alex Certify
ಕನ್ನಡ ದುನಿಯಾ       Mobile App
       

Kannada Duniya

OMG: ಕುದಿಯುತ್ತಿರುವ ಎಣ್ಣೆಯಲ್ಲಿ ಕುಳಿತು ಸನ್ಯಾಸಿಯ ಧ್ಯಾನ

monk-1

ಕುದಿಯುವ ಎಣ್ಣೆ ಸ್ವಲ್ಪ ಕೈ ಮೇಲೆ ಸಿಡಿದ್ರೂ ಜೀವ ಹೋದಷ್ಟು ನೋವಾಗುತ್ತೆ. ಉರಿಗೆ ಕಿರುಚಿಕೊಳ್ತೇವೆ. ಇನ್ನು ಕುದಿಯುವ ಎಣ್ಣೆಯಲ್ಲಿ ಕುಳಿತುಕೊಳ್ಳುವುದು ಸಾಧ್ಯವಾಗದ ಮಾತು. ಆದ್ರೆ ನಾವು ಕುದಿಯುವ ತೈಲದಲ್ಲಿ ಆರಾಮವಾಗಿ ಕುಳಿತುಕೊಳ್ತೇವೆ ಎನ್ನುತ್ತಾರೆ ಬೌದ್ಧ ಸನ್ಯಾಸಿಗಳು.

ಸಾಮಾನ್ಯವಾಗಿ ಬೌದ್ಧ ಸನ್ಯಾಸಿಗಳ ಸಾಹಸ ವಿಸ್ಮಯಗೊಳಿಸುತ್ತವೆ. ಎಂಥ ಕಠಿಣ ಸವಾಲುಗಳನ್ನು ಎದುರಿಸಲೂ ಅವರು ಸಿದ್ಧರಿರ್ತಾರೆ. ಹಾಗೆ ಥೈಲ್ಯಾಂಡ್ ನಲ್ಲಿ ಸನ್ಯಾಸಿಯೊಬ್ಬರು ಕುದಿಯುವ ತೈಲದೊಳಗೆ ಕುಳಿತುಕೊಂಡು ಬೆರಗುಗೊಳಿಸಿದ್ದಾರೆ. ಧ್ಯಾನ ಮುದ್ರೆಯಲ್ಲಿರುವ ಅವರನ್ನು ಶಿಷ್ಯರು ಕುದಿಯುತ್ತಿರುವ ಎಣ್ಣೆ  ಬಾಂಡಲೆಯಲ್ಲಿ ಕೂರಿಸುತ್ತಾರೆ. ಹೀಗೆ ಮಾಡುವುದರಿಂದ ಅವರು ಇನ್ನಷ್ಟು ಗಟ್ಟಿಯಾಗುತ್ತಾರೆ, ಪ್ರಭಾವಶಾಲಿಗಳಾಗುತ್ತಾರೆಂದು ನಂಬಲಾಗಿದೆ.

ಅನೇಕರು ಇದನ್ನು ಭಕ್ತಿ ಎಂದು ಕೈ ಮುಗಿದ್ರೆ ವಿಜ್ಞಾನಿಗಳು ಮಾತ್ರ ಸುಲಭವಾಗಿ ನಂಬುತ್ತಿಲ್ಲ. ಬ್ಯಾಂಕಾಕ್ ನ ಚುಲಾಲೊಂಗ್ಕಾರ್ನ್ ವಿಶ್ವವಿದ್ಯಾಲಯ ಸೈನ್ಸ್ ಪ್ರಾಧ್ಯಾಪಕರು ತೈಲ ಕುದಿಯುತ್ತಿದೆ ಎಂಬುದಕ್ಕೆ ಯಾವುದೇ ಪುರಾವೆಯಿಲ್ಲ. ಅದನ್ನು ದೃಢಪಡಿಸಿಕೊಳ್ಳಬೇಕು ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...