alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರೆಡಿಟ್ ಕಾರ್ಡ್ ಹೊಂದಿದ್ದರೆ ತಪ್ಪದೆ ಓದಿ ಈ ಸುದ್ದಿ

credit cardsಹಣವಿಲ್ಲದಿದ್ದರೂ ಶಾಪಿಂಗ್ ಮಾಡಲು ಕ್ರೆಡಿಟ್ ಕಾರ್ಡ್ ಸಹಕಾರಿಯಾಗಿದೆ. ಆದರೆ ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿ ಎಚ್ಚರ ತಪ್ಪಿದರೂ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ.

ಕ್ರೆಡಿಟ್ ಕಾರ್ಡ್ ಬಳಸಿದ ನಂತರ ಹಣವನ್ನು ನಿಗದಿತ ಅವಧಿಯಲ್ಲಿ ಮರು ಪಾವತಿಸಿ. ಇಲ್ಲದಿದ್ದಲ್ಲಿ ಅನಗತ್ಯವಾಗಿ ದಂಡ ತೆರಬೇಕಾಗುತ್ತದಲ್ಲದೆ ಕ್ರೆಡಿಟ್ ಕಾರ್ಡ್ ಸ್ಕೋರ್ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಮುಂದೆ ಮನೆ ಅಥವಾ ವಾಹನ ಸಾಲ ತೆಗೆದುಕೊಳ್ಳಬೇಕಾದಾಗ ತೊಂದರೆಯಾಗುತ್ತದೆ.

ಅನಗತ್ಯವಾಗಿ ಹಲವಾರು ಕ್ರೆಡಿಟ್ ಕಾರ್ಡ್ ಗಳನ್ನು ಇಟ್ಟುಕೊಳ್ಳಬೇಡಿ. ಹೆಚ್ಚು ಕ್ರೆಡಿಟ್ ಕಾರ್ಡ್ ಗಳಿದ್ದರೆ ಖರೀದಿಗೆ ಹೆಚ್ಚಿನ ಅವಕಾಶವಿರುತ್ತದಾದರೂ ಮರುಪಾವತಿಗೆ ವಿಳಂಬವಾದರೆ ಅಧಿಕ ಬಡ್ಡಿ ತೆರಬೇಕಾಗುತ್ತದೆ. ಅಲ್ಲದೇ ಸಣ್ಣ ಪುಟ್ಟ ಖರೀದಿಗೂ ಕ್ರೆಡಿಟ್ ಕಾರ್ಡ್ ಬಳಸಬೇಡಿ.

ಕ್ರೆಡಿಟ್ ಕಾರ್ಡ್ ಪಡೆಯುವಾಗ ಸಂಬಂಧಪಟ್ಟ ಕಂಪನಿಗಳ ನಿಯಮಗಳ ಬಗ್ಗೆ ತಪ್ಪದೇ ತಿಳಿದುಕೊಳ್ಳಿ. ಕ್ರೆಡಿಟ್ ಕಾರ್ಡ್ ಬಳಸಿ ಎ.ಟಿ.ಎಂ. ನಲ್ಲಿ ಹಣ ಪಡೆಯುವುದನ್ನು ಆದಷ್ಟು ತಡೆಗಟ್ಟಿ. ಹಣದ ವಹಿವಾಟಿಗೆ ಬಡ್ಡಿದರ ಹೆಚ್ಚು ಎಂಬುದನ್ನು ಗಮನಿಸಿ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...