alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ವರ್ಗದಂತ ಮನೆ ಬೇಕಾದಲ್ಲಿ ಹುಡುಗಿ ಆಯ್ಕೆ ಹೀಗಿರಲಿ

download

ಮನೆಯ  ಸುಖ-ಶಾಂತಿಗೆ ಪತ್ನಿಯಾದವಳ ಪಾತ್ರ ಮಹತ್ವದ್ದು. ಪ್ರವೀಣೆಯಾಗಿರುವ ಪತ್ನಿ ಮನೆಯಲ್ಲಿದ್ದರೆ ಮನೆ ಸ್ವರ್ಗಕ್ಕೆ ಸಮ. ಹಾಗಾಗಿ ಮದುವೆಯಾಗುವ ಮೊದಲು ಹುಡುಗನಾದವನು ಕೆಲವೊಂದು ವಿಷಯಗಳ ಬಗ್ಗೆ ಗಮನ ನೀಡಬೇಕಾಗುತ್ತದೆ. ಎಂತ ಹುಡುಗಿ ಮನೆಯನ್ನು ಸ್ವರ್ಗ ಮಾಡಬಲ್ಲಳು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

ಹೆಣ್ಣು ಮೃದು ಸ್ವಭಾವದವಳು. ಪ್ರೀತಿ, ಸಹನೆ, ಮಮತೆ ಎಲ್ಲವೂ ಸಾಮಾನ್ಯವಾಗಿ ಎಲ್ಲ ಮಹಿಳೆಯರಲ್ಲಿಯೂ ಒಂದೇ ರೀತಿ ಇರುತ್ತೆ. ಎಲ್ಲ ಬೆರಳು ಒಂದೇ ರೀತಿ ಇರೋದಿಲ್ಲ ಎನ್ನುವ ಹಾಗೆ ಒಬ್ಬೊಬ್ಬ ಮಹಿಳೆ ಒಂದೊಂದು ರೀತಿಯ ಭಾವನೆಗಳನ್ನು ಹೊರ ಹಾಕ್ತಾಳೆ. ಹಾಗಾಗಿ ಹುಡುಗಿ ಆಯ್ಕೆ ಮಾಡುವಾಗ ಎಲ್ಲವನ್ನೂ ನೋಡಬೇಕು ಎನ್ನುತ್ತಾರೆ. ಆದ್ರೆ ಅದು ಎಲ್ಲರ ವಿಷಯದಲ್ಲೂ ಸಾಧ್ಯವಿಲ್ಲ.

ಹಾಗೆಯೇ ವಿವಾಹವಾಗುವಾತನ ನಡೆ-ನುಡಿಗಳಲ್ಲಿ ವಿಭಿನ್ನತೆ ಇರುತ್ತದೆ. ಹೀಗಾಗಿ ಹುಡುಗಿಯನ್ನು ಸೂಕ್ಷ್ಮವಾಗಿ ಗಮನಿಸಿ ವರನ ಸ್ವಭಾವಕ್ಕೆ ತಕ್ಕ ವಧುವನ್ನು ಹುಡುಕಬೇಕಾಗುತ್ತದೆ. ಹುಡುಗಿಯೆಂದಾಕ್ಷಣ ಆಕೆ ತಗ್ಗಿ ಬಗ್ಗಿ ನಡೆಯಬೇಕೆಂದು ನಿರೀಕ್ಷಿಸುವುದು ತಪ್ಪಾಗುತ್ತದೆ. ಇಂದು ಹೆಣ್ಣು ಎಲ್ಲದರಲ್ಲೂ ಸರಿ ಸಮಾನಳಾಗಿದ್ದು, ಅವರುಗಳ ಭಾವನೆಯನ್ನೂ ಗೌರವಿಸಬೇಕಾಗುತ್ತದೆ. ಹುಡುಗನಿಗೆ ತನ್ನ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬೇಕಾದಾಗ ಯಾವ ಆಸೆ- ಆಕಾಂಕ್ಷೆಗಳಿರುತ್ತವೆಯೋ ಅದೇ ರೀತಿ ಹುಡುಗಿಯರು ಬಯಸುತ್ತಾರೆಂಬುದು ಗಮನದಲ್ಲಿರಲಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...