alex Certify
ಕನ್ನಡ ದುನಿಯಾ       Mobile App
       

Kannada Duniya

CATನಲ್ಲಿ 4 ಬಾರಿ ನೂರಕ್ಕೆ ನೂರು ಅಂಕ ಪಡೆದ ಸಾಧಕ

IIMಗಳಲ್ಲಿ ಪ್ರವೇಶ ಗಿಟ್ಟಿಸಿಕೊಳ್ಳಲು ಅಭ್ಯರ್ಥಿಗಳು CAT ಪಾಸ್ ಮಾಡಬೇಕು. ಒಳ್ಳೆ ರ್ಯಾಂಕಿಂಗ್ ಬಂದ್ರೆ ಒಳ್ಳೆ ಕಾಲೇಜಿನಲ್ಲಿ ಸೀಟು ಸಿಗುತ್ತದೆ. ಮುಂಬೈನ ಪ್ಯಾಟ್ರಿಕ್ ಡಿಸೋಜಾ 2017ರ CAT ಪರೀಕ್ಷೆಯಲ್ಲಿ 100ಕ್ಕೆ ನೂರು ಅಂಕ ಪಡೆದಿದ್ದಾರೆ.

ಕಳೆದ 13 ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಅವರು ಕೋಚಿಂಗ್ ಕೊಡುತ್ತಿದ್ದಾರೆ. NIT ಅಲಹಾಬಾದ್ ನ ವಿದ್ಯಾರ್ಥಿಯಾಗಿದ್ದ ಪ್ಯಾಟ್ರಿಕ್ ಡಿಸೋಜಾ, 14ಕ್ಕೂ ಹೆಚ್ಚು ಬಾರಿ CAT ಪರೀಕ್ಷೆ ಬರೆದಿದ್ದಾರೆ.

ಅದರಲ್ಲಿ ನಾಲ್ಕು ಬಾರಿ ನೂರಕ್ಕೆ 100 ಅಂಕ ಪಡೆದಿರುವುದು ವಿಶೇಷ. 4 ವರ್ಷಗಳ ಕಾಲ ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡಿದ್ದ ಅವರು ನಂತರ ಶಿಕ್ಷಕ ವೃತ್ತಿಯನ್ನೇ ಆಯ್ದುಕೊಂಡ್ರು. ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡಲು ಅಕಾಡೆಮಿ ಆರಂಭಿಸಿದ್ರು.

ಇಷ್ಟು ಪ್ರತಿಭಾವಂತರಾಗಿದ್ದರೂ ಸರ್ಕಾರಿ ಅಥವಾ ಖಾಸಗಿ ಕಾಲೇಜುಗಳಲ್ಲಿ ಉನ್ನತ ಹುದ್ದೆಗಾಗಿ ಪ್ಯಾಟ್ರಿಕ್ ಅರ್ಜಿ ಕೂಡ ಸಲ್ಲಿಸಿಲ್ಲ. ಬದಲಾಗಿ ತಮ್ಮಲ್ಲಿರುವ ಪ್ರತಿಭೆಯನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...