alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರಲ್ಲಿ ಪೋಲಾಗುತ್ತಿದೆ ಶೇ.50 ರಷ್ಟು ನೀರು

water wasteಕಾವೇರಿ ನೀರಿಗಾಗಿ ಕರ್ನಾಟಕ- ತಮಿಳುನಾಡು ಮಧ್ಯೆ ಹಗ್ಗಜಗ್ಗಾಟ ನಡೆಯುತ್ತಲೇ ಇದೆ. ಅಂಥದ್ರಲ್ಲಿ ರಾಜಧಾನಿ ಬೆಂಗಳೂರಲ್ಲಿ ಶೇ.50ರಷ್ಟು ಕಾವೇರಿ ನೀರು ಪೋಲಾಗುತ್ತಿದೆ ಅನ್ನೋ ಆಘಾತಕಾರಿ ಸುದ್ದಿಯೊಂದು ದಿಗಿಲು ಮೂಡಿಸಿದೆ.

ಭಾರತದಲ್ಲಿ ಅತಿ ಹೆಚ್ಚು ನೀರು ಪೋಲು ಮಾಡುವ ನಗರ ಕೋಲ್ಕತ್ತಾ. ಪರಿಸ್ಥಿತಿ ಇದೇ ರೀತಿ ಮುಂದುವರಿದ್ರೆ ಬೆಂಗಳೂರು ಕೋಲ್ಕತ್ತಾವನ್ನೂ ಮೀರಿಸಬಹುದು. ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ 3 ನೇ ನಗರ ಬೆಂಗಳೂರು, ಇಲ್ಲಿ 8.5 ಮಿಲಿಯನ್ ಜನರು ವಾಸವಿದ್ದಾರೆ. ಪ್ರತಿದಿನ ಒಬ್ಬರಿಗೆ 150 ಲೀಟರ್ ನೀರು ಬೇಕು, ಆದ್ರೆ ಸಿಕ್ತಾ ಇರೋದು ಕೇವಲ 65 ಲೀಟರ್ ಮಾತ್ರ.

ವಾರದಲ್ಲಿ ಮೂರು ದಿನ ಮಾತ್ರ ಬೆಂಗಳೂರಿಗರಿಗೆ ಕಾವೇರಿ ನೀರಿನ ಭಾಗ್ಯ. ಇನ್ನು 9 ವರ್ಷಗಳಲ್ಲಿ ನಗರದಲ್ಲಿ ನೀರಿನ ಬೇಡಿಕೆ, ಪೂರೈಕೆಗಿಂತ 3 ಪಟ್ಟು ಹೆಚ್ಚಾಗಲಿದೆ. ಇಡೀ ಕರ್ನಾಟಕಕ್ಕೆ ಮೀಸಲಿರುವ ನೀರಿನಲ್ಲಿ ಅರ್ಧದಷ್ಟು ಬೆಂಗಳೂರಿಗೆ ಪೂರೈಕೆಯಾಗ್ತಿದೆ. ಅದರಲ್ಲಿ ಶೇ.50ರಷ್ಟು ನೀರು ಪೋಲಾಗಿ ಹೋಗ್ತಿದೆ. ಜೀವಜಲ ವ್ಯರ್ಥ ಮಾಡೋದ್ರಲ್ಲಿ ಕೋಲ್ಕತ್ತಾ ಬಿಟ್ರೆ ನಂತರದ ಸ್ಥಾನ ಬೆಂಗಳೂರಿಗೆ.

ನೀರು ಪೂರೈಕೆ ವ್ಯವಸ್ಥೆಯಲ್ಲಿನ ಲೋಪ, ಪೈಪ್ ಗಳಿಗೆ ಹಾನಿ, ಸೋರಿಕೆ ಹಾಗೂ ಅನಧಿಕೃತ ನೀರಿನ ಸಂಪರ್ಕವೇ ಇದಕ್ಕೆ ಕಾರಣ. ದುರಂತ ಅಂದ್ರೆ ನೀರು ಪೂರೈಕೆಗೆ ಆಗುವ ಒಟ್ಟಾರೆ ವೆಚ್ಚದ ಶೇ.60 ರಷ್ಟನ್ನು 100 ಕಿಮೀ ವರೆಗೆ ಅದನ್ನು ಪಂಪ್ ಮಾಡಲು ಖರ್ಚು ಮಾಡಲಾಗುತ್ತಿದೆ. ಇನ್ನಾದ್ರೂ ಜಲಮಂಡಳಿ ಎಚ್ಚೆತ್ತುಕೊಂಡು ವ್ಯವಸ್ಥೆ ಸರಿಪಡಿಸದೇ ಇದ್ರೆ ಬೆಂಗಳೂರಿಗೂ ಬರಗಾಲ ಬರೋದ್ರಲ್ಲಿ ಅನುಮಾನವೇ ಇಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...