alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೀತಿಯನ್ನು ಗಟ್ಟಿಗೊಳಿಸುತ್ತೆ 60 ಸೆಕೆಂಡಿನ ಈ 6 ಟಿಪ್ಸ್

download

ಮುರಿದ ಸಂಬಂಧವನ್ನು ಮರು ಜೋಡಣೆ ಮಾಡುವುದು ಬಹಳ ಕಷ್ಟ. ಅವರ ಪ್ರೀತಿಯನ್ನು ಮತ್ತೆ ಗಳಿಸಲು ವರ್ಷಗಟ್ಟಲೆ ಪ್ರಯತ್ನಪಡಬೇಕು. ಇದು ಎಲ್ಲರಿಗೂ ಸಾಧ್ಯವಾಗದ ಮಾತು. ಪ್ರತಿದಿನ 60 ಸೆಕೆಂಡ್ ನಿಮ್ಮ ಪ್ರೀತಿಪಾತ್ರರಿಗೆ ನೀಡಿ ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸುವ ಟಿಪ್ಸ್ ಇಲ್ಲಿದೆ.

ಸಂಗಾತಿಯನ್ನು ಸಂತೈಸುವುದು ಅಥವಾ ಸಂಗಾತಿಗೆ ನಿಮ್ಮ ಪ್ರೀತಿ ವ್ಯಕ್ತಪಡಿಸಲು ಒಂದು ಅಪ್ಪುಗೆ ಸಾಕು. ಆದ್ರೆ ಆ ಅಪ್ಪುಗೆ 20-30 ಸೆಕೆಂಡ್ ಇದ್ದರೆ ಸಾಲೋದಿಲ್ಲ. 60 ಸೆಕೆಂಡ್ ಇರಬೇಕು. ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ. 60 ಸೆಕೆಂಡುಗಳ ಕಾಲ ಪರಸ್ಪರ ತಬ್ಬಿಕೊಂಡಲ್ಲಿ ಆಕ್ಸಿಟೋಸಿನ್ ಮತ್ತು ಡೋಪಮೈನ್ ಎಂಬ ಸಂತೋಷದ ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಇದು ವ್ಯಕ್ತಿಯಲ್ಲಿ ಧನಾತ್ಮಕ ಶಕ್ತಿ ನೀಡುತ್ತದೆ.

ಇದು ಇಂಟರ್ನೆಟ್ ಯುಗ. ನಿಮ್ಮ ಸಂಗಾತಿಗೆ ಒಂದು ಪ್ರೀತಿಯ ಸಂದೇಶ ರವಾನೆ ಮಾಡಿ. ನೀವು ಅವರನ್ನು ಎಷ್ಟು ಪ್ರೀತಿ ಮಾಡ್ತೀರಾ ಎಂಬುದನ್ನು ಹೇಳಿ. ಜೊತೆಗಿದ್ದ ಒಂದು ಫೋಟೋ ಹಾಕಿದ್ರೆ ಇನ್ನೂ ಉತ್ತಮ. ಈ ಕೆಲಸ ಮಾಡಲು ನಿಮಗೆ 60 ಸೆಕೆಂಡ್ ಗಿಂತ ಕಡಿಮೆ ಸಮಯ ಸಾಕು.

ನಿಮ್ಮ ಸಂಗಾತಿಗೆ ಯಾವುದು ಇಷ್ಟ, ಯಾವುದು ಇಷ್ಟವಿಲ್ಲ ಎಂಬುದು ನಿಮಗೆ ತಿಳಿದಿರುತ್ತದೆ. ಅವರಿಗಿಷ್ಟವಾದ ವಸ್ತು ಅಥವಾ ಆಹಾರವನ್ನು ಹೊರಗಡೆಯಿಂದ ತನ್ನಿ ಅಥವಾ ಮನೆಯಲ್ಲಿಯೇ ತಯಾರಿಸಿ ಸಂಗಾತಿಗೆ ನೀಡಿ. ಸಣ್ಣಪುಟ್ಟ ಸಂಗತಿಗಳು ಪ್ರೀತಿಯಲ್ಲಿ ಮಹತ್ವದ ಪಾತ್ರವಹಿಸುತ್ತವೆ.

ಪರಸ್ಪರ ಕೈ ಹಿಡಿದು 60 ಸೆಕೆಂಡುಗಳ ಕಾಲ ಕಣ್ಣಲ್ಲಿ ಕಣ್ಣಿಟ್ಟು ನೋಡಿ. ಹೀಗೆ ಮಾಡುವುದರಿಂದ ಪ್ರೀತಿಯ ಹಾರ್ಮೋನ್ ಉತ್ಪತ್ತಿಯಾಗಿ ಸಂಗಾತಿಗೆ ನಿಮ್ಮ ಮೇಲಿನ ಪ್ರೀತಿ ಹೆಚ್ಚಾಗುತ್ತದೆ.

ಸಂಗಾತಿ ಯಾವುದೇ ಸ್ಥಿತಿಯಲ್ಲಿದ್ದರೂ ಅವರ ಕೈ ಬಿಡಬೇಡಿ. ನಿಮ್ಮ ಜೊತೆ ಸದಾ ನಾನಿದ್ದೇನೆ. ಧೈರ್ಯವಾಗಿ ಮುಂದುವರೆ ಎಂದು ಭರವಸೆ ನೀಡಿ.

ಆಗಾಗ ಸಂಗಾತಿಯನ್ನು ಹೊಗಳುತ್ತಿರಿ. ಹಾಗಂತ ಸುಳ್ಳು ಹೊಗಳಿಕೆ, ತೋರಿಕೆಯ ಹೊಗಳಿಕೆ ಬೇಡ. ಇದು ಪ್ರೀತಿ ಗಟ್ಟಿಗೊಳಿಸುವ ಬದಲು ಸಂಬಂಧ ಹಾಳು ಮಾಡುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...