alex Certify
ಕನ್ನಡ ದುನಿಯಾ       Mobile App
       

Kannada Duniya

20 ವರ್ಷಗಳ ಬಳಿಕ ನಡೆಯುತ್ತಿದೆ ಎತ್ತಿನ ಗಾಡಿ ರೇಸ್….

bullock-cart-4

ತೆಲಂಗಾಣದ ಇಂದ್ರವೆಲ್ಲಿಯಲ್ಲಿ 20 ವರ್ಷಗಳ ನಂತರ ಎತ್ತಿನ ಗಾಡಿ ಸ್ಪರ್ಧೆ ಮತ್ತೆ ಆರಂಭವಾಗ್ತಿದೆ. ನಗೋಬಾ ಜಾತ್ರೆಯಲ್ಲಿ ಈ ಬಾರಿ ಎತ್ತಿನ ಗಾಡಿಗಳ ಓಟವನ್ನು ಜನರು ಕಣ್ತುಂಬಿಕೊಳ್ಳಬಹುದು. ಇಲ್ಲಿನ ಆದಿವಾಸಿಗಳು ಎತ್ತಿನ ಗಾಡಿ ಸ್ಪರ್ಧೆಗೆ ಅವಕಾಶ ಮಾಡಿಕೊಡುವಂತೆ ಐಟಿಡಿಎ ಅಧಿಕಾರಿಗಳಿಗೆ ಮನವಿ ಮಾಡಿದ್ದರು, ಅದಕ್ಕವರು ಸಮ್ಮತಿಸಿದ್ದಾರೆ.

ಕೆಲ್ಸಾಪುರ ಗ್ರಾಮದಲ್ಲಿರುವ ನಗೋಬಾ ದೇವಸ್ಥಾನದಲ್ಲಿ ಜನವರಿ 30ರಂದು ಎತ್ತಿನ ಗಾಡಿಗಳ ರೇಸ್ ನಡೆಯಲಿದೆ. ಜನವರಿ 27 ರಿಂದ ಆರಂಭವಾಗುವ ನಗೋಬಾ ಜಾತ್ರೆ ಫೆಬ್ರವರಿ 6 ರವರೆಗೂ ನಡೆಯುವುದು ವಿಶೇಷ. ಜಾತ್ರೆಗೆ ಬರುವ ಜನರಿಗೆಲ್ಲ ಎತ್ತಿನ ಗಾಡಿ ಸ್ಪರ್ಧೆ ಮನರಂಜನೆ ಒದಗಿಸಲಿದೆ.

ಮೈನವಿರೇಳಿಸುವ ಈ ರೇಸ್ ಅನ್ನು ಕಣ್ತುಂಬಿಕೊಳ್ಳಲು ಮಹಾರಾಷ್ಟ್ರ, ಚತ್ತೀಸ್ಗಢ, ಮಧ್ಯಪ್ರದೇಶ, ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ ಸಾವಿರಾರು ಮಂದಿ ಆಗಮಿಸ್ತಾರೆ. ಎತ್ತಿನ ಗಾಡಿ ಹಾಗೂ ಎತ್ತುಗಳ ಜೊತೆ ಆದಿವಾಸಿಗಳಿಗೆ ಭಾವನಾತ್ಮಕ ಸಂಬಂಧವಿದೆ. ದೂರ ದೂರ ಪ್ರಯಾಣಕ್ಕೂ ಅವರು ಎತ್ತಿನ ಗಾಡಿಗಳನ್ನೇ ಅವಲಂಬಿಸಿದ್ದಾರೆ. ಹಾಗಾಗಿ ಈ ಸ್ಪರ್ಧೆ ಕೂಡ ಅವರ ಪಾಲಿಗೆ ಅತ್ಯಂತ ಮಹತ್ವದ್ದು.

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...