alex Certify
ಕನ್ನಡ ದುನಿಯಾ       Mobile App
       

Kannada Duniya

ಆನ್ಲೈನ್ ನಲ್ಲಿ ಸಿಗ್ತಿದೆ ಶುದ್ಧ ಗಾಳಿ…!

ರಾಷ್ಟ್ರ ರಾಜಧಾನಿ ದೆಹಲಿ ಮಾಲಿನ್ಯ ಅಪಾಯದ ಮಟ್ಟ ತಲುಪಿದೆ. ಮಾಲಿನ್ಯ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಿದ್ಧವಾಗ್ತಿದೆ. ದೆಹಲಿ ವಾತಾವರಣದಲ್ಲಿ ವಿಷ ಸೇರ್ಪಡೆಯಾಗಿರುವುದ್ರಿಂದ ಮಾಸ್ಕ್ ಗಳಿಗೆ ಬೇಡಿಕೆ ಹೆಚ್ಚಾಗಿದೆ. ದೆಹಲಿಯಲ್ಲಿ ಮಾಲಿನ್ಯ ಹೆಚ್ಚಾಗ್ತಿದ್ದಂತೆ ಆನ್ಲೈನ್ ನಲ್ಲಿ ಶುದ್ಧ ಗಾಳಿಯ ಮಾರಾಟ ಜೋರಾಗಿದೆ.

ಶುದ್ಧ ಗಾಳಿ ಈಗ ಆನ್ಲೈನ್ ನಲ್ಲಿ ಮಾರಾಟಕ್ಕಿದೆ. ದೆಹಲಿ ಮಾಲಿನ್ಯದಿಂದಾಗಿ ಶ್ರೀಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಆದ್ರೆ ಕೆಲವರು ಇದನ್ನೇ ತಮ್ಮ ಲಾಭಕ್ಕೆ ಬಳಸಿಕೊಂಡಿದ್ದಾರೆ. ಶುದ್ಧ ಗಾಳಿ ವ್ಯಾಪಾರ ಆರಂಭಿಸಿದ್ದಾರೆ. ಚೀನಾ ನಂತ್ರ ಈಗ ಭಾರತದಲ್ಲೂ ಶುದ್ಧ ಗಾಳಿ ಬ್ಯುಸಿನೆಸ್ ಶುರುವಾಗಿದೆ.

ಕೆನಡಾ ವಿಟಲಿಟಿ ಏರ್ (Vitality Air)ಸ್ವಚ್ಛ ಗಾಳಿಯನ್ನು ಭಾರತದಲ್ಲಿ ಮಾರಾಟ ಮಾಡಲು ಶುರುಮಾಡಿದೆ. ಅಮೆಜಾನ್ ಮೂಲಕ ನೀವು 8 ಲೀಟರ್ ವಿಟಲಿಟಿ ಏರ್ ಖರೀದಿ ಮಾಡಬಹುದಾಗಿದೆ. ಇದಕ್ಕೆ ನೀವು 1200 ರೂಪಾಯಿ ನೀಡಬೇಕಾಗುತ್ತದೆ. ಸ್ವಚ್ಛ ಗಾಳಿ ಮಾರಾಟ ಮೊದಲು ಚೀನಾದ ಬೀಜಿಂಗ್ ನಲ್ಲಿ ಶುರುವಾಗಿತ್ತು. ಈಗ ಭಾರತ ಸೇರಿದಂತೆ ಅಪಘಾನಿಸ್ತಾನ, ಇರಾನ್ ನಲ್ಲಿಯೂ ಶುದ್ಧ ಗಾಳಿ ಮಾರಾಟಕ್ಕಿದೆ.

ಸ್ವಚ್ಛ ಗಾಳಿ ಮಾರಾಟದಲ್ಲಿ ಕೆನಡಾ ಹಾಗೂ ಸ್ವಿಜರ್ಲ್ಯಾಂಡ್ ನ ಕೆಲವರು ಕೈ ಜೋಡಿಸಿದ್ದಾರೆ. ಮಾಲಿನ್ಯದಿಂದ ಜನರನ್ನು ರಕ್ಷಿಸಲು ಶುದ್ಧ ಗಾಳಿ ನೀಡುತ್ತಿರುವುದಾಗಿ ಕಂಪನಿ ಹೇಳಿದೆ. ಬೇರೆ ಬೇರೆ ದೇಶಗಳಲ್ಲಿ ಇದ್ರ ಬೆಲೆ ಬೇರೆ ಬೇರೆ ಇದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...