alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ರತಿಮ ಕಲಾವಿದೆಗೊಂದು ಸಲಾಂ

painter sheelaಮನಸ್ಸು ಮಾಡಿದ್ರೆ ಯಾವುದೂ ಅಸಾಧ್ಯವಲ್ಲ, ಕೈಗಳಿಲ್ಲದಿದ್ರೂ ಅದ್ಭುತವಾಗಿ ಚಿತ್ರ ಬಿಡಿಸುವ ಅಪ್ರತಿಮ ಕಲಾವಿದೆ ಶೀಲಾ ಶರ್ಮಾ ಇದಕ್ಕೆ ಬೆಸ್ಟ್ ಎಕ್ಸಾಂಪಲ್.

4 ನೇ ವರ್ಷದಲ್ಲೇ ಎರಡೂ ಕೈಗಳನ್ನು ಕಳೆದುಕೊಂಡಿದ್ದ ಶೀಲಾ, ಕಾಲಿನಿಂದ್ಲೇ ಬರೆಯುವುದು, ಪೇಂಟ್ ಮಾಡೋದನ್ನು ಅಭ್ಯಾಸ ಮಾಡಿಕೊಂಡ್ರು. 48 ವರ್ಷ ವಯಸ್ಸಿನ ಶೀಲಾ ಈಗ ಕಾಲ್ಬೆರಳು ಮತ್ತು ಬಾಯಿಯಿಂದ್ಲೇ ಪೇಂಟಿಂಗ್ ಮಾಡ್ತಾರೆ.

ಅವರು ಬಿಡಿಸಿದ ಚಿತ್ರಗಳು ಎಕ್ಸಿಬಿಷನ್ ನಲ್ಲಿ ಕೂಡ ಪ್ರದರ್ಶನಗೊಂಡಿವೆ. ಸದ್ಯ ದೆಹಲಿಯ ಮೆಟ್ರೋಪಾಲಿಟನ್ ಹೋಟೆಲ್ ನಲ್ಲಿ ‘ದಿ ಗಿಫ್ಟೆಡ್’ ಹೆಸರಲ್ಲಿ ಶೀಲಾ ಅವರ ಪೇಂಟಿಂಗ್ ಪ್ರದರ್ಶನ ಕೂಡ ನಡೆಯುತ್ತಿದೆ.

ಸ್ತ್ರೀ ಮತ್ತು ಪ್ರಕೃತಿ ಇವೆರಡಕ್ಕೆ ಸಂಬಂಧಪಟ್ಟ ಎಲ್ಲ ಭಾವಗಳನ್ನೂ ಶೀಲಾ ತಮ್ಮ ಕುಂಚದಲ್ಲಿ ಅರಳಿಸುತ್ತಾರೆ. ಅಪಘಾತದಲ್ಲಿ ಕೈಗಳನ್ನು ಕಳೆದುಕೊಂಡ ಬಳಿಕ ಅವರಿಗೆ ಸಾಕಷ್ಟು ಸವಾಲುಗಳು ಎದುರಾದ್ವು. ಅವರು ಕಾಲ್ಬೆರಳಲ್ಲಿ, ಬಾಯಲ್ಲಿ ಚಿತ್ರ ಬಿಡಿಸುವುದನ್ನು ನೋಡಿ ಎಲ್ಲರೂ ಅಚ್ಚರಿಪಡುತ್ತಿದ್ರು. ಮಗಳು ಸುರಕ್ಷಿತ ಉದ್ಯೋಗ ಸೇರಲಿ ಅನ್ನೋ ಆಸೆ ಶೀಲಾ ಅವರ ತಂದೆಗಿತ್ತು. ಆದ್ರೆ ಕಲೆಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಶೀಲಾ, ಒಬ್ಬ ಅಪ್ರತಿಮ ಕಲಾವಿದೆಯಾಗಬೇಕೆಂದು ಹಠ ತೊಟ್ಟು ಅದರಲ್ಲಿ ಯಶಸ್ಸು ಕೂಡ ಸಾಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...