alex Certify
ಕನ್ನಡ ದುನಿಯಾ       Mobile App
       

Kannada Duniya

ಮಿರಾಕಲ್: ಮೆದುಳಿನ ಅರ್ಧ ಭಾಗ ತೆಗೆದ್ರೂ ಎಲ್ಲರಂತಿದ್ದಾನೆ ಬಾಲಕ

lincoln

ಮೆದುಳಿನ ಅರ್ಧ ಭಾಗವನ್ನು ತೆಗೆದ್ರೂ ಏನೂ ಆಗದವರಂತೆ ಇರಲು ಸಾಧ್ಯ ಎಂದ್ರೆ ನೀವು ನಂಬ್ತೀರಾ? ನಂಬಲೇ ಬೇಕಾದಂತಹ ಒಂದು ಘಟನೆ ಬ್ರಿಟನ್ ನಲ್ಲಿ ನಡೆದಿದೆ.

ಬ್ರಿಟನ್ ನ ಐದು ವರ್ಷದ ಬಾಲಕ ಲಿಂಕನ್ ಫ್ರೀಮನ್ ಅಪರೂಪದ ಖಾಯಿಲೆಯಿಂದ ಬಳಲ್ತಾ ಇದ್ದ. ವೈದ್ಯರು ಆತನ ಅರ್ಧ ಮೆದುಳನ್ನೇ ಹೊರ ತೆಗೆದಿದ್ದಾರೆ. ಅಪಾಯಕಾರಿ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಲಿಂಕನ್ ಎಂದೂ ಮಾತನಾಡುವುದಿಲ್ಲ. ಕೆಲಸ ಮಾಡುವುದಿಲ್ಲ ಎಂದಿದ್ದಾರೆ. ಆದ್ರೆ ವೈದ್ಯರ ಅಂದಾಜು ತಪ್ಪಾಗಿದೆ. ಲಿಂಕನ್ ಸಾಮಾನ್ಯರಂತೆ ಇದ್ದು, ಎಲ್ಲ ಕೆಲಸವನ್ನೂ ಮಾಡ್ತಾನೆ.

ಹುಟ್ಟುವಾಗಲೇ ಲಿಂಕನ್ ಮುಖದ ಮೇಲೆ ಕೆಂಪು ಕಲೆಗಳಿದ್ದವು. ದಿನ ಕಳೆದಂತೆ ಇದು ಮುಖವನ್ನೆಲ್ಲ ಆವರಿಸಿಕೊಳ್ಳುತ್ತ ಬಂತು. ಎಂಆರ್ ಐ ಸ್ಕ್ಯಾನ್ ಮಾಡಿದ ವೈದ್ಯರು ಮೆದುಳಿನಲ್ಲಿ ಸಮಸ್ಯೆ ಇದೆ ಎಂದಿದ್ದಾರೆ. Strug Beaver syndrome ಇರುವುದು ದೃಢಪಟ್ಟಿದೆ. ಅಪಾಯಕಾರಿ ಕಾಯಿಲೆಯಿಂದ ಲಿಂಕನ್ ನನ್ನು ರಕ್ಷಿಸಲು ಮುಂದಾದ ವೈದ್ಯರು ಅರ್ಧ ಮೆದುಳನ್ನು ಹೊರತೆಗೆಯುವ ನಿರ್ಧಾರಕ್ಕೆ ಬಂದಿದ್ದಾರೆ.

ಲಂಡನ್ ನ ಗ್ರೇಟ್ ಆರ್ಮಂಡ್ ಸ್ಟ್ರೀಟ್ ಆಸ್ಪತ್ರೆಯಲ್ಲಿ ಒಂದು ವರ್ಷ ಇಡಲಾಗಿತ್ತು. 13ನೇ ತಿಂಗಳಲ್ಲಿ ಈತನಿಗೆ ಶಸ್ತ್ರಚಿಕಿತ್ಸೆ ಮಾಡಲಾಯ್ತು. ಎಂಟು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆದಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...