alex Certify
ಕನ್ನಡ ದುನಿಯಾ       Mobile App
       

Kannada Duniya

ಆಧಾರ್ ಕಾರ್ಡ್ ಇದ್ರೆ ಮಾತ್ರ ಮಾಡ್ತಾರೆ ಮದ್ವೆ..!

adhaar-templeಬಾಲ್ಯ ವಿವಾಹವನ್ನು ತಡೆಯಲು ಉತ್ತರಾಖಂಡ್ ನ ಅಲ್ಮೋರಾದಲ್ಲಿರುವ ಚೈತಿ ಗೋಲು ದೇವಸ್ಥಾನದಲ್ಲಿ ಅದ್ಭುತ ಯೋಜನೆಯೊಂದನ್ನು ರೂಪಿಸಲಾಗಿದೆ. ಈ ದೇವಾಲಯದಲ್ಲಿ ನೀವು ಮದುವೆ ಆಗ್ಬೇಕು ಅಂದ್ರೆ ನಿಮ್ಮ ಬಳಿ ಆಧಾರ್ ಕಾರ್ಡ್ ಇರಲೇಬೇಕು.

ಆಧಾರ್ ಕಾರ್ಡ್ ತೋರಿಸಿದ ಬಳಿಕ ನಿಮ್ಮ ವಿವಾಹ ನೆರವೇರಿಸಲಾಗುತ್ತದೆ. ವರ್ಷಕ್ಕೆ ಇಲ್ಲಿ ಕನಿಷ್ಠ ಅಂದ್ರೂ 400 ಮದುವೆಗಳು ನಡೆಯುತ್ತವೆ, ಸೀಸನ್ ನಲ್ಲಿ ಪ್ರತಿದಿನ 4-5 ಮದುವೆಗಳು ಈ ದೇವಾಲಯದಲ್ಲಿ ಮಾಮೂಲು. ಬಹಳಷ್ಟು ಮದುವೆಗಳನ್ನು ನೆರವೇರಿಸುವುದರಿಂದ ಒಮ್ಮೊಮ್ಮೆ ವಧು- ವರರ ವಿಳಾಸವನ್ನು ಪರಿಶೀಲಿಸಲು ಸಾಧ್ಯವಾಗುವುದಿಲ್ಲ.

ಹೊರ ರಾಜ್ಯದವರು ಕೂಡ ಇಲ್ಲಿ ಸಪ್ತಪದಿ ತುಳಿಯುತ್ತಾರೆ, ಅವರು ಪ್ರಾಪ್ತರು ಹೌದೋ ಅಲ್ಲವೋ ಎಂಬುದನ್ನು ತಿಳಿದುಕೊಳ್ಳುವುದು ಕಷ್ಟ. ಈ ಹಿಂದೆ ನೇಪಾಳದ ಅಪ್ರಾಪ್ತೆಯರಿಗೆ ಮದುವೆ ಮಾಡಿಸಲು ಇಲ್ಲಿಗೆ ಕರೆತಂದಿದ್ದೂ ಇದೆ. ಹಾಗಾಗಿ ಮದುವೆಗೂ ಮುನ್ನ ವಧು- ವರರ ಆಧಾರ್ ಕಾರ್ಡ್ ಪರಿಶೀಲಿಸಲು ದೇವಸ್ಥಾನ ಆಡಳಿತ ಮಂಡಳಿ ನಿರ್ಧರಿಸಿದೆ. ಆಧಾರ್ ಕಾರ್ಡ್ ನಲ್ಲಿ ಹೆಸರು, ವಯಸ್ಸು, ತಂದೆಯ ವಿವರ, ವಿಳಾಸ ಎಲ್ಲ ವಿವರಗಳೂ ಇರುವುದರಿಂದ ಅದನ್ನೇ ಇಲ್ಲಿ ಕಡ್ಡಾಯ ಮಾಡಲಾಗಿದೆ. ಆಧಾರ್ ಕಾರ್ಡ್ ಇಲ್ಲದೇ ಇದ್ದ ಪಕ್ಷದಲ್ಲಿ ವಧು- ವರರ ಕುಟುಂಬದಿಂದ ಅವರ ವಯಸ್ಸಿನ ಬಗ್ಗೆ ನಿಖರ ಮಾಹಿತಿ ಸಿಕ್ಕಲ್ಲಿ ಮಾತ್ರ ಮದುವೆ ಮಾಡಿಸಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...