alex Certify
ಕನ್ನಡ ದುನಿಯಾ       Mobile App
       

Kannada Duniya

ಎದೆಹಾಲಿನಿಂದ ತಯಾರಾಗ್ತಿದೆ ಅಂದದ ಆಭರಣ

ತಾಯಿಯ ಎದೆಹಾಲು ಅಮೃತಕ್ಕೆ ಸಮಾನ ಅನ್ನೋ ಮಾತಿದೆ. ತಾಯಿ-ಮಗುವಿನ ಬಾಂಧವ್ಯಕ್ಕಂತೂ ಬೆಲೆ ಕಟ್ಟೋದು ಅಸಾಧ್ಯ. ಸಾಮಾನ್ಯವಾಗಿ ಮಕ್ಕಳ ಸವಿನೆನಪುಗಳನ್ನು ಹಾಗೇ ಇಡಲು ಅಮ್ಮಂದಿರು ಅವರು ಚಿಕ್ಕವರಿದ್ದಾಗ ತೊಡುತ್ತಿದ್ದ ಬಟ್ಟೆ, ಆಟಿಕೆಗಳನ್ನು ಜೋಪಾನ ಮಾಡ್ತಾರೆ.

ಮಕ್ಕಳ ಫೋಟೋವನ್ನು ಲಾಕೆಟ್ ನಲ್ಲಿ ಹಾಕಿಸಿಕೊಳ್ತಾರೆ. ಚೆನ್ನೈನ ಕಲಾವಿದೆ ಪ್ರೀತಿ ವಿಜಯ್ ತಾಯಂದಿರ ಎದೆಹಾಲಿನಿಂದ ಸುಂದರ ಆಭರಣಗಳನ್ನು ತಯಾರಿಸ್ತಿದ್ದಾರೆ. ಪ್ರೀತಿಗೂ 6 ವರ್ಷದ ಮಗುವಿದೆ. ವಿಶಿಷ್ಟ ಅಲಂಕಾರಿಕಾ ಸಾಮಗ್ರಿ ತಯಾರಿಸೋದ್ರಲ್ಲಿ ಮೊದಲಿನಿಂದ್ಲೂ ಅವರಿಗೆ ಆಸಕ್ತಿ ಇತ್ತು.

ಆದ್ರೆ ಈ ವಿಶಿಷ್ಟ ಐಡಿಯಾ ಹೊಳೆದಿದ್ದು ಮಾತ್ರ ಇತ್ತೀಚೆಗೆ. ಸೈನ್ಸ್ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದ ಸ್ನೇಹಿತೆಯರಿಂದ ಒಂದಷ್ಟು ಮಾಹಿತಿ ಪಡೆದುಕೊಂಡ್ರು. ಎದೆಹಾಲನ್ನು ಯಾವ ರೀತಿ ಆಭರಣವನ್ನಾಗಿ ಪರಿವರ್ತಿಸಬಹುದು ಅನ್ನೋ ತಂತ್ರಜ್ಞಾನವನ್ನೂ ಕಲಿತ್ರು.

ಈಗ ಎದೆಹಾಲಿನಿಂದ ಲಾಕೆಟ್, ಉಂಗುರ ಸೇರಿದಂತೆ ಹಲವು ಬಗೆಯ ಆಭರಣಗಳನ್ನು ಪ್ರೀತಿ ಸಿದ್ಧಪಡಿಸುತ್ತಿದ್ದಾರೆ. ಬೆಳ್ಳಿ ಮತ್ತು ಇತರ ಕೃತಕ ವಸ್ತುಗಳನ್ನು ಬಳಸಿ ತಯಾರು ಮಾಡ್ತಾರೆ. ಎದೆಹಾಲಿನಿಂದ ತಯಾರಾಗೋ ಆಭರಣಗಳ ಬೆಲೆ 1000-4000 ರೂಪಾಯಿವರೆಗೂ ಇದೆ.

ಪೆಂಡೆಂಟ್, ರಿಂಗ್, ಕಿವಿಯೋಲೆ, ಬ್ರೆಸ್ಲೆಟ್ ಹೀಗೆ ವಾರಕ್ಕೆ ಕಡಿಮೆ ಅಂದ್ರೂ 12 ಆರ್ಡರ್ ಸಿಗ್ತಿದೆ. ಆದ್ರೆ ವಾರಕ್ಕೆ 4-5 ಆಭರಣಗಳನ್ನು ಮಾತ್ರ ಮಾಡಲು ಸಾಧ್ಯ ಎನ್ನುತ್ತಾರೆ ಪ್ರೀತಿ. ಮಮ್ಮಾಸ್ ಮಿಲ್ಕಿ ಲವ್ ಅನ್ನೋ ಫೇಸ್ಬುಕ್ ಪೇಜ್ ಮೂಲಕ ಪ್ರೀತಿ ಈ ಉದ್ಯಮ ನಡೆಸ್ತಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...