alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಬ್ಬನ್ನು ಹೀರಿಕೊಳ್ಳುತ್ತೆ ಈ ಪ್ಲೇಟ್ !

original_absorbplate

ಶರೀರದಲ್ಲಿನ ಬೊಜ್ಜು ಕರಗಿಸಲು ಅನೇಕ ರೀತಿಯ ಉಪಾಯಗಳು ದಿನೇ ದಿನೇ ಪತ್ರಿಕೆಯಲ್ಲಿ ಕಾಣುತ್ತವೆ. ಆಹಾರದಲ್ಲಿ ಮಿತಿ ಇರಬೇಕು, ಕೊಬ್ಬಿನ ಆಹಾರ ತಿನ್ನಬಾರದು, ಎಣ್ಣೆ ತಿನ್ನಬಾರದು ಇಂತ ಹತ್ತು ಹಲವು ನಿಯಮಗಳನ್ನು ಜನರು ಪಾಲಿಸುತ್ತಾರೆ.

ಇಲ್ಲೊಂದು ಪ್ಲೇಟ್ ಇದೆ ನೋಡಿ. ಇದು ಆಹಾರದಲ್ಲಿನ ಕೊಬ್ಬನ್ನು ಹೀರುವ ‘ಅಬ್ಸಾರ್ಬ್ ಪ್ಲೇಟ್’. ಇದನ್ನು ಥಾಯ್ಲೆಂಡಿನ ಹೆಲ್ತ್ ಪ್ರೊಮೋಶನ್ ಫೌಂಡೇಷನ್ ಸಿದ್ಧಪಡಿಸಿದೆ. ಈ ಪ್ಲೇಟ್ ಬೊಜ್ಜಿನ ಸಮಸ್ಯೆಯನ್ನು ನಿವಾರಿಸುವುದರ ಮೂಲಕ ರಕ್ತದೊತ್ತಡ, ಮಧುಮೇಹ, ಹೃದಯದ ಖಾಯಿಲೆಯನ್ನು ತಡೆಗಟ್ಟುತ್ತದೆ.

ಹೆಸರೇ ಸೂಚಿಸುವಂತೆ ಇದು ತೈಲವನ್ನು ಅಬ್ಸಾರ್ಬ್ ಮಾಡುತ್ತದೆ ಅಂದರೆ ಹೀರಿಕೊಳ್ಳುತ್ತದೆ. ಈ ತಟ್ಟೆಯಲ್ಲಿ ಆಹಾರ ಹಾಕಿದ ಕೂಡಲೇ ಅದು 30 ಕ್ಯಾಲೊರಿಯಷ್ಟು ಕೊಬ್ಬನ್ನು ಹೀರಿಬಿಡುತ್ತದೆ. ತನ್ಮೂಲಕ ಆಹಾರದಲ್ಲಿನ ಎಣ್ಣೆ ಅಥವಾ ಜಿಡ್ಡಿನ ಅಂಶ ಹೊಟ್ಟೆ ಸೇರುವುದನ್ನು ತಡೆಯುತ್ತದೆ.

‘ಅಬ್ಸಾರ್ಬ್ ಪ್ಲೇಟ್’ ನಲ್ಲಿ 500 ಸಣ್ಣ ರಂಧ್ರಗಳನ್ನು ಕೊರೆಯಲಾಗಿದೆ. ಈ ರಂಧ್ರಗಳೇ ಕ್ಯಾಲೊರಿಯನ್ನು ಹೀರಿಕೊಳ್ಳುತ್ತವೆ. ಥಾಯ್ಲೆಂಡಿನ ಜನ ಎಣ್ಣೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುತ್ತಾರಂತೆ. ಇದರಿಂದ ಅಲ್ಲಿನ ಜನರು ಕೊಬ್ಬಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೆಚ್ಚಿನ ಎಣ್ಣೆಯನ್ನು ಬಳಸಿದ ಆಹಾರವನ್ನೂ ತಿನ್ನಬೇಕು, ಕೊಬ್ಬನ್ನೂ ಕರಗಿಸಬೇಕು ಎಂಬ ನಿಟ್ಟಿನಲ್ಲಿ ಈ ‘ಅಬ್ಸಾರ್ಬ್ ಪ್ಲೇಟ್’ ರೆಡಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...