alex Certify
ಕನ್ನಡ ದುನಿಯಾ       Mobile App
       

Kannada Duniya

10 ರೂ. ಲಂಚ ಆರೋಪದಿಂದ 22 ವರ್ಷಗಳ ಬಳಿಕ ಮುಕ್ತಿ

guj

ಹತ್ತು ರೂಪಾಯಿ ಲಂಚ ಪಡೆದ ಆರೋಪ ಎದುರಿಸುತ್ತಿದ್ದ ಐವರು ಸಂಚಾರಿ ಪೊಲೀಸ್ ಪೇದೆಗಳು ನಿರಪರಾಧಿ ಅಂತಾ 22 ವರ್ಷಗಳ ನಂತರ ಗುಜರಾತ್ ಹೈಕೋರ್ಟ್ ತೀರ್ಪು ನೀಡಿದೆ.

1994ರಲ್ಲಿ ಐವರು ಸಂಚಾರಿ ಪೇದೆಗಳು 10 ರೂಪಾಯಿ ಲಂಚ ಪಡೆಯುವ ವೇಳೆ ಭ್ರಷ್ಟಾಚಾರ ನಿಗ್ರಹ ದಳದ ಕೈಗೆ ಸಿಕ್ಕಿಬಿದ್ದಿದ್ದರು. ಅವರನ್ನು ಅಪರಾಧಿ ಎಂದು ಘೋಷಿಸಿದ್ದ ಸ್ಪೆಷಲ್ ಕೋರ್ಟ್ 2 ವರ್ಷ ಜೈಲು ಶಿಕ್ಷೆಯನ್ನೂ ವಿಧಿಸಿತ್ತು.

ಆದ್ರೆ ಕಳೆದ ತಿಂಗಳು ಗುಜರಾತ್ ಹೈಕೋರ್ಟ್, ಸ್ಪೆಷಲ್ ಕೋರ್ಟ್ ನೀಡಿದ್ದ ಆದೇಶವನ್ನು ವಜಾ ಮಾಡಿದೆ. ಎಸಿಬಿ ಆರೋಪ ಸಾಬೀತುಪಡಿಸುವಲ್ಲಿ ವಿಫಲವಾಗಿದ್ದು, ಸಾಕ್ಷಿಗಳು ಕೂಡ ಆರೋಪಿಗಳನ್ನು ಗುರುತಿಸುವಲ್ಲಿ ಗೊಂದಲಕ್ಕೊಳಗಾಗಿದ್ದಾರಂದು ಅಭಿಪ್ರಾಯಪಟ್ಟಿದೆ.

ಆರೋಪ ಎದುರಿಸುತ್ತಿದ್ದ ರತ್ನಭಾಯಿ ಸೋಲಂಕಿ, ಜಗದೀಶ್ಚಂದ್ರ ಜಾಧವ್, ವಿಷ್ಣುಭಾಯಿ ಪಟೇಲ್, ನಂದುಭಾಯಿ ಪಟೇಲ್ ಹಾಗೂ ಬಾಭುಭಾಯಿ ಪಟೇಲ್ 22 ವರ್ಷಗಳ ಕಾನೂನು ಹೋರಾಟದ ನಂತರ ನಿರಾಳರಾಗಿದ್ದಾರೆ. ಪೊಲೀಸರಿಗೆ ಲಂಚ ನೀಡಿದ್ದಾನೆ ಎನ್ನಲಾದ ಆಟೋ ರಿಕ್ಷಾ ಚಾಲಕ ಮತ್ತು ಸಾಕ್ಷಿಗಳ ಹೇಳಿಕೆಯಲ್ಲಿ ಭಿನ್ನತೆ ಇರುವುದನ್ನು ಕೋರ್ಟ್ ಗಮನಿಸಿದೆ. ಹಾಗಾಗಿ ಐವರು ಪೇದೆಗಳು ನಿರಪರಾಧಿಗಳೆಂದು ತೀರ್ಪು ನೀಡಿದೆ.

 

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...