alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿ ವಿಮಾನಕ್ಕಿಂತ ದುಬಾರಿ ಎತ್ತಿನ ಗಾಡಿ ಸವಾರಿ…!

ಎಲ್ಲಿಯ ಎತ್ತಿನ ಗಾಡಿ, ಎಲ್ಲಿಯ ವಿಮಾನ. ಎತ್ತಿನ ಗಾಡಿಗೂ ವಿಮಾನಕ್ಕೂ ಸಾಟಿಯೇ ಎಂದುಕೊಳ್ಳಬೇಡಿ. ಇಲ್ಲಿನ ಎತ್ತಿನಗಾಡಿಗಳಲ್ಲಿ ಸವಾರಿ ಮಾಡುವವರು ವಿಮಾನಕ್ಕಿಂತ ಹೆಚ್ಚಿನ ಪ್ರಯಾಣ ದರವನ್ನು ಭರಿಸಬೇಕಾಗುತ್ತದೆ. ಅದಕ್ಕೆ ಕಾರಣವೇನು ಗೊತ್ತಾ…?

ಮಧ್ಯಪ್ರದೇಶದ ದೇವಾಲಯವೊಂದಕ್ಕೆ ಎತ್ತಿನಗಾಡಿಯಲ್ಲಿ ಭಕ್ತರು ಪ್ರಯಾಣ ಬೆಳೆಸುತ್ತಾರೆ. ಈ ಪ್ರಯಾಣದ ದೂರ 6 ಕಿಲೋ ಮೀಟರ್ ಮಾತ್ರ. ಆದರೆ, ಪ್ರಯಾಣ ದರ 6,000 ರೂ. ಇಂದೋರ್ ನಿಂದ ನವದೆಹಲಿಗೆ ವಿಮಾನದಲ್ಲಿ ಪ್ರಯಾಣಿಸಲು ಇಷ್ಟು ಮೊತ್ತವಿಲ್ಲ. ಆದರೆ, ಕೇವಲ 6 ಕಿಲೋ ಮೀಟರ್ ಪ್ರಯಾಣಕ್ಕೆ 6,000 ರೂ. ಗಳನ್ನು ಕೊಟ್ಟು ರತ್ಲಂನಿಂದ ಬೈಬ್ರೂದ್ ಗ್ರಾಮದ ಜೈನ ಮಂದಿರಕ್ಕೆ ಭಕ್ತರು ಹೋಗುತ್ತಾರೆ. ಜೈನರ ಪವಿತ್ರ ಕ್ಷೇತ್ರವಾಗಿರುವ ಈ ಗ್ರಾಮದ ವೃಷಭದೇವ ಮಂದಿರಕ್ಕೆ ವರ್ಷದ ಮೊದಲ ಅಮಾವಾಸ್ಯೆಯಂದು ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ಕೊಡುತ್ತಾರೆ.

ಎತ್ತಿನಗಾಡಿಯಲ್ಲಿ  ಪ್ರಯಾಣಿಸಿ ಸ್ವಾಮಿಯ ದರ್ಶನ ಪಡೆದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇಲ್ಲಿಗೆ ಬರುವ ಭಕ್ತರದ್ದಾಗಿದ್ದು, 6 ಕಿಲೋ ಮೀಟರ್ ದೂರದ ಪ್ರಯಣಕ್ಕೆ ಮೊದಲೇ ಎತ್ತಿನ ಗಾಡಿಗಳನ್ನು ಬುಕ್ ಮಾಡಿರುತ್ತಾರೆ. 2000-8000 ರೂ. ವರೆಗೆ ಪ್ರಯಾಣಕ್ಕೆ ಗಾಡಿಗಳನ್ನು ಬುಕ್ ಮಾಡಿ ಅದರಲ್ಲಿಯೇ ಪ್ರಯಾಣಿಸಿ ಸ್ವಾಮಿಯ ದರ್ಶನ ಪಡೆದುಕೊಳ್ಳುತ್ತಾರೆ. ಇದಕ್ಕಾಗಿ ನೂರಾರು ಗಾಡಿಗಳು ಪ್ರತಿವರ್ಷ ಬರುತ್ತವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...