alex Certify
ಕನ್ನಡ ದುನಿಯಾ       Mobile App
       

Kannada Duniya

ಏಕಾಂಗಿಯಾಗಿ ಯುದ್ಧ ವಿಮಾನ ಏರಿದ ಭಾರತದ ಮೊದಲ ಮಹಿಳೆ

ಮಧ್ಯಪ್ರದೇಶದ ರೇವಾ ಬಳಿಯಿರೋ ಪುಟ್ಟ ಗ್ರಾಮದಲ್ಲಿ ಹುಟ್ಟಿ ಬೆಳೆದ ಅವನಿ ಚತುರ್ವೇದಿ ಮುಂದೊಂದು ದಿನ ತಾನು ಭಾರತದ ಯುದ್ಧ ವಿಮಾನವನ್ನು ಏಕಾಂಗಿಯಾಗಿ ಮುನ್ನಡೆಸಬಹುದು ಅನ್ನೊ ಕನಸು ಕೂಡ ಕಂಡಿರಲಿಲ್ಲ. ಆದ್ರೀಗ ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ.

ವಯೊಲಿನ್ ಹಾಗೂ ಪೇಂಟಿಂಗ್ ಅವನಿಯ ನೆಚ್ಚಿನ ಹವ್ಯಾಸಗಳು. ಭಾರತೀಯ ವಾಯುಸೇನೆಯಿಂದ ತರಬೇತಿ ಪಡೆದ ಮೂವರು ಮಹಿಳಾ ಫೈಟರ್ ಪೈಲಟ್ ಗಳಲ್ಲಿ ಅವನಿ ಕೂಡ ಒಬ್ಬರು. ಜಾಮ್ನಗರ್ ನಿಂದ ಅವನಿ 30 ನಿಮಿಷಗಳ ಕಾಲ ಮಿಗ್-21 ಯುದ್ಧ ವಿಮಾನದಲ್ಲಿ ಏಕಾಂಗಿಯಾಗಿ ಹಾರಾಟ ನಡೆಸಿದ್ದಾರೆ.

ಈ ಮೂಲಕ ಮಹಿಳೆಯರು ಯಾವುದರಲ್ಲೂ ಕಮ್ಮಿಯಿಲ್ಲ ಅನ್ನೋದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಅವನಿಯ ತಂದೆ ಮಧ್ಯಪ್ರದೇಶ ಸರ್ಕಾರದಲ್ಲಿ ಎಕ್ಸಿಕ್ಯೂಟಿವ್ ಎಂಜಿನಿಯರ್. ಹಾಗಾಗಿ ಅವನಿಗೆ ತಾನು ಫೈಟರ್ ಪೈಲಟ್ ಆಗಬೇಕು ಅನ್ನೋ ಆಸೆ ಮೂಡಿತ್ತು.

2016ರಲ್ಲಿ ಆರಂಭಿಕ ತರಬೇತಿ ಮುಗಿಸಿದ ಅವನಿ, ಮತ್ತೆ ಹಿಂದಿರುಗಿ ನೋಡಲೇ ಇಲ್ಲ. ತಮ್ಮ ಗುರಿ ಸಾಧಿಸುವತ್ತ ಮುಂದಡಿ ಇಟ್ಟಿದ್ರು. ಮಿಗ್-21 ವಿಮಾನವನ್ನು ಚಲಾಯಿಸೋದು ಅತ್ಯಂತ ಸವಾಲಿನ ಕೆಲಸ. ಯಾಕಂದ್ರೆ ಇದರ ಟೇಕಾಫ್ ಸ್ಪೀಡ್ 340 ಕಿಮೀ ಇರುತ್ತದೆ. ಆದ್ರೆ ಎಲ್ಲಾ ಸವಾಲನ್ನೂ ಎದುರಿಸಿ ಯಶಸ್ವಿಯಾಗಿದ್ದಾಳೆ ಅವನಿ ಚತುರ್ವೇದಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...