alex Certify
ಕನ್ನಡ ದುನಿಯಾ       Mobile App
       

Kannada Duniya

2 ಸಾವಿರ ಶಾಲೆಗಳಲ್ಲಿ ಸ್ಯಾನಿಟರಿ ಪ್ಯಾಡ್ ಮಶಿನ್

013-580x395

ಬಾಲಕಿಯರ ದಿನದಂದು ಪರಿಚಯಿಸಿದ್ದ ಯೋಜನೆಗಳನ್ನು ಛತ್ತೀಸ್ಗಢ ಸರ್ಕಾರ ಜಾರಿಗೆ ತರಲು ಶುರುಮಾಡಿದೆ. ಈ ನಿಟ್ಟಿನಲ್ಲಿ ರಾಜ್ಯದ 2 ಸಾವಿರ ಶಾಲೆಗಳಲ್ಲಿ ಸ್ಯಾನಿಟರಿ ಪ್ಯಾಡ್ ಎಟಿಎಂ ಮಶಿನ್ ಅಳವಡಿಸಲಾಗ್ತಾ ಇದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಡಿಯಲ್ಲಿ ಈ ಯೋಜನೆಗಳನ್ನು ಘೋಷಣೆ ಮಾಡಲಾಗಿತ್ತು. ಮಾತಿನಂತೆ ನಡೆದುಕೊಂಡಿರುವ ಸರ್ಕಾರ, ಬಾಲಕಿಯರು ಓದುತ್ತಿರುವ 2 ಸಾವಿರ ಶಾಲೆಗಳಲ್ಲಿ ಸ್ಯಾನಿಟರಿ ಪ್ಯಾಡ್ ಮಶಿನ್ ಅಳವಡಿಸುತ್ತಿದೆ. ಆರಂಭದಲ್ಲಿ 7200 ಪ್ಯಾಡ್, ಮಶಿನ್ ನಲ್ಲಿ ಲಭ್ಯವಾಗಲಿದೆ. ಮಶಿನ್ ಶಾಲೆಯ ಶೌಚಾಲಯದಲ್ಲಿ ಅಳವಡಿಸಲಾಗುವುದು.

ರಾಯ್ಪುರ ಸೇರಿದಂತೆ ಕೆಲ ಪ್ರದೇಶಗಳ ಶಾಲೆಯಲ್ಲಿ ಈಗಾಗಲೇ ಮಶಿನ್ ಅಳವಡಿಸಲಾಗಿದೆ. ಉಳಿದ ಪ್ರದೇಶದಲ್ಲಿ ಶೀಘ್ರ ಮಶಿನ್ ಅಳವಡಿಸಲಾಗುವುದು. ಹಾಗೆ ಬಳಸಿದ ಪ್ಯಾಡ್ ಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವ ವ್ಯವಸ್ಥೆ ಮಾಡಲಾಗಿದೆ. ಕೇವಲ ಪ್ಯಾಡ್ ನೀಡುವುದು ಮಾತ್ರ ಈ ಯೋಜನೆಯ ಉದ್ದೇಶವಲ್ಲ. ಬಾಲಕಿಯರಿಗೆ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವ ಅವಶ್ಯಕತೆ ಇದೆ. ಹಾಗಾಗಿ ಈ ಬಗ್ಗೆ ತರಬೇತಿದಾರರನ್ನು ಸ್ಕೂಲುಗಳಿಗೆ ಕಳುಹಿಸಲಾಗುವುದೆಂದು ಸಚಿವರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...