alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಳಕಿನ ವೇಗದಲ್ಲಿ ಫೋಟೋ ಕ್ಲಿಕ್ಕಿಸುವ ಕ್ಯಾಮರಾ

camera-lens-representational-picವಾಶಿಂಗ್ಟನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಪ್ರಸ್ತುತ ಕ್ಯಾಮರಾಗಳಿಗಿಂತ ನೂರು ಪಟ್ಟು ಹೆಚ್ಚು ವೇಗದಲ್ಲಿ ಫೋಟೋ ಕ್ಲಿಕ್ಕಿಸುವ ಸಾಮರ್ಥ್ಯದ ‘ಕಪ್’ (Compressed Ultra fast Photography) ಕ್ಯಾಮರಾ ತಯಾರಿಸಿದ್ದಾರೆ.

ವಾಶಿಂಗ್ಟನ್ ವಿಶ್ವವಿದ್ಯಾಲಯದ ಲಿಹೋಂಗ್ ವಿ ವಾಂಗ್ ಅವರ ಮುಂದಾಳತ್ವದಲ್ಲಿ  ವಿಜ್ಞಾನಿಗಳ ತಂಡ ಮೊಟ್ಟಮೊದಲ ಬಾರಿಗೆ ಇಂತ ಕ್ಯಾಮರಾ ತಯಾರಿಸಿದ್ದಾರೆ. ಇದು ಪ್ರತಿ ಸೆಕೆಂಡಿಗೆ 100 ಮೀಟರ್ ಗಿಂತಲೂ ಹೆಚ್ಚಿನ ವೇಗದಲ್ಲಿ ಫೋಟೋ ಕ್ಲಿಕ್ಕಿಸುವ ಸಾಮರ್ಥ್ಯ ಹೊಂದಿದೆ. ಇದು ನರಗಳಿಗೆ, ನಕ್ಷತ್ರಗಳಿಗೆ ಮತ್ತು ನಾಸಾದಂತಹ ವೈಜ್ಞಾನಿಕ ಸಂಶೋಧನೆಗಳಿಗೆ ಸಂಬಂಧಿಸಿದ ಘಟನೆಗಳನ್ನು ಕೂಡ ಕ್ಲಿಕ್ಕಿಸಬಹುದೆಂದು ಅಂದಾಜಿಸಲಾಗಿದೆ.

ಕಪ್ ಕ್ಯಾಮರಾದ ಸಹಾಯದಿಂದ ತೀವ್ರಗತಿಯಲ್ಲಿ ನಡೆಯುವ ಕೆಲವು ಘಟನೆಗಳನ್ನು, ಕ್ರಿಯೆಗಳನ್ನು ಅಧ್ಯಯನ ಮಾಡಬಹುದಾಗಿದೆ. ಅತ್ಯಂತ ಕಡಿಮೆ ಬೆಳಕಿನಲ್ಲಿಯೂ ಸಹ ಇದು ಫೋಟೋ ತೆಗೆಯುತ್ತದೆ. ಇದಕ್ಕೆ ಯಾವುದೇ ಲೇಸರ್ ಅಥವಾ ಹೊರಗಿನ ಬೆಳಕಿನ ಅವಶ್ಯಕತೆ ಇರುವುದಿಲ್ಲ. ಈ ಕ್ಯಾಮರಾವನ್ನು ಬಳಸಿಕೊಂಡು ವಿಜ್ಞಾನಿಗಳು ಜೀವಂತ ಪ್ರಾಣಿಗಳ ಮೆದುಳಿನ ನರಗಳ ಸ್ಥಿತಿಗತಿಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...