alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರಿಗರಿಗೆ ರಸ್ತೆ ಸುರಕ್ಷತೆಯ ಪಾಠ ಮಾಡ್ತಿದೆ ಈ ಶ್ವಾನ

ಹನಿ…ಹೆಸರಿಗೆ ತಕ್ಕಂತೆ ಮುದ್ದಾಗಿರೋ ಹೆಣ್ಣು ನಾಯಿ. ಬೆಂಗಳೂರಲ್ಲಿ ವಾಸಿಸ್ತಾ ಇರೋ ಲ್ಯಾಬ್ರೆಡಾರ್ ಜಾತಿಗೆ ಸೇರಿದ ಈ ಶ್ವಾನ ಸಮಾಜ ಸೇವೆ ಮಾಡ್ತಿದೆ. ಜನರ ಪ್ರಾಣ ಉಳಿಸ್ತಾ ಇದೆ. ಬೆಂಗ್ಳೂರಲ್ಲಿ ಎಲ್ಲಿ ನೋಡಿದ್ರೂ ಟ್ರಾಫಿಕ್ ಕಿರಿಕಿರಿ. ಅದರ ಮಧ್ಯೆ ಸಂಚಾರ ನಿಯಮ ಉಲ್ಲಂಘಿಸೋ ವಾಹನ ಸವಾರರು.

ಅರ್ಧಕ್ಕರ್ಧ ಮಂದಿ ಹೆಲ್ಮೆಟ್ ಇಲ್ಲದೇ ಬೈಕ್ ಸವಾರಿ ಮಾಡ್ತಾರೆ. ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಮಾಡಿದ್ರೂ ನಿಯಮ ಪಾಲಿಸ್ತಾ ಇಲ್ಲ. ಅಂಥವರಿಗೆಲ್ಲ ಈ ನಾಯಿ ನೀತಿಪಾಠ ಹೇಳ್ತಿದೆ. ಹೆಲ್ಮೆಟ್ ಇಲ್ಲದೇ ಬಂದವರನ್ನು ಕಂಡ್ರೆ ಸಾಕು ಬೊಗಳಿ ಬೊಗಳಿ ಅವರನ್ನು ಎಚ್ಚರಿಸುತ್ತದೆ.

ಈ ನಾಯಿಯ ಮಾಲೀಕ ವಿಶ್ವನಾಥನ್, ಚೆನ್ನೈನಲ್ಲಿದ್ದಾಗ ಭೀಕರ ಅಪಘಾತವೊಂದನ್ನು ನೋಡಿ ತತ್ತರಿಸಿ ಹೋಗಿದ್ರು. ಹೆಲ್ಮೆಟ್ ಧರಿಸದ ಸವಾರ ರಸ್ತೆಯಲ್ಲೇ ಶವವಾಗಿದ್ದ. ಅದನ್ನು ನೋಡಿದಾಗಿನಿಂದ ಅಪಘಾತ ನಿಯಂತ್ರಣಕ್ಕೆ ಏನಾದ್ರೂ ಮಾಡಬೇಕೆಂದು ಅವರಿಗೆ ಅನಿಸಿತ್ತು.

ವಿಶ್ವನಾಥನ್ ಅವರ ಕಳಕಳಿಗೆ ನಾಯಿ ಹನಿ ಸಾಥ್ ಕೊಟ್ಟಿದೆ. ಇದಕ್ಕಾಗಿಯೇ ನಾಯಿಗೆ ಒಂದು ವಾರ ವಿಶೇಷ ತರಬೇತಿ ಕೂಡ ನೀಡಲಾಗಿದೆ. ಅದನ್ನು ಚಾಚೂ ತಪ್ಪದೆ ಈಗ ಪಾಲಿಸ್ತಾ ಇದೆ. ರಸ್ತೆ ಸುರಕ್ಷತೆ ಬಗ್ಗೆ ಜನರಲ್ಲಿ ಅರಿವು ಮೂಡಿಸೋ ಕೆಲಸ ಮಾಡ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...