alex Certify
ಕನ್ನಡ ದುನಿಯಾ       Mobile App
       

Kannada Duniya

ಗಂಡನ ಮನೆಗೆ ಹೋಗುವ ಮುನ್ನ ಯೋಗ ಮಾಡಿದ್ಲು ವಧು

ಪರೀಕ್ಷೆ ಅಥವಾ ಚುನಾವಣೆ ಕಾರಣಕ್ಕೆ ಮದುವೆ ಮೆರವಣಿಗೆ ವಿಳಂಬವಾದ ಘಟನೆ ನಡೆದಿದೆ. ಆದ್ರೆ ಮಧ್ಯಪ್ರದೇಶದ ರೈಸೇನ್ ಜಿಲ್ಲೆಯಲ್ಲಿ ಆಶ್ಚರ್ಯಕರ ಘಟನೆ ನಡೆದಿದೆ. ವಧು ಮದುವೆ ಮುಗಿಸಿದ ನಂತ್ರ ಕ್ರೀಡಾ ಉಡುಪಿನಲ್ಲಿ ಯೋಗ ಮಾಡಿದ್ದಾಳೆ. ಇದ್ರಿಂದಾಗಿ ಮದುವೆ ದಿಬ್ಬಣ ವರನ ಮನೆ ತಲುಪುವುದು ಲೇಟಾಗಿದೆ.

ಶುಕ್ರವಾರ ರಾತ್ರಿ ನರಪುರದ ಸೀಮಾ ಎಂಬಾಕೆ ಮದುವೆ ನಡೆದಿದೆ. ಶನಿವಾರ ಸೀಮಾ ತಾಯಿ ಮನೆ ಬಿಟ್ಟು ಗಂಡನ ಮನೆಗೆ ಹೋಗಬೇಕಿತ್ತು. ಆದ್ರೆ ಯೋಗದಲ್ಲಿ ಎಂಎ ಮಾಡುತ್ತಿರುವ ಸೀಮಾ ಶನಿವಾರ ಯೋಗ ಪ್ರ್ಯಾಕ್ಟಿಕಲ್ ನಲ್ಲಿ ಪಾಲ್ಗೊಳ್ಳಬೇಕಿತ್ತು. ಪತಿ ಅನುಮತಿ ಪಡೆದ ಸೀಮಾ ಯೋಗ ಪ್ರ್ಯಾಕ್ಟಿಕಲ್ ನಲ್ಲಿ ಪಾಲ್ಗೊಂಡಿದ್ದಾಳೆ.

ಮನೆಯವರನ್ನು ಒಪ್ಪಿಸಿದ ವರ 4 ಗಂಟೆಗಳ ಕಾಲ ಸೀಮಾಗಾಗಿ ಕಾದಿದ್ದಾನೆ. ಶನಿವಾರ ಬೆಳಿಗ್ಗೆ ವಿಶ್ವವಿದ್ಯಾನಿಲಯಕ್ಕೆ ಹೋಗಿ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದ ಸೀಮಾ ಮೂರು ಗಂಟೆ ನಂತ್ರ ಮನೆಗೆ ಬಂದಿದ್ದಾಳೆ. ಆ ನಂತ್ರ ಪದ್ಧತಿ ಪ್ರಕಾರ ಆಕೆಯ ಬೀಳ್ಕೊಡುಗೆ ನಡೆದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...