alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಥವರನ್ನು ಇಷ್ಟ ಪಡ್ತಾರಂತೆ ಹುಡುಗೀರು

cook-m

ಹಿಂದೆಲ್ಲಾ ಹುಡುಗಿ ಆಯ್ಕೆ ಮಾಡಿಕೊಳ್ಳುವಾಗ ಅಡುಗೆ ಬರುತ್ತಾ ಎಂದು ಕೇಳುವುದು ಸಾಮಾನ್ಯ ವಿಷಯವಾಗಿತ್ತು. ಈಗ ಕಾಲ ಬದಲಾಗಿದೆ. ಮದುವೆಯಾಗುವ ಹುಡುಗನಿಗೆ ಅಡುಗೆ ಮಾಡಲು ಗೊತ್ತಿರಬೇಕು ಎನ್ನುತ್ತಾರೆ ಈಗಿನ ಹುಡುಗಿಯರು.

ಮ್ಯಾಚ್ ಮೇಕಿಂಗ್ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಹುಡುಗಿಯರು ತಮಗೆ ಎಂತಹ ಗಂಡನಿರಬೇಕೆಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ,  ಸಂಬಂಧದಲ್ಲಿ ಬಯಸುವುದೇನು ಎಂದು ನಡೆಸಿದ ಆನ್ ಲೈನ್ ಸಮೀಕ್ಷೆಯಲ್ಲಿ 25 ರಿಂದ 34 ವರ್ಷ ವಯೋಮಿತಿಯ 6800 ಕ್ಕೂ ಅಧಿಕ ಮಂದಿ ಭಾಗವಹಿಸಿದ್ದು, ಅವರಲ್ಲಿ ಶೇ. 47 ರಷ್ಟು ಯುವತಿಯರಿದ್ದರು.

ಮೊದಲಿಗೆ ನೋಡಿದಾಗ ಇಷ್ಟವಾಗಿದ್ದೇಕೆ ಎಂದು ಕೇಳಲಾದ ಪ್ರಶ್ನೆಗೆ ಶೇ. 23 ರಷ್ಟು ಮಂದಿ ಸಮಾನ ಮನಸ್ಕರಾದ ಕಾರಣವನ್ನು ನೀಡಿದ್ದಾರೆ. ಶೇ. 64 ರಷ್ಟು ಮಂದಿ ಲುಕ್ ನೋಡಿ ಇಷ್ಟಪಟ್ಟಿದ್ದಾಗಿ ಹೇಳಿಕೊಂಡಿದ್ದು, ಶೇ. 53 ರಷ್ಟು ಮಂದಿ ವ್ಯಕ್ತಿತ್ವದ ಬಗ್ಗೆ ಮೆಚ್ಚಿಕೊಂಡಿದ್ದಾರೆ.

ಇನ್ನು ನಿಮ್ಮ ಸಂಗಾತಿಯಾಗುವ ಹುಡುಗನಿಂದ ಏನನ್ನು ನಿರೀಕ್ಷಿಸುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಶೇ. 26 ರಷ್ಟು ಯುವತಿಯರು ಅಡುಗೆ ಬರುತ್ತಾ ಎಂದು ತಿಳಿಯಲು ಬಯಸುತ್ತಾರೆ. ಫ್ಯಾಮಿಲಿ ಹಿನ್ನಲೆ, ನನಗೆ ಸಪೋರ್ಟಿವ್ ಆಗಿರ್ತಿರಾ ಎಂದೆಲ್ಲಾ ಕೇಳ್ತಾರೆ,

ಹುಡುಗರಲ್ಲಿ ಶೇ. 19 ರಷ್ಟು ಮಂದಿ ಅಡುಗೆ ಬರುತ್ತಾ ಎಂದು ಕೇಳಿದರೆ, ಶೇ. 36 ರಷ್ಟು ಮಂದಿ ತನ್ನ ಫ್ಯಾಮಿಲಿ ಜೊತೆ ವಾಸವಾಗಿರಲು ಇಷ್ಟವಿದೆಯಾ ಎಂದು ಕೇಳ್ತಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...