alex Certify
ಕನ್ನಡ ದುನಿಯಾ       Mobile App
       

Kannada Duniya

ಹೃದ್ರೋಗಿಗಳ ಬಾಳಿಗೆ ಹೊಸ ಬೆಳಕು

stentsನವದೆಹಲಿ: ಹೃದಯ ರೋಗಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ, ಕಾರ್ಡಿಯಾಕ್ ಸ್ಟೆಂಟ್ ಗಳ ಬೆಲೆಯನ್ನು ಕೇಂದ್ರ ಸರ್ಕಾರ ಶೇ. 85 ರಷ್ಟು ಕಡಿಮೆ ಮಾಡಿತ್ತು.

ಬೆಲೆ ಇಳಿಕೆಯ ಲಾಭ ರೋಗಿಗಳಿಗೆ ಆಗಲಿದ್ದು, ಪ್ರತಿವರ್ಷ 5 ಲಕ್ಷ ಹೃದಯ ರೋಗಿಗಳಿಗೆ ಸುಮಾರು 5000 ಕೋಟಿ ರೂ. ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.

ಹೃದಯ ಸಂಬಂಧಿ ಕಾಯಿಲೆಯಲ್ಲಿ ಸ್ಟೆಂಟ್ ಗಳು ಮಹತ್ವದ ಪಾತ್ರ ವಹಿಸುತ್ತವೆ. ಕೇಂದ್ರ ಸರ್ಕಾರ ಸ್ಟೆಂಟ್ ಬೆಲೆ ಇಳಿಸಿ ಮಹತ್ವದ ನಿರ್ಧಾರ ಕೈಗೊಳ್ಳುತ್ತಲೇ ಸ್ಟೆಂಟ್ ತಯಾರಿಸುವ ಕಂಪನಿಗಳು ಉತ್ಪಾದನೆಯನ್ನು ಕಡಿಮೆ ಮಾಡಿ ಕೊರತೆ ಉಂಟುಮಾಡಲು ಮುಂದಾಗಿವೆ ಎಂಬ ದೂರುಗಳು ಕೇಳಿ ಬಂದಿವೆ.

ಇದನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣದ ಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರ, ಸ್ಟೆಂಟ್ ತಯಾರಿಸುವ ಕಂಪನಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಕಡ್ಡಾಯವಾಗಿ ಸ್ಟೆಂಟ್ ತಯಾರಿಕೆ ಮಾಡುವ ಜೊತೆಗೆ ಅಗತ್ಯವಿರುವ ಆಸ್ಪತ್ರೆಗಳಿಗೆ ಪೂರೈಕೆ ಮಾಡಬೇಕೆಂದು ತಿಳಿಸಿದೆ.

ಔಷಧ ಬೆಲೆ ನಿಯಂತ್ರಣ ಕಾನೂನಿನ ಅಡಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದ್ದು, ಕಾರ್ಡಿಯಾಕ್ ಸ್ಟೆಂಟ್ ಉತ್ಪಾದನೆ ಮತ್ತು ಪೂರೈಕೆಯನ್ನು ಕಡ್ಡಾಯಗೊಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...