alex Certify
ಕನ್ನಡ ದುನಿಯಾ       Mobile App
       

Kannada Duniya

58 ಮದುವೆಯಾದ ಈ ಮಾಜಿ ಸಂಸದರಿಗೆ ಪತ್ನಿಯರ ಹೆಸರೇ ನೆನಪಿಲ್ಲ…!

ಬಾಗುನ್ ಸುಂಬ್ರಾಯ್ 1967ರಿಂದ ಐದು ಬಾರಿ ಜಾರ್ಖಂಡ್ ನ ಚೈಬಾಸಾದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ನಾಲ್ಕು ಬಾರಿ ಶಾಸಕರಾಗಿದ್ದರು. ಈಗ್ಲೂ 2 ಬೆಡ್ ರೂಂ ಮನೆಯಲ್ಲಿ ವಾಸವಾಗಿರುವ ಬಾಗುನ್ ಸುಂಬ್ರಾಯ್ ಜಾರ್ಖಂಡ್, ಬಿಹಾರ್ ನಿಂದ ಹಿಡಿದು ದೆಹಲಿಯವರೆಗೂ ವಿಶೇಷ ಗುರುತು ಹೊಂದಿದ್ದಾರೆ.

ಮಳೆಯಿರಲಿ, ಬಿಸಿಲಿರಲಿ ಒಂದು ಧೋತಿ ಮಾತ್ರ ಅವ್ರ ಉಡುಗೆ. ಇವ್ರು ಈವರೆಗೆ 58 ಮದುವೆಯಾಗಿದ್ದಾರೆ ಎಂಬ ಮಾತಿದೆ. ಬಾಗುನ್ ಸುಂಬ್ರಾಯ್ ಗೆ ಐದು ಮಂದಿ ಪತ್ನಿಯರು ಎಂದು ಕೆಲವರು ಹೇಳಿದ್ದರು. ಮತ್ತೆ ಕೆಲವರು 60 ಮಂದಿ ಪತ್ನಿಯರಿದ್ದಾರೆ ಎನ್ನುತ್ತಾರೆ. ಈ ಬಗ್ಗೆ ಬಾಗುನ್ ಸುಂಬ್ರಾಯ್ ಹೇಳುವ ಉತ್ತರ ಭಿನ್ನವಾಗಿದೆ. ನಾನು ಎಷ್ಟು ಸಾರಿ ಮದುವೆಯಾಗಿದ್ದೇನೆ ಎಂಬುದು ನನಗೆ ನೆನಪಿಲ್ಲ ಎನ್ನುತ್ತಾರೆ.

ಮೂಲಗಳ ಪ್ರಕಾರ ಬಾಗುನ್ ಸುಂಬ್ರಾಯ್ ಅವರಿಗೆ ಅವ್ರ ಪತ್ನಿಯರ ಹೆಸರು ನೆನಪಿಲ್ಲವಂತೆ. 1942ರಲ್ಲಿ ಬಾಗುನ್ ಸುಂಬ್ರಾಯ್ ಮೊದಲ ಮದುವೆಯಾಗಿದ್ದರು. ಮಕ್ಕಳು-ಮೊಮ್ಮಕ್ಕಳ ಸಂಖ್ಯೆ ಸಾಕಷ್ಟಿದೆ. ಎಷ್ಟು ಮದುವೆಯಾದ್ರೂ ಯಾವುದೇ ಸಮಸ್ಯೆ ಎದುರಾಗಿಲ್ಲ ಎನ್ನುತ್ತಾರೆ ಸ್ಥಳೀಯರು.

ಬುಡಕಟ್ಟು ಜನಾಂಗದಲ್ಲಿ ಒಂದಕ್ಕಿಂತ ಹೆಚ್ಚು ಪತ್ನಿಯರನ್ನು ಹೊಂದಬಹುದು. ಅದಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ. ಬಾಗುನ್ ಸುಂಬ್ರಾಯ್ ಭಗವಾನ್ ಕೃಷ್ಣ ನನಗೆ ಸ್ಫೂರ್ತಿ ಎನ್ನುತ್ತಾರೆ. ಕೃಷ್ಣನಂತೆ ಅನಾನುಕೂಲ ಮಹಿಳೆಯರಿಗೆ ನೆರವಾಗಲು ಮದುವೆಯಾದೆ ಎನ್ನುತ್ತಾರೆ ಬಾಗುನ್ ಸುಂಬ್ರಾಯ್.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...