alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ ಸ್ಪರ್ಧಿ ಪರ ಭರ್ಜರಿ ರ್ಯಾಲಿ

manveer

ಕಲರ್ಸ್ ಹಿಂದಿ ವಾಹಿನಿಯಲ್ಲಿ ಪ್ರಸಾರವಾಗ್ತಾ ಇರೋ ರಿಯಾಲಿಟಿ ಶೋ ಬಿಗ್ ಬಾಸ್ -10ನೇ ಆವೃತ್ತಿ ವಿವಾದಗಳಿಂದ್ಲೇ ಸಾಕಷ್ಟು ಸುದ್ದಿ ಮಾಡಿದೆ. ಈ ಬಾರಿ ಕೇವಲ ಸೆಲೆಬ್ರಿಟಿಗಳು ಮಾತ್ರವಲ್ಲ, ಜನಸಾಮಾನ್ಯರಿಗೆ ಕೂಡ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದ್ದು, ಯಾರು ಗೆಲ್ತಾರೆ ಅನ್ನೋ ಕುತೂಹಲ ತೀವ್ರವಾಗಿದೆ. ಜನಸಾಮಾನ್ಯರು ಹಾಗೂ ಸೆಲೆಬ್ರಿಟಿಗಳ ನಡುವಣ ಪೈಪೋಟಿ ಪ್ರೇಕ್ಷಕರನ್ನು ರಂಜಿಸಿದೆ.

 

ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದ ಮನ್ವೀರ್ ಗುರ್ಜರ್ ಯಾವ ಸೆಲೆಬ್ರಿಟಿಗೂ ಕಮ್ಮಿಯಿಲ್ಲ. ಮೊದಲ ವಾರದಿಂದ್ಲೇ ಮನ್ವೀರ್ ಪ್ರೇಕ್ಷಕರ ಫೇವರಿಟ್ ಎನಿಸಿಕೊಂಡಿದ್ದಾರೆ. ಈ ಆವೃತ್ತಿಯಲ್ಲಿ ಮನ್ವೀರ್ ಗೆದ್ದೇ ಗೆಲ್ತಾರೆ ಅನ್ನೋ ವಿಶ್ವಾಸ ಪ್ರೇಕ್ಷಕರದ್ದು.

ಮನ್ವೀರ್ ಗುರ್ಜರ್ ಗೆ ಬೆಂಬಲ ಸೂಚಿಸಿ ಉತ್ತರ ಭಾರತದ ಹಲವು ಕಡೆಗಳಲ್ಲಿ ಬೃಹತ್ ರ್ಯಾಲಿಗಳನ್ನು ಆಯೋಜಿಸಲಾಗಿತ್ತು. ಕಾರು, ಬೈಕ್ ಗಳ ಮೇಲೆಲ್ಲಾ ಭಿತ್ತಿಪತ್ರ ಅಂಟಿಸಿಕೊಂಡು ಅಭಿಮಾನಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಜನನಿಬಿಡ ಪ್ರದೇಶಗಳಲ್ಲಿ ಮನ್ವೀರ್ ಅವರನ್ನು ಬೆಂಬಲಿಸಿ ದೊಡ್ಡ ದೊಡ್ಡ ಬ್ಯಾನರ್ ಗಳನ್ನು ಹಾಕಲಾಗಿದೆ. ಕೆಲವು ಕಡೆಗಳಲ್ಲಿ ದೊಡ್ಡ ದೊಡ್ಡ ಸ್ಕ್ರೀನ್ ಗಳನ್ನು ಅಳವಡಿಸಿ ಗ್ರಾಮಸ್ಥರೆಲ್ಲ ಒಟ್ಟಾಗಿ ಬಿಗ್ ಬಾಸ್ ವೀಕ್ಷಿಸುವ ಮೂಲಕ ಮನ್ವೀರ್ ಗೆ ಚಿಯರ್ ಅಪ್ ಮಾಡ್ತಿದ್ದಾರೆ. ಬಿಗ್ ಬಾಸ್ ಟ್ರೋಫಿಯನ್ನು ಗೆಲ್ಲಲಿ, ಬಿಡಲಿ ಮನ್ವೀರ್ ಜನರ ಮನಸ್ಸನ್ನು ಗೆದ್ದಿದ್ದಾರೆ ಅನ್ನೋದಕ್ಕೆ ಇದೇ ಸಾಕ್ಷಿ.

Subscribe Newsletter

Get latest updates on your inbox...

Opinion Poll

  • ಡೋನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷರಾದ ಬಳಿಕ ಜನಾಂಗೀಯ ದ್ವೇಷ ಹೆಚ್ಚಾಗುತ್ತಿದೆಯೇ..?

    View Results

    Loading ... Loading ...