alex Certify
ಕನ್ನಡ ದುನಿಯಾ       Mobile App
       

Kannada Duniya

ಆಸ್ಟ್ರೇಲಿಯಾದ ಗರ್ಭಿಣಿಯರು ಮಾಡ್ತಾರೆ ಇಂತ ಕೆಲಸ..!

pregnent-P-220616

ಆಸ್ಟ್ರೇಲಿಯಾದಲ್ಲಿ ವಿಜ್ಞಾನಿಗಳು ಆಶ್ಚರ್ಯಪಡುವಂತಹ ವರದಿಯೊಂದು ತನಿಖೆಯಿಂದ ಹೊರಬಿದ್ದಿದೆ. ಗರ್ಭಿಣಿ ಹಾಗೂ ಸಿಗರೇಟ್ ನಡುವಿನ ಸಂಬಂಧ ಅಲ್ಲಿನ ವಿಜ್ಞಾನಿಗಳನ್ನೂ ಆತಂಕಕ್ಕೆ ತಳ್ಳಿದೆ. ಕಳೆದ 10 ವರ್ಷಗಳಿಂದ ನಡೆಸಿದ ದೀರ್ಘ ಅಧ್ಯಯನದಲ್ಲಿ ಮಹತ್ವದ ವಿಷಯವೊಂದು ಹೊರಬಿದ್ದಿದೆ.

ಆಸ್ಟ್ರೇಲಿಯಾದಲ್ಲಿ ಹದಿಹರೆಯದ ಹುಡುಗಿಯರ ಮೇಲೆ ಈ ಅಧ್ಯಯನ ನಡೆದಿದೆ. ಸಿಗರೇಟ್ ಸೇದುವ ಹದಿಹರೆಯದ ಗರ್ಭಿಣಿಯರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಮಗು ಚಿಕ್ಕದಾಗಿ ಜನಿಸುತ್ತದೆ ಎಂಬ ಕಾರಣಕ್ಕೆ ಗರ್ಭಿಣಿಯರು ಸಿಗರೇಟ್ ಸೇದುತ್ತಿದ್ದಾರೆ.

16 ವರ್ಷದ ಗರ್ಭಿಣಿ, ಗರ್ಭ ಧರಿಸಿದ ನಂತ್ರ ಸಿಗರೇಟ್ ಸೇದಲು ಮುಂದಾಗಿದ್ದಾಳೆ. ಮಗು ತೂಕ ಕಡಿಮೆಯಾಗಿ, ಆಕಾರ ಚಿಕ್ಕದಾಗುತ್ತದೆ ಎಂಬ ಕಾರಣಕ್ಕೆ ಸಿಗರೇಟು ಸೇದುತ್ತಿರುವುದಾಗಿ ಆಕೆ ಹೇಳಿದ್ದಾಳೆ. ಅಲ್ಲದೆ ಸಿಗರೇಟು ಸೇದುವುದರಿಂದ ಹೆರಿಗೆ ಸಮಯದಲ್ಲಿ ನೋವು ತಿನ್ನುವುದು ಕಡಿಮೆಯಾಗುತ್ತದೆ ಎಂಬ ಕಾರಣವನ್ನೂ ಗರ್ಭಿಣಿಯರು ನೀಡುತ್ತಿದ್ದಾರೆ.

ಮಗುವಿನ ತೂಕ ಜಾಸ್ತಿಯಾದ್ರೆ ಹೆರಿಗೆ ಸಮಯದಲ್ಲಿ ಸಾಕಷ್ಟು ನೋವುಣ್ಣಬೇಕಾಗುತ್ತದೆ. ಹಾಗಾಗಿ ಇದ್ರಿಂದ ತಪ್ಪಿಸಿಕೊಳ್ಳಲು ಗರ್ಭಿಣಿಯರು ಸಿಗರೇಟ್ ಸೇದುತ್ತಿದ್ದಾರಂತೆ. ಆದ್ರೆ ಗರ್ಭ ಧರಿಸಿದಾಗ ಸಿಗರೇಟು ಸೇವನೆ ಮಾಡುವುದು ಅಪಾಯಕಾರಿ. ತಾಯಿ ಹಾಗೂ ಮಗು ಇಬ್ಬರಿಗೂ ಕ್ಯಾನ್ಸರ್ ಕಾಡುವ ಸಂಭವವಿರುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...