alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಐದು ಸ್ಥಳಗಳಲ್ಲಿ ಬೇಡವೇ ಬೇಡ ಸೆಕ್ಸ್

intimate-650x325

21ನೇ ಶತಮಾನದಲ್ಲಿ ಶಾರೀರಿಕ ಸಂಬಂಧದ ಬಗ್ಗೆ ಜನರು ಜಾಗರೂಕರಾಗ್ತಿದ್ದಾರೆ. ಇನ್ನೊಂದು ಕಡೆ ಹೊಸ ಹೊಸ ಪ್ರಯೋಗಗಳನ್ನು ಮಾಡ್ತಿದ್ದಾರೆ. ಇದನ್ನೊಂದು ರೀತಿಯಲ್ಲಿ ಫ್ಯಾಷನ್ ಎಂದು ಪರಿಗಣಿಸಿರುವ ಯುವ ಜನತೆ ಹೊಸ ಹೊಸ ಪ್ರಯೋಗಕ್ಕೆ ಇಳಿಯುತ್ತಿದ್ದಾರೆ. ನಾಲ್ಕು ಗೋಡೆಯ ಮಧ್ಯೆಯಿದ್ದ ಸೆಕ್ಸ್ ಈಗ ಪಾರ್ಕ್, ಕಾರ್, ಬಾತ್ರೂಮ್ ಸೇರಿದಂತೆ ಎಲ್ಲೆಡೆ ಮಾಮೂಲಿ ಎನ್ನುವಂತಾಗ್ತಿದೆ.

ಶಾರೀರಿಕ ಸಂಬಂಧ ಬೆಳೆಸುವಾಗ ಕೆಲವೊಂದು ವಿಷಯಗಳ ಬಗ್ಗೆ ಗಮನ ನೀಡುವುದು ಬಹಳ ಮುಖ್ಯ. ಕೆಲವೊಂದು ಪ್ರದೇಶಗಳಲ್ಲಿ ಶಾರೀರಿಕ ಸಂಬಂಧ ಬೆಳೆಸಿದ್ರೆ ಆಪತ್ತು ಗ್ಯಾರಂಟಿ. ಅಲ್ಲಿರುವ ಬ್ಯಾಕ್ಟೀರಿಯಾಗಳು ನಮಗೆ ತಿಳಿಯದೇ ನಮ್ಮ ಶರೀರವನ್ನು ಪ್ರವೇಶ ಮಾಡಿ ಸಮಸ್ಯೆ ತಂದೊಡ್ಡುತ್ತವೆ. ಹಾಗಾಗಿ ಕೆಲ ಪ್ರದೇಶಗಳಲ್ಲಿ ಅಪ್ಪಿತಪ್ಪಿಯೂ ಶಾರೀರಿಕ ಸಂಬಂಧ ಬೆಳೆಸಬಾರದು.

ಜಿಮ್ ನ ಲಾಕರ್ ರೂಂ ಈ ಪಟ್ಟಿಯಲ್ಲಿ ಸೇರುತ್ತದೆ. ಅಲ್ಲಿರುವ ಬ್ಯಾಕ್ಟೀರಿಯಾ ನಮ್ಮ ದೇಹ ಸೇರುವುದರಿಂದ ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಜಿಮ್ ಲಾಕರ್ ರೂಂಗೆ ಬರಿಗಾಲಿನಲ್ಲಿ ಹೋಗುವುದನ್ನೂ ನಿಷೇಧಿಸಲಾಗಿದೆ.

ಸಿನಿಮಾ ಥಿಯೇಟರ್ ನಲ್ಲಿ ಸಂಗಾತಿಗಳು ದೂರವಿರುವುದು ಒಳ್ಳೆಯದು. ಥಿಯೇಟರ್ ನಲ್ಲಿ ಬ್ಯಾಕ್ಟೀರಿಯಾ ಸಂಖ್ಯೆ ಜಾಸ್ತಿಯಿರುತ್ತದೆ. ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಜಾಸ್ತಿ ಇರುತ್ತದೆ. ಹಾಗಾಗಿ ಲೈಟ್ ಡಿಮ್ ಆಗ್ತಿದ್ದಂತೆ ಸಂಗಾತಿಗಳು ಹತ್ತಿರವಾಗುವುದು ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು.

ಮೈದಾನ ಹಾಗೂ ಉದ್ಯಾನವನ ಕೂಡ ಶಾರೀರಿಕ ಸಂಬಂಧ ಬೆಳೆಸಲು ಯೋಗ್ಯವಾದ ಸ್ಥಳವಲ್ಲ. ಮೈದಾನ ಹಾಗೂ ಪಾರ್ಕ್ ಎಂದೂ ಸ್ವಚ್ಛವಾಗಿರಲು ಸಾಧ್ಯವಿಲ್ಲ. ನಮ್ಮಂತೆಯೇ ಅನೇಕರು ಅಲ್ಲಿಗೆ ಬಂದು ಹೋಗ್ತಾರೆ. ಕೀಟಾಣು, ಪ್ರಾಣಿಗಳ ಮಲ ಮೂತ್ರವೆಲ್ಲ ಮೈದಾನದಲ್ಲಿರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳುವುದು ಒಳ್ಳೆಯದು.

ಬೀಚ್ ಪ್ರೇಮಿಗಳ ಅಚ್ಚುಮೆಚ್ಚಿನ ಸ್ಥಳ. ಒಳಚರಂಡಿ ನೀರಿನಿಂದ ಹಿಡಿದು ಪಕ್ಷಿ, ಪ್ರಾಣಿಗಳ ಮಲಮೂತ್ರದವರೆಗೆ, ಕಸ, ಕಡ್ಡಿ ಎಲ್ಲವೂ ಸಮುದ್ರದಲ್ಲಿರುತ್ತದೆ. ತಜ್ಞರ ಪ್ರಕಾರ ಸಮುದ್ರದ ನೀರು ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮಗಳನ್ನು ಬೀರುತ್ತದೆ. ಅತಿಸಾರ, ಸೋಂಕು, ಜ್ವರದಂತಹ ರೋಗಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಈ ಎಲ್ಲ ಸ್ಥಳಗಳಲ್ಲಿ ಶಾರೀರಿಕ ಸಂಬಂಧ ಬೆಳೆಸದಿರುವುದು ಬೆಸ್ಟ್ ಎನ್ನುತ್ತಾರೆ ತಜ್ಞರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...