alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಮಿ ಜೊತೆ ಸಿಕ್ಕಿ ಬಿದ್ಲು ಪತ್ನಿ….ಪತಿ ಮಾಡಿದ್ದೇನು?

ಇದು ರೀಲ್ ಅಲ್ಲ ರಿಯಲ್. ಮದುವೆಯಾಗಿ 5 ತಿಂಗಳ ನಂತ್ರ ತವರಿಗೆ ಬಂದ ಮಹಿಳೆಯೊಬ್ಬಳು ತನ್ನ ಪ್ರೇಮಿ ಜೊತೆ ಮೂರು ದಿನ ಕಳೆದಿದ್ದಾಳೆ. ಇದು ಗೊತ್ತಾಗಿ ಪಂಚಾಯತಿ ಸೇರಿಸಿದ ಸಂಬಂಧಿಕರು ಮಹಿಳೆಗೆ ಕೊನೆಯ ಆಯ್ಕೆ ಬಿಟ್ಟಿದ್ದಾರೆ. ಗಂಡನ ಬದಲು ಪ್ರೇಮಿ ಜೊತೆ ಹೋಗಲು ನಿರ್ಧರಿಸಿದ ಪತ್ನಿ ತೀರ್ಮಾನಕ್ಕೆ ಪತಿ ಕೂಡ ಜೈ ಎಂದಿದ್ದಾನೆ.

ಘಟನೆ ನಡೆದಿರುವುದು ಹಿಮಾಚಲ ಪ್ರದೇಶದ ಜೈಸಿಂಗ್ಪುರ ಗ್ರಾಮದಲ್ಲಿ. ಕಳೆದ 5 ತಿಂಗಳ ಹಿಂದೆ ಮದುವೆ ನಡೆದಿತ್ತು. 5 ತಿಂಗಳವರೆಗೂ ಪತ್ನಿ ಇನ್ನೊಬ್ಬಳನ್ನು ಪ್ರೀತಿ ಮಾಡ್ತಿದ್ದಾಳೆಂಬ ವಿಷ್ಯ ಗಂಡನಿಗೆ ತಿಳಿದಿರಲಿಲ್ಲ. 5 ತಿಂಗಳ ನಂತ್ರ ಮೊದಲ ಬಾರಿ ತವರಿಗೆ ಬಂದ ಪತ್ನಿ ತನ್ನ ಪ್ರೇಮಿಯನ್ನು ಮನೆಗೆ ಕರೆದಿದ್ದಾಳೆ.

ಊರಿನ ತುದಿಯಲ್ಲಿ ಬೈಕ್ ನಿಲ್ಲಿಸಿ ಮಹಡಿ ಮೇಲೆ ಬಂದ ಪ್ರೇಮಿ ಕಳೆದು ಮೂರು ದಿನಗಳಿಂದ ಆಕೆ ರೂಮಿನಲ್ಲಿದ್ದ ಎನ್ನಲಾಗಿದೆ. ಮೂರು ದಿನಗಳಿಂದ ಒಂದೇ ಸ್ಥಳದಲ್ಲಿ ಬೈಕ್ ಇರುವುದನ್ನು ನೋಡಿ ಅನುಮಾನಗೊಂಡ ಸ್ಥಳೀಯರು ವಿಚಾರಣೆ ಶುರುಮಾಡಿದ್ದಾರೆ. ಆಗ ಸತ್ಯ ಹೊರಬಿದ್ದಿದೆ. ಪ್ರಕರಣ ಪಂಚಾಯತಿ ಮೆಟ್ಟಿಲೇರಿದೆ. ಮಹಿಳೆ ಪ್ರೇಮಿ ಜೊತೆ ಹೋಗುವ ಪಟ್ಟು ಹಿಡಿದಿದ್ದಾಳೆ. ಪತ್ನಿ ಹಠಕ್ಕೆ ಶರಣಾದ ಪತಿ ತ್ಯಾಗ ಮಾಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...