alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವಧುವನ್ನು ಯಾರೂ ಬೇಕಾದ್ರೂ ಕೆಣಕಬಹುದು,ಆದ್ರೆ….

sad-bride-60

ವಿಶ್ವದ ಕೆಲವು ಜನರ ವರ್ತನೆಗಳು ದಿಗ್ಭ್ರಮೆ ಹುಟ್ಟಿಸುವಂತಿರುತ್ತೆ. ಇಂತಹದ್ದೇ ಒಂದು ಘಟನೆ ಚೀನಾದಲ್ಲಿ ನಡೆದಿದೆ. ಮದುವೆಯಲ್ಲಿ ವಧು ನಡೆದುಕೊಂಡ ರೀತಿ ವಿಶ್ವದಾದ್ಯಂತ ಸುದ್ದಿಯಾಗ್ತಿದೆ.

ಚೀನಾದಲ್ಲಿ ನಡೆದ ಮದುವೆಯೊಂದಕ್ಕೆ ಬಂದ ಸಂಬಂಧಿಕರು, ಸ್ನೇಹಿತರು ವಧುವಿನ ವರ್ತನೆ ನೋಡಿ ಆಶ್ಚರ್ಯಗೊಂಡಿದ್ದರು. ಮದುವೆಗೆ ಬಂದ ಎಲ್ಲರೂ ತನ್ನನ್ನು ಸ್ಪರ್ಶಿಸಬಹುದು ಹಾಗೆ ಫ್ಲರ್ಟ್ ಮಾಡಬಹುದೆಂದು ವಧು ಹೇಳಿದ್ದು ಇದಕ್ಕೆ ಕಾರಣ. ವಧು ಈ ವಿಷಯವನ್ನು ಹೇಳ್ತಿದ್ದಂತೆ ನೆರೆದಿದ್ದವರು ಆಕೆಯನ್ನು ಸ್ಪರ್ಶಿಸಲು ಕ್ಯೂನಲ್ಲಿ ನಿಂತಿದ್ದರು.

ಒಬ್ಬರಾದ ಮೇಲೆ ಒಬ್ಬರು ಬಂದು ಆಕೆಯನ್ನು ಸ್ಪರ್ಶಿಸಿ, ಹಣ ನೀಡಿ ಹೋಗ್ತಾ ಇದ್ರು. ಹನಿಮೂನ್ ಗೆ ಹೋಗಲು ವಧುವಿಗೆ ಹಣ ಬೇಕಾಗಿತ್ತಂತೆ. ಹಾಗಾಗಿ ವಧು ಈ ರೀತಿ ನಡೆದುಕೊಂಡಿದ್ದಾಳಂತೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಇದು ಜನರ ಕೋಪಕ್ಕೆ ಕಾರಣವಾಗಿದೆ. ವಧು ನಿರ್ಧಾರ ಏನೇ ಇರಲಿ, ತನ್ನಾಕೆಯನ್ನು ಪರ ಪುರುಷರು ಸ್ಪರ್ಶಿಸಲು ಅವಕಾಶ ನೀಡಿದ್ದಾನಲ್ಲ ಅವನೆಂತ ವರ ಅಂತಾ ನೀವೇ ಹೇಳಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...