alex Certify
ಕನ್ನಡ ದುನಿಯಾ       Mobile App
       

Kannada Duniya

500 ಕೆಜಿ ತೂಕದ ಮಹಿಳೆ ಚಿಕಿತ್ಸೆಗಾಗಿ ವಿಶೇಷ ಸಿದ್ಧತೆ

fat

ಚೆನ್ನೈನ ಚರ್ನಿ ರಸ್ತೆಯಲ್ಲಿರೋ ಸೈಫಿ ಆಸ್ಪತ್ರೆಯಲ್ಲಿ ಜಗತ್ತಿನ ಅತ್ಯಂತ ಭಾರದ ಮಹಿಳೆಗೆ ಚಿಕಿತ್ಸೆ ನೀಡಲು ವಿಶೇಷ ಸಿದ್ಧತೆಗಳು ನಡೆಯುತ್ತಿವೆ. 500 ಕೆಜಿ ತೂಕವಿರುವ ಈಜಿಪ್ತ್ ನ ಮಹಿಳೆ ಎಮನ್ ಅಹ್ಮದ್, ಚೆನ್ನೈನ ಸೈಫಿ ಆಸ್ಪತ್ರೆಯಲ್ಲಿ ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾಳೆ. ಇದಕ್ಕಾಗಿ 3000 ಚದರ ಅಡಿ ವಿಸ್ತಾರವಾಗಿರುವ ಹೊಸ ವಿಭಾಗವನ್ನೇ ತೆರೆಯಲಾಗುತ್ತಿದೆ.

ಅಲ್ಲಿ ಆಪರೇಷನ್ ಥಿಯೇಟರ್, ಐಸಿಯು, ವೈದ್ಯರು ಮತ್ತು ಅಟೆಂಡರ್ ಗಳ ಕೋಣೆ, ಎರಡು ರೆಸ್ಟ್ ರೂಂ, ವಿಡಿಯೋ ಕಾನ್ಫರೆನ್ಸ್ ಗೆ ಪ್ರತ್ಯೇಕ ಕೋಣೆ ಎಲ್ಲವೂ ಇರಲಿದೆ. ಆಸ್ಪತ್ರೆಯ ನೆಲ ಮಹಡಿಯಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಮಹಿಳೆಯ ಚಿಕಿತ್ಸೆಗೆಂದೇ ಆಸ್ಪತ್ರೆಯವರು 2 ಕೋಟಿ ರೂಪಾಯಿ ಖರ್ಚು ಮಾಡಿ ವಿಶೇಷ ವ್ಯವಸ್ಥೆ ಮಾಡುತ್ತಿದ್ದಾರೆ.

hospital

ಎಮನ್ ಅಹ್ಮದ್ ಳ ತೂಕ ಹಾಗೂ ಗಾತ್ರವನ್ನು ಗಮನದಲ್ಲಿಟ್ಟುಕೊಂಡು ಎಲ್ಲವನ್ನೂ ವಿನ್ಯಾಸ ಮಾಡಲಾಗುತ್ತಿದೆ. ದೊಡ್ಡ ದೊಡ್ಡ ಬಾಗಿಲುಗಳನ್ನು ಅಳವಡಿಸಲಾಗ್ತಿದೆ. 7 x 7 ಅಡಿಯ ಬೆಡ್ ಹಾಕಲಾಗುತ್ತದೆ. ಸೈಫಿಯ ಬಾರಿಯಾಟ್ರಿಕ್ ತಜ್ಞ ಡಾ.ಮುಫಜಲ್ ಲಕ್ಡವಾಲಾ ಸೇರಿದಂತೆ ಕಾರ್ಡಿಯಾಲಜಿಸ್ಟ್, ಕಾರ್ಡಿಯಾಕ್ ಸರ್ಜನ್, ಎಂಡೊಕ್ರಿನೊಲಜಿಸ್ಟ್, ಒಬ್ಬರು ಚೆಸ್ಟ್ ಫಿಸಿಶಿಯನ್, ಇಬ್ಬರು ಇಂಟೆನ್ಸಿವಿಸ್ಟ್, ಮೂವರು ಅನಸ್ತೇಶಿಯಾ ತಜ್ಞರು ಚಿಕಿತ್ಸೆಗೆ ಸಹಕರಿಸಲಿದ್ದಾರೆ.

36 ವರ್ಷದ ಎಮನ್ ಕಳೆದ 25 ವರ್ಷಗಳಿಂದ ಕೈರೋದಲ್ಲಿರುವ ತನ್ನ ಮನೆಯಿಂದ ಹೊರಬಿದ್ದಿಲ್ಲ. ಹಾಸಿಗೆಯಿಂದ ಮೇಲಕ್ಕೆ ಏಳಲು ಸಹ ಅವಳಿಂದ ಸಾಧ್ಯವಾಗುತ್ತಿಲ್ಲ. ಇದ್ರಿಂದಾಗಿ ಡಯಾಬಿಟಿಸ್, ಅಸ್ತಮಾ, ಶ್ವಾಸಕೋಶ ಸಮಸ್ಯೆ, ಖಿನ್ನತೆ ಎಲ್ಲವೂ ಅವಳನ್ನು ಕಾಡುತ್ತಿದೆ. ಡಾ.ಮುಜಫಲ್, ಎಮನ್ ಳ ಕರುಣಾಜನಕ ಸ್ಥಿತಿ ಬಗ್ಗೆ ವಿವರಿಸಿ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದರು. ಅದಕ್ಕೆ ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದು, ಆಕೆಯ ಚಿಕಿತ್ಸೆಗಾಗಿ ಹಣಕಾಸಿನ ನೆರವು ಕೂಡ ದೊರೆತಿದೆ. ಅವಳನ್ನು ಚಿಕಿತ್ಸೆಗಾಗಿ ಭಾರತಕ್ಕೆ ಕರೆತರಲು ಸಹಾಯ ಮಾಡುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅಭಯ ನೀಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕರಾವಳಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಸರ್ಕಾರ ವಿಫಲವಾಗಿದೆಯೇ..?

    View Results

    Loading ... Loading ...