alex Certify
ಕನ್ನಡ ದುನಿಯಾ       Mobile App
       

Kannada Duniya

ಅರ್ಧಕ್ಕೇ ಶಾಲೆ ಬಿಟ್ಟಿದ್ದ ಯುವಕ ಮಾಡಿದ್ದಾನೆ ಇಂಥಾ ಸಾಧನೆ

ಅರ್ಧಕ್ಕೇ ಶಾಲೆ ಬಿಟ್ಟಿದ್ದ ಚಂಡೀಗಢದ ಯುವಕ ಈಗ ಸೈಬರ್ ಭದ್ರತಾ ತಜ್ಞನಾಗಿದ್ದಾನೆ. ಅಷ್ಟೇ ಅಲ್ಲ ಏಷ್ಯಾದ 30 ವರ್ಷದೊಳಗಿನ 30 ಸಾಧಕರ ಫೋರ್ಬ್ಸ್ ಪಟ್ಟಿಯಲ್ಲೂ ಕಾಣಿಸಿಕೊಂಡಿದ್ದಾನೆ. ತ್ರಿಶ್ನೀತ್ ಅರೋರಾ ಎಂಟರ್ ಪ್ರೈಸ್ ಟೆಕ್ನಾಲಜಿ ವಿಭಾಗದಲ್ಲಿ ಸ್ಥಾನ ಪಡೆದಿದ್ದಾನೆ.

ತ್ರಿಶ್ನೀತ್ ಮೊಹಾಲಿಯಲ್ಲಿರುವ TAC Security ಎಂಬ ಕಂಪನಿಯ ಸಂಸ್ಥಾಪಕ ಹಾಗೂ ಸಿಇಓ. ಕಾರ್ಪೊರೇಟ್ ಕಂಪನಿಗಳು ಹಾಗೂ ಇತರ ಸಂಸ್ಥೆಗಳ ಸೈಬರ್ ಸೆಕ್ಯೂರಿಟಿಯಲ್ಲೇನಾದ್ರೂ ಲೋಪದೋಷಗಳಿದ್ದಲ್ಲಿ ಅದನ್ನು ಈ ಕಂಪನಿ ಪತ್ತೆ ಮಾಡುತ್ತದೆ, ಪರಿಹಾರ ಒದಗಿಸುತ್ತದೆ.

GO ಮ್ಯಾಗಝೀನ್ ನ 50 ಮೋಸ್ಟ್ ಇನ್ ಫ್ಲೂಯೆನ್ಷಿಯಲ್ ಯಂಗ್ ಇಂಡಿಯನ್ಸ್ ಪಟ್ಟಿಯಲ್ಲೂ ತ್ರಿಶ್ನೀತ್ ಗೆ ಸ್ಥಾನ ಸಿಕ್ಕಿತ್ತು. 8ನೇ ತರಗತಿಯಲ್ಲಿ ತ್ರಿಶ್ನೀತ್ ಫೇಲ್ ಆಗಿದ್ದ. ನಂತರ 12ನೇ ತರಗತಿಯಲ್ಲೂ ಫೇಲ್ ಆದ. ಮೊದಲಿನಿಂದ್ಲೂ ಆತನಿಗೆ ಓದಿನಲ್ಲಿ ಆಸಕ್ತಿಯೇ ಇರಲಿಲ್ಲವಂತೆ.

ತ್ರಿಶ್ನೀತ್ ದೇಶದ ಅತ್ಯಂತ ಕಿರಿಯ ಎಥಿಕಲ್ ಹ್ಯಾಕರ್ ಎನಿಸಿಕೊಂಡಿದ್ದ. ಬುದ್ಧಿವಂತ ಹ್ಯಾಕರ್ ಯಾವುದೇ ಬ್ಯಾಂಕ್ ಗೆ ಬೇಕಾದ್ರೂ ಕನ್ನಹಾಕಿ ಕೋಟ್ಯಂತರ ರೂಪಾಯಿ ಕದಿಯಬಹುದು. ಆದ್ರೆ ಮುಂದಾಗುವ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಅಂತಾ ಹ್ಯಾಕರ್ಸ್ ಗೆ ಎಚ್ಚರಿಕೆ ಸಹ ನೀಡಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...