alex Certify
ಕನ್ನಡ ದುನಿಯಾ       Mobile App
       

Kannada Duniya

ಖಾಯಿಲೆಗೆ ಪ್ರೀತಿ ಮದ್ದು

couple_story_650_010715010208_1498567126_618x347

ಪ್ರೀತಿ ಒಂದು ಸುಂದರ ಭಾವನೆ. ಅನೇಕ ಕವಿಗಳು, ಬರಹಗಾರರು ಪ್ರೀತಿ ಬಗ್ಗೆ ಬರೆದಿದ್ದಾರೆ. ಆದ್ರೆ ವಿಜ್ಞಾನಿಗಳು ಕೂಡ ಪ್ರೀತಿಯಲ್ಲಿ ಬೀಳುವುದು ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ನಂಬುತ್ತಾರೆ.

ಪ್ರೀತಿ ಮಾಡುವುದರ ದೊಡ್ಡ ಪ್ರಯೋಜನ ನಿಮಗೊಂದು ಸಂಗಾತಿ ಸಿಗ್ತಾರೆ ಎಂಬುದು. ನಿಮ್ಮ ಒಂಟಿತನ ಮಾಯವಾಗುತ್ತದೆ. ಒಬ್ಬ ಸಂಗಾತಿ ನಿಮ್ಮ ಜೊತೆ ಇರುವುದರಿಂದ ಪ್ರತಿಯೊಂದು ಕಷ್ಟವನ್ನೂ ಸುಲಭವಾಗಿ ಎದುರಿಸಲುವ ಶಕ್ತಿ ಬರುತ್ತದೆ. ಏನೇ ಆಗ್ಲಿ ನಮ್ಮ ನೆರವಿಗೆ, ನಮ್ಮ ಬೆಂಬಲಕ್ಕೆ ಒಬ್ಬರಿದ್ದಾರೆಂಬ ಧೈರ್ಯ ಬರುತ್ತದೆ.

ಪ್ರೀತಿಯಿಂದ ಸಾಕಷ್ಟು ಪ್ರಯೋಜನಗಳಿವೆ. ಪ್ರೀತಿ ಪರಸ್ಪರ ನಂಬುಗೆಯನ್ನು ಕಲಿಸುತ್ತದೆ. ನಂಬಿಕೆಯಿಲ್ಲದೆ ಒಂದು ಸುಖಿ ಜೀವನ ಅಸಾಧ್ಯ.

ಅಧ್ಯಯನಗಳ ಪ್ರಕಾರ ಪ್ರೀತಿ ಮಾಡುವ ವ್ಯಕ್ತಿ ಉಳಿದವರಿಗೆ ಹೋಲಿಸಿದ್ರೆ ಹೆಚ್ಚು ಖುಷಿ ಹಾಗೂ ಸಂತೋಷವಾಗಿರುತ್ತಾನಂತೆ. ಉತ್ತಮ ನಿದ್ರೆಗೂ ಪ್ರೀತಿ ಸಹಕಾರಿ. ಒತ್ತಡರಹಿತ ಜೀವನದಲ್ಲಿ ನಿದ್ರೆಗೆ ಬರವಿಲ್ಲ. ಸುಲಭವಾಗಿ ಸಾಕಷ್ಟು ನಿದ್ರೆ ಬಂದ್ರೆ ಸಂತೋಷ, ನೆಮ್ಮದಿ ಜೀವನಕ್ಕೆ ಬರವಿಲ್ಲ.

ಪ್ರೀತಿ ರಕ್ತದೊತ್ತಡ ಸೇರಿದಂತೆ ಅನೇಕ ರೋಗಗಳನ್ನು ದೂರವಿರಿಸುತ್ತದೆ. ಪ್ರೀತಿಯಲ್ಲಿ ಬಿದ್ದ ವ್ಯಕ್ತಿ ಕಡಿಮೆ ಒತ್ತಡಕ್ಕೊಳಗಾಗ್ತಾನೆ. ಹಾಗೆ ಸದಾ ಸಂತೋಷವಾಗಿರುತ್ತಾನೆ. ರಕ್ತದೊತ್ತಡ ನಿಯಂತ್ರಣದಲ್ಲಿರುವುದರಿಂದ ಹೃದಯ ಸಂಬಂಧಿ ಖಾಯಿಲೆಗಳು ಕಡಿಮೆಯಾಗುತ್ತವೆ.

ಒಂದು ಸಂಶೋಧನೆ ಪ್ರಕಾರ ಪ್ರೀತಿ ಮನುಷ್ಯನ ಆತ್ಮಗೌರವವನ್ನು ಹೆಚ್ಚಿಸುತ್ತದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...