alex Certify
ಕನ್ನಡ ದುನಿಯಾ       Mobile App
       

Kannada Duniya

ಟೆಲಿಮ್ಯಾಟಿಕ್ಸ್ ಇದ್ರೆ ವಾಹನ ಚಾಲಕರಿಗಿಲ್ಲ ಭಯ..!

ಒಬ್ಬಂಟಿಯಾಗಿ ಕಾರು ಚಲಾಯಿಸೋದು ಅಂದ್ರೆ ಬೇಸರ ಮಾತ್ರವಲ್ಲ, ಅಪಾಯಕಾರಿಯೂ ಹೌದು. ನಡುರಸ್ತೆಯಲ್ಲಿ ಕಾರು ಕೆಟ್ಟು ನಿಂತ್ರೆ ಚಾಲಕ ಪರದಾಡಬೇಕಾಗುತ್ತದೆ. ಅದರಲ್ಲೂ ಹಳ್ಳಿಗಳಲ್ಲಿ, ಹೆಚ್ಚು ಜನ ಸಂಚಾರವಿಲ್ಲದ, ಮೊಬೈಲ್ ಸಿಗ್ನಲ್ ಕೂಡ ಲಭ್ಯವಿಲ್ಲದ ಸ್ಥಳಗಳಲ್ಲೇನಾದ್ರೂ ಕಾರು ಕೆಟ್ಟು ಹೋದ್ರೆ ದೇವರೇ ಗತಿ.

ಆದ್ರೆ ಇನ್ಮೇಲೆ ನೀವು ಭಯಪಡಬೇಕಾಗಿಲ್ಲ. ಚಾಲಕರ ಸುರಕ್ಷತೆಗಾಗಿಯೇ ಕಾರುಗಳಲ್ಲಿ ಹೊಸ ತಂತ್ರಜ್ಞಾನ ಅಳವಡಿಸಲಾಗ್ತಿದೆ. ವೆಹಿಕಲ್ ಟೆಲಿಮ್ಯಾಟಿಕ್ಸ್ ಅನ್ನೋ ಈ ಡಿವೈಸ್ ಅನ್ನು ಕಾರಿನಲ್ಲಿ ಅಳವಡಿಸಿಕೊಂಡ್ರೆ ಯಾವುದೇ ಭಯವಿಲ್ಲ. ಯಾಕಂದ್ರೆ ರಸ್ತೆಯ ಸ್ಥಿತಿಗತಿ, ನೇವಿಗೇಶನ್ ಹೀಗೆ ವಾಹನದ ಎಲ್ಲಾ ವಿಷಯಗಳನ್ನೂ ಇದು ತಲುಪಿಸಬಲ್ಲದು.

ಕಣ್ಣುಗಳ ಚಲನೆ, ಆಕಳಿಕೆ, ಮುಖದ ಬದಲಾವಣೆ ಎಲ್ಲವನ್ನೂ ಈ ಡಿವೈಸ್ ಗುರುತಿಸಬಲ್ಲದು. ನಿಮ್ಮ ಸ್ಮಾರ್ಟ್ ವಾಚ್ ಗೆ ಅಲರ್ಟ್ಸ್ ಕೂಡ ಕಳಿಸುತ್ತದೆ. ನೀವೇನಾದ್ರೂ ಅಪಾಯಕ್ಕೆ ಸಿಲುಕಿಹಾಕಿಕೊಂಡಲ್ಲಿ ಸಿಗ್ನಲ್ ಕಳಿಸುತ್ತದೆ. ಇನ್ಫೋಸಿಸ್, ಎಚ್ ಸಿ ಎಲ್, ಕಾಗ್ನಿಜಂಟ್ ಮತ್ತು ವಿಪ್ರೋ ಟೆಲಿಮ್ಯಾಟಿಕ್ಸ್ ನ ಹೊಸ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುತ್ತಿವೆ.

ಅಪಘಾತ, ದಿಢೀರ್ ಅನಾರೋಗ್ಯ ಅಥವಾ ಚಾಲಕನಿಗೆ ಪ್ರಜ್ಞಾಹೀನ ಸ್ಥಿತಿ ಎದುರಾದ್ರೆ ಈ ಬಗ್ಗೆ ತುರ್ತು ಸಂದೇಶವನ್ನು ಟೆಲಿಮ್ಯಾಟಿಕ್ಸ್ ರವಾನಿಸಬಲ್ಲದು. ಸದ್ಯದಲ್ಲೇ ಭಾರತದ ಕಾರುಗಳಿಗೂ ಇದನ್ನು ಅಳವಡಿಸುವ ಬಗ್ಗೆ ಚಿಂತನೆ ನಡೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...