alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರತಿ ದಿನದ ಸಂಭೋಗದಿಂದ ಏನೆಲ್ಲ ಲಾಭವಿದೆ ಗೊತ್ತಾ?

ಶಾರೀರಿಕ ಸಂಬಂಧ ಕೇವಲ ಮನರಂಜನೆಯನ್ನು ಮಾತ್ರ ನೀಡೋದಿಲ್ಲ. ಸೆಕ್ಸ್ ಒಳ್ಳೆ ನಿದ್ರೆ, ಒತ್ತಡದಿಂದ ಹೊರ ಬರಲೊಂದೇ ಅಲ್ಲ ಸಂಭೋಗದಿಂದ ಇನ್ನೂ ಅನೇಕ ಲಾಭಗಳಿವೆ. ಹಾಗಾಗಿಯೇ ತಜ್ಞರು ಪ್ರತಿದಿನ ಲೈಂಗಿಕ ಸಂಬಂಧ ಬೆಳೆಸಲು ಸಲಹೆ ನೀಡ್ತಾರೆ.

ತಿಂಗಳಿನಲ್ಲಿ ಒಮ್ಮೆ ಶಾರೀರಿಕ ಸಂಬಂಧ ಬೆಳೆಸುವ ವ್ಯಕ್ತಿಗಿಂತ ವಾರದಲ್ಲಿ ಎರಡು ಬಾರಿ ಸಂಬಂಧ ಬೆಳೆಸುವ ವ್ಯಕ್ತಿಗೆ ಹೃದಯಘಾತವಾಗುವ ಸಂಭವ ಕಡಿಮೆಯಿರುತ್ತದೆ ಎಂದು ಸಂಶೋಧನೆ ಹೇಳಿದೆ.

ನಿಯಮಿತ ಸಂಭೋಗ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆಯಂತೆ. ನೆಗಡಿ, ಕೆಮ್ಮು ಸೇರಿದಂತೆ ಅನೇಕ ರೋಗಗಳ ವಿರುದ್ಧ ಹೋರಾಡುವ ಶಕ್ತಿ ಸಿಗುತ್ತದೆ.

ಸೆಕ್ಸ್ ಮೂಡನ್ನು ಫ್ರೆಶ್ ಮಾಡುವುದೊಂದೇ ಅಲ್ಲ, ನಿಯಮಿತವಾಗಿ ಶಾರೀರಿಕ ಸಂಬಂಧ ಬೆಳೆಸುವವರು ಒತ್ತಡದ ವಿರುದ್ಧ ಹೋರಾಡುವ ಆತ್ಮಸ್ಥೈರ್ಯ ಹೊಂದಿರುತ್ತಾರಂತೆ.

ತಲೆನೋವು ಎನ್ನುವ ಕಾರಣಕ್ಕೆ ಸೆಕ್ಸ್ ನಿಂದ ದೂರವಿರಬೇಡಿ. ಸೆಕ್ಸ್ ಆಕ್ಸಿಟೋಸಿನ್ ಮಟ್ಟವನ್ನು ಐದು ಪಟ್ಟು ಹೆಚ್ಚಿಸುತ್ತದೆ. ಇದು ತಲೆನೋವಿಗೆ ಪರಿಹಾರ ನೀಡುತ್ತದೆ.

ಸೆಕ್ಸ್, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜೊತೆಗೆ ಅಂಗಾಂಗ ಹಾಗೂ ಚರ್ಮ ಆರೋಗ್ಯವಾಗಿರುತ್ತದೆ. ವಾರದಲ್ಲಿ ಎರಡು ಬಾರಿ ಪರಾಕಾಷ್ಠೆ ಅನುಭವಿಸುವ ಜನರು ಕಡಿಮೆ ಸಂಭೋಗ ನಡೆಸುವ ವ್ಯಕ್ತಿಗಳಿಗಿಂತ ಹೆಚ್ಚು ವರ್ಷ ಬದುಕುತ್ತಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...