alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯರ ಸಾಮಾನ್ಯ ಸೆಕ್ಸ್ ಸಮಸ್ಯೆ

woman-big

ಒತ್ತಡದ ಜೀವನ ಈಗ ಸಾಮಾನ್ಯವಾಗಿದೆ. ಇದ್ರಿಂದ ಅನೇಕ ಖಾಯಿಲೆಗಳು ಕಾಡುತ್ತವೆ. ಅದ್ರಲ್ಲಿ ಲೈಂಗಿಕ ರೋಗ ಕೂಡ ಒಂದು. ಸಮೀಕ್ಷೆಯೊಂದರ ಪ್ರಕಾರ ಶೇಕಡಾ 43ರಷ್ಟು ಮಹಿಳೆಯರು ಒಂದಲ್ಲ ಒಂದು ಲೈಂಗಿಕ ಸಮಸ್ಯೆಯಿಂದ ಬಳಲುತ್ತಾರಂತೆ.

ಲೈಂಗಿಕ ಸಮಸ್ಯೆಗೆ ಮೂಲ ಕಾರಣ ಜಾಗೃತಿಯ ಕೊರತೆ. ಸರಿಯಾದ ಸಮಯಕ್ಕೆ ಜನರು ವೈದ್ಯರನ್ನು ಭೇಟಿ ಮಾಡುವುದಿಲ್ಲ. ವೈದ್ಯರಿಗೂ ಚಿಕಿತ್ಸೆ ಕಷ್ಟಸಾಧ್ಯ ಎನ್ನುವ ಪರಿಸ್ಥಿತಿಯುಂಟಾದಾಗ ಮಾತ್ರ ಆಸ್ಪತ್ರೆಗೆ ಬರುವವರ ಸಂಖ್ಯೆ ಹೆಚ್ಚಿದೆ.

ಮುಟ್ಟು ಶುರುವಾಗ್ತಿದ್ದಂತೆ ಹುಡುಗಿಯರ ಹಾರ್ಮೋನ್ ನಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತದೆ. ಲೈಂಗಿಕ ಕ್ರಿಯೆ ನಂತ್ರ ಮತ್ತಷ್ಟು ಬದಲಾವಣೆಯಾಗುತ್ತದೆ. ಗರ್ಭ ತಡೆಯಲು ನಿಯಮಿತವಾಗಿ ಗರ್ಭನಿರೋಧಕ ಮಾತ್ರೆ ಸೇವನೆ ಮಾಡುವವರಲ್ಲಿ ಹೆಚ್ಚಿನ ಬದಲಾವಣೆ ಕಾಣಿಸಿಕೊಳ್ಳುತ್ತದೆ. ಪುರುಷರಿಗೆ ಹೋಲಿಸಿದ್ರೆ ಮಹಿಳೆಯರಿಗೆ ಹೆಚ್ಚಾಗಿ ಸೆಕ್ಸ್ ಸಮಸ್ಯೆ ಕಾಡುತ್ತದೆ. ಸಂಭೋಗದ ನಂತ್ರ ಅನೇಕ ಮಹಿಳೆಯರು ಸಮಸ್ಯೆ ಎದುರಿಸುತ್ತಾರೆ. ಹಾಗಾಗಿ ಕೆಲವೊಂದು ಸಾಮಾನ್ಯ ವಿಧಾನಗಳನ್ನು ಮಹಿಳೆಯರು ಅನುಸರಿಸಬೇಕಾಗುತ್ತದೆ.

ಲ್ಯುಕೊರಿಯಾ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರನ್ನು ಕಾಡುತ್ತದೆ. ಯೋನಿಯಿಂದ ಬಿಳಿ ಬಣ್ಣದ ಜಿಗುಟಾದ ದಪ್ಪ ನೀರು ಹೊರಬರುತ್ತದೆ. ಪ್ರೌಢಾವಸ್ಥೆಯ ಮಹಿಳೆಯನ್ನು ಇದು ಹೆಚ್ಚಾಗಿ ಕಾಡುತ್ತದೆ.

ಬಹುತೇಕ ಮಹಿಳೆಯರು ಯೋನಿಯ ತುರಿಕೆಯಿಂದ ಬಳಲುತ್ತಾರೆ. ಇದಕ್ಕೆ ಅನೇಕ ಕಾರಣಗಳಿವೆ. ಸೋಂಕು, ಯೋನಿಯನ್ನು ಸ್ವಚ್ಛವಾಗಿಟ್ಟುಕೊಳ್ಳದಿರುವುದು, ಮಲಬದ್ಧತೆ, ಲೈಂಗಿಕ ಕ್ರಿಯೆ ನಡೆಸುವ ವ್ಯಕ್ತಿ ಸೋಂಕಿನಿಂದ ಬಳಲುತ್ತಿದ್ದರೆ ಲೈಂಗಿಕ ಅಸ್ವಸ್ಥತೆ ಇತ್ಯಾದಿ ಕಾರಣವಾಗುತ್ತದೆ.

ಗರ್ಭಕೋಶದ ರೋಗಗಳು ಮಹಿಳೆಯರನ್ನು ಕಾಡುತ್ತವೆ. ಯೋನಿಯನ್ನು ಸರಿಯಾಗಿ ಸ್ವಚ್ಛಗೊಳಿಸದೆ ಇರುವುದೇ ಇದಕ್ಕೆ ಬಹುಮುಖ್ಯ ಕಾರಣವಾಗಿರುತ್ತದೆ.

ಲೈಂಗಿಕ ನಿರಾಸಕ್ತಿ ಮಹಿಳೆಯನ್ನು ಕಾಡುವುದು ಹೆಚ್ಚು. ಕೆಲ ಮಹಿಳೆಯರಿಗೆ ಮುಟ್ಟು ನಿಂತ ನಂತ್ರ ಆಸಕ್ತಿ ಕಡಿಮೆಯಾದ್ರೆ ಮತ್ತೆ ಕೆಲ ಮಹಿಳೆಯರಿಗೆ ಮುಟ್ಟಿನ ಅವಧಿಯಲ್ಲೂ ಆಸಕ್ತಿಯಿರುವುದಿಲ್ಲ. ಲೈಂಗಿಕ ಕ್ರಿಯೆ ನಡೆಸಲು ಇಷ್ಟಪಡದ ಮಹಿಳೆಯರು ಸಂಗಾತಿಯಿಂದ ದೂರ ಸರಿಯಲು ಇಷ್ಟಪಡ್ತಾರೆ. ಇದು ಮಹಿಳೆಯರನ್ನು ಕಾಡುವ ದೊಡ್ಡ ಸಮಸ್ಯೆ ಎಂದ್ರೆ ತಪ್ಪಾಗಲಾರದು.

ಲೈಂಗಿಕ ವಿಚಾರದಲ್ಲಿ ಯಾವುದೇ ಸಮಸ್ಯೆಯಾದ್ರೂ ಮೊದಲು ವೈದ್ಯರನ್ನು ಭೇಟಿಯಾಗುವುದು ಸೂಕ್ತ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...