರೂ ಮನೆಯಲ್ಲಿ 3 ವರ್ಷ ಹಳೆಯ ಕಂಪ್ಯೂಟರ್, ಡೆಸ್ಕ್ ಟಾಪ್ ಅಥವಾ ಲ್ಯಾಪ್ ಟಾಪ್ ಗಳನ್ನು ಬಳಸ್ತಾರೆ. ಅದರ ಆಪರೇಟಿಂಗ್ ಸಿಸ್ಟಮ್ ಬೂಟ್ ಆಗಲು ಶೇ.65 ರಷ್ಟು ಹೆಚ್ಚು ಸಮಯ ಬೇಕು. ವರ್ಷಕ್ಕೆ ಹೆಚ್ಚುವರಿಯಾಗಿ ಅವು 23.5 ಗಂಟೆ ಸಮಯ ತೆಗೆದುಕೊಳ್ಳುತ್ತವೆ.

ಅದರರ್ಥ  ಸಿಸ್ಟಮ್ ಲೋಡಿಂಗ್ ಗೆ ಕಾಯುತ್ತ ಬಳಕೆದಾರರ ಒಂದು ದಿನ ವ್ಯರ್ಥವಾದಂತೆ. ಹಳೆ ಕಂಪ್ಯೂಟರ್ ನಲ್ಲಿ ಕೆಲಸ ಮಾಡುವವರಿಗೆ ಹೊಸ ಸಿಸ್ಟಮ್ ನಲ್ಲಿ ಕೆಲಸ ಮಾಡುವವರಿಗಿಂತ ಹೆಚ್ಚುವರಿಯಾಗಿ ಮೂರೂವರೆ ಪಟ್ಟು ಸಮಯ ಬೇಕು.

ಸಿಸ್ಟಮ್ ಸ್ಲೋ ಅಥವಾ ಹ್ಯಾಂಗ್ ಇಂತಹ ಸಮಸ್ಯೆಯಿಂದ ಹತಾಶೆಗೊಂಡು ಶೇ.6 ರಷ್ಟು ಬಳಕೆದಾರರು ಅಳಲು ಶುರು ಮಾಡ್ತಾರಂತೆ. 5-10 ವರ್ಷ ಹಳೆಯ ಕಂಪ್ಯೂಟರ್ ಬಳಸುವವರಲ್ಲಿ ಶೇ.65 ರಷ್ಟು ಮಂದಿ ಸಿಸ್ಟಮ್ ಎರರ್ ನಿಂದ ಬೇಸತ್ತು ಕೂಗಾಡೋದು, ಸಿಕ್ಕಿದ್ದನ್ನೆಲ್ಲ ಎಸೆಯೋದು ಮಾಡ್ತಾರೆ. ಆಘಾತಕಾರಿ ವಿಷಯ ಅಂದ್ರೆ ಪಿಸಿ ಸಮಸ್ಯೆಯಿಂದ ರೋಸಿ ಹೋಗಿ ಶೇ.6 ರಷ್ಟು ಮಂದಿ ಮದ್ಯಪಾನ ಮಾಡಲು ಆರಂಭಿಸ್ತಾರಂತೆ. ಹಾಗಾಗಿ ಹೊಸ ಕಂಪ್ಯೂಟರ್ ತೆಗೆದುಕೊಳ್ಳಿ ಜೊತೆಗೆ ಲೇಟೆಸ್ಟ್ ಆಪರೇಟಿಂಗ್ ಸಿಸ್ಟಮ್ ವಿಂಡೋಸ್ 10 ಬಳಸಿ ಅನ್ನೋದು ಮೈಕ್ರೋಸಾಫ್ಟ್ ಸಲಹೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...