alex Certify
ಕನ್ನಡ ದುನಿಯಾ       Mobile App
       

Kannada Duniya

ಆಟೋ ಚಾಲಕನ ಮಾನವೀಯತೆಗೆ ಹೇಳಿ ಹ್ಯಾಟ್ಸಾಪ್

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲರೂ ಬ್ಯುಸಿಯಾಗಿರುತ್ತಾರೆ. ಮತ್ತೊಬ್ಬರ ಕಷ್ಟದತ್ತ ಗಮನ ಹರಿಸುವ ವ್ಯವಧಾನವೂ ಬಹುತೇಕರಿಗೆ ಇರುವುದಿಲ್ಲ. ಇಂತಹ ಹಲವು ಘಟನೆಗಳ ಮಧ್ಯೆ ಈ ಪ್ರಕರಣ ವಿಭಿನ್ನವಾಗಿದೆ. ಹಣಕ್ಕಾಗಿ ಪರದಾಡುತ್ತಿದ್ದ ಯುವತಿಯೊಬ್ಬಳಿಗೆ ತನ್ನ ಉಳಿತಾಯದ ಹಣವನ್ನು ಸಕಾಲಕ್ಕೆ ನೀಡುವ ಮೂಲಕ ಆಟೋ ಚಾಲಕರೊಬ್ಬರು ಮಾನವೀಯತೆ ಮೆರೆದಿದ್ದಾರೆ.

ಹೈದರಾಬಾದ್ ನಲ್ಲಿ ಈ ಘಟನೆ ನಡೆದಿದ್ದು, ವಾರಿಜಾಶ್ರೀ ವೇಣುಗೋಪಾಲ್ ಎಂಬವರು ವೀಸಾಗಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರಿಗೆ ಇದಕ್ಕಾಗಿ 5 ಸಾವಿರ ರೂ. ಹಣದ ಅಗತ್ಯವಿತ್ತು. ಆದರೆ ವಾರಿಜಾಶ್ರೀ ಬಳಿ ಕೇವಲ 2 ಸಾವಿರ ರೂ. ಮಾತ್ರವಿತ್ತು. ಅವರ ಬ್ಯಾಂಕ್ ಅಕೌಂಟ್ ನಲ್ಲಿ ಸಾಕಷ್ಟು ಹಣವಿತ್ತಾದರೂ 10 ರಿಂದ 15 ಎಟಿಎಂಗಳಿಗೆ ಅಲೆದರೂ ತಾಂತ್ರಿಕ ಕಾರಣಕ್ಕೆ ಹಣ ಪಡೆಯಲು ಸಾಧ್ಯವಾಗಲಿಲ್ಲ.

ವೀಸಾ ಮಾಡಿಸುವ ಅನಿವಾರ್ಯತೆ ಇದ್ದ ಕಾರಣ ವಾರಿಜಾಶ್ರೀ ತಮ್ಮ ಎಟಿಎಂ ಕಾರ್ಡ್ ಇಟ್ಟುಕೊಂಡು ಹಣ ನೀಡುವಂತೆ ಕೆಲವರ ಬಳಿ ಕೇಳಿದರೂ ಸ್ಪಂದನೆ ಸಿಗಲಿಲ್ಲ. ಇವರ ಪರದಾಟವನ್ನು ಗಮನಿಸುತ್ತಿದ್ದ ಆಟೋ ಚಾಲಕ ಬಾಬಾ ಎಂಬವರು ಅಪರಿಚಿತ ಯುವತಿಗೆ ನೆರವಾಗಲು ನಿರ್ಧರಿಸಿದ್ದಾರೆ. ತಮ್ಮ ಉಳಿತಾಯದ ಹಣ 3 ಸಾವಿರ ರೂ. ಗಳನ್ನು ವಾರಿಜಾಶ್ರೀಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಆಟೋ ಚಾಲಕ ಬಾಬಾ ಸಕಾಲಕ್ಕೆ ನೀಡಿದ ನೆರವಿನಿಂದ ವೀಸಾ ಪಡೆಯಲು ಯಶಸ್ವಿಯಾದ ವಾರಿಜಾಶ್ರೀ, ತಮ್ಮ ಫೇಸ್ ಬುಕ್ ಪುಟದಲ್ಲಿ ಈ ಕುರಿತು ಬರೆದುಕೊಂಡಿದ್ದಾರೆ. ಅಪರಿಚಿತಳಾಗಿದ್ದ ತನಗೆ ನೆರವು ನೀಡುವ ಮೂಲಕ ಬಾಬಾ, ಮಾನವೀಯತೆಗಿಂತ ಮಿಗಿಲಾದ ಧರ್ಮವಿಲ್ಲವೆಂಬುದನ್ನು ನಿರೂಪಿಸಿದ್ದಾರೆಂದು ವಾರಿಜಾಶ್ರೀ ಹೇಳಿದ್ದಾರೆ. ವಾರಿಜಾಶ್ರೀಯವರ ಫೇಸ್ ಬುಕ್ ಪೋಸ್ಟ್ ಕೆಳಕಂಡಂತಿದೆ.

“This is Baba, an auto driver in Hyderabad. Baba saved my day. I was here for a visa interview, and short of cash by a couple of thousands. I needed around 5000 for the visa fees and had just 2000 and odd. We visited about 10 to 15 ATM centres, without any luck,” she said. There was some issue with the ATMs in Hyderabad when this woman needed money. “I even requested a few stores with ATM machines, if they could swipe my card and give me cash, but in vain,” she wrote in her Facebook post and then the driver came to her rescue by offering his savings saying she could pay him later.

“Baba senses my helplessness and offers me 3000 out of his savings and says ‘Madam aap isko use karlo aur baad mein hotel ke paas vapas kardo, koi baat nahin’. I was overwhelmed by his act of kindness and was full of gratitude for this man that I never met before. He selflessly helped a total stranger. I was moved. Yes, God manifests in the strangest and beautiful ways. A new life lesson learnt everyday! I am honoured to find a friend in you, Baba. Thank you for reminding me that humanity is the greatest religion of all.”

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...