alex Certify
ಕನ್ನಡ ದುನಿಯಾ       Mobile App
       

Kannada Duniya

ಮಕ್ಕಳ ಬುದ್ಧಿಶಕ್ತಿ ಹೆಚ್ಚಿಸುತ್ತೆ ಈ ಮೊಬೈಲ್ ಗೇಮ್ಸ್

ದೊಡ್ಡವರೊಂದೇ ಅಲ್ಲ ಈಗ ಮಕ್ಕಳೂ ಮೊಬೈಲ್ ಪ್ರಿಯರಾಗಿದ್ದಾರೆ. ಸ್ನೇಹಿತರ ಜೊತೆ ಆಟವಾಡುವ ಬದಲು ಮೊಬೈಲ್ ಗೇಮ್ ಈಗ ಪ್ರಸಿದ್ಧಿ ಪಡೆದಿದೆ. ನಿಮ್ಮ ಮಕ್ಕಳೂ ಮೊಬೈಲ್ ಬಳಸ್ತಿದ್ದರೆ ತಕ್ಷಣ ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ ಈ ನಾಲ್ಕು ಆ್ಯಪ್ ಡೌನ್ಲೋಡ್ ಮಾಡಿ. ಈ ಮೊಬೈಲ್ ಗೇಮ್ಸ್ ಮಕ್ಕಳ ಮಾನಸಿಕ ಮತ್ತು ಭೌತಿಕ ಬೆಳವಣಿಗೆ ಜೊತೆಗೆ ಮನರಂಜನೆ ನೀಡುತ್ತದೆ. ಇದು ಮಕ್ಕಳ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ.

Androbaby : ಇದು ಅತ್ಯಂತ ಜನಪ್ರಿಯ ಮಕ್ಕಳ ಗೇಮ್ಸ್ ನ ಆಂಡ್ರಾಯ್ಡ್ ಆ್ಯಪ್ ಆಗಿದೆ. ಗೂಗಲ್ ಪ್ಲೇ ಸ್ಟೋರ್ ನಿಂದ ಇದನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಇದ್ರಲ್ಲಿ ಸಾಕಷ್ಟು ಆಟಗಳಿವೆ. ಪ್ರಾಣಿ ಹಾಗೂ ಪಕ್ಷಿಗಳ ಸೌಂಡ್, ಬಣ್ಣ, ಹೆಸರುಗಳನ್ನು ಆಟದ ಮೂಲಕ ಕಲಿಸುತ್ತದೆ.

App Quiz baby games : ಇದು ಕೂಡ ಆಂಡ್ರಾಯ್ಡ್ ಆ್ಯಪ್ ಆಗಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ. ಮಕ್ಕಳ ಒಗಟು, ಮಕ್ಕಳ ಕಾರ್ ವಾಶ್, ಮಕ್ಕಳ ಸಂಗೀತ ವಾದ್ಯಗಳು ಸೇರಿದಂತೆ ಅನೇಕ ಗೇಮ್ಸ್ ಇದ್ರಲ್ಲಿವೆ.

Fisher-Price baby game : ಮಕ್ಕಳ ಮೊಬೈಲ್ ಗೇಮ್ ಗೆ ಇದು ಬೆಸ್ಟ್ ಆ್ಯಪ್. ಆಂಡ್ರಾಯ್ಡ್ ಆ್ಯಪ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ. ಇದ್ರಲ್ಲಿ ಮಕ್ಕಳ ಬುದ್ದಿ ಹೆಚ್ಚಿಸುವ ಹಾಗೂ ಮನರಂಜನೆಯುಳ್ಳ ಸಾಕಷ್ಟು ಗೇಮ್ಸ್ ಇದೆ.

GoKids : ಇದು ಮಕ್ಕಳ ಆಟಕ್ಕೆ ಬೆಸ್ಟ್ ಆ್ಯಪ್. ಉಚಿತವಾಗಿ ಇದನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಮಕ್ಕಳ ಬುದ್ದಿ, ಸೃಜನಾತ್ಮಕತೆ ಹೆಚ್ಚಿಸುವ ಗೇಮ್ ಗಳು ಇದ್ರಲ್ಲಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...