alex Certify
ಕನ್ನಡ ದುನಿಯಾ       Mobile App
       

Kannada Duniya

ಜಗತ್ತಿನ ಅತಿ ದೊಡ್ಡ ಟೆಲಿಸ್ಕೋಪ್

ae3adc76d4be4cc383a8bfd01f44e489_18ಬೀಜಿಂಗ್: ಚೀನಾ ಜಗತ್ತಿನಲ್ಲೇ ಅತೀ ದೊಡ್ಡದಾದ ರೆಡಿಯೋ ಟೆಲಿಸ್ಕೋಪ್ ಗೆ ಫೈನಲ್ ಟಚಪ್ ಕೊಟ್ಟಿದೆ. ಇದರ ರಿಫ್ಲೆಕ್ಷರ್ 30 ಫುಟ್ಬಾಲ್ ಮೈದಾನಕ್ಕೆ ಸಮವಾಗಿದೆ. ಸುಮಾರು 1200 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಇದಕ್ಕೆ ‘ಫಾಸ್ಟ್’ ಎಂದು ನಾಮಕರಣ ಮಾಡಿದ್ದಾರೆ.

ಭಾನುವಾರ ಇದರ ಎಲ್ಲ ಕೆಲಸ ಪೂರ್ಣಗೊಂಡಿದೆ. ಇದನ್ನು ಗಿಜಾವ್ ನ ದಕ್ಷಿಣ- ಪಶ್ಚಿಮ ಪ್ರಾಂತ್ಯದ ಪಿಂಗತಾಂಗ್ ಕಾವುಂಟಿಯಲ್ಲಿ ನಿಲ್ಲಿಸಲಾಗಿದೆ. ವರದಿಯ ಪ್ರಕಾರ ಸೆಪ್ಟೆಂಬರ್ ನಲ್ಲಿ ಇದು ಕಾರ್ಯನಿರತವಾಗಲಿದೆ. ಟೆಲಿಸ್ಕೋಪ್ ತಯಾರಿಕೆಯ ಎಲ್ಲ ಹಂತ ಮುಗಿದಿದ್ದು, ಇದರ ಟ್ರಯಲ್ ನಡೆಯುತ್ತಿದೆ. ಇದರಲ್ಲಿ 4450 ಪ್ಯಾನಲ್ ಗಳನ್ನು ಅಳವಡಿಸಿದ್ದಾರೆ.

ರಾಷ್ಟ್ರೀಯ ಖಗೋಳ ವೀಕ್ಷಣೆಯ ಉಪ ಪ್ರತಿನಿಧಿ ಜೆಂಗ್ ಜಿಯಾವೊನಿಯನ್ ಅವರು, “ಇದು ಕಾರ್ಯಾರಂಭವಾದ ಬಳಿಕ ಇದರ ಸಂಕೇತಗಳ ಮೇಲೆ ಚೀನಾ ಸೈನ್ಸ್ ಅಕಾಡೆಮಿಯ ವಿಜ್ಞಾನಿಗಳು ಪರೀಕ್ಷಿಸುತ್ತಾರೆ. ಇದು ಅಂತರಿಕ್ಷದ ಆಳವನ್ನು ಅಧ್ಯಯನ ಮಾಡುತ್ತದೆ” ಎಂದಿದ್ದಾರೆ.

ಜೆಂಗ್ ಅವರು, “ಇದರಿಂದ ಗ್ರಹಗಳಲ್ಲಿ ಜೀವಿಗಳ ಉಳಿಯುವಿಕೆಯನ್ನು ಮತ್ತು ಬ್ರಹ್ಮಾಂಡದ ಉತ್ಪತ್ತಿಯನ್ನು ಶೋಧಿಸಲು ಸಹಾಯವಾಗುತ್ತದೆ. ಈ ಯೋಜನೆ 2011 ರಲ್ಲೇ ಆರಂಭವಾಗಿತ್ತು” ಎಂದು ಹೇಳಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...