alex Certify
ಕನ್ನಡ ದುನಿಯಾ       Mobile App
       

Kannada Duniya

ಬರಿಗೈಯಲ್ಲೇ ಪಕೋಡಾ ಕರೀತಾನೆ ಈತ…!

ಬಿಸಿ ಬಿಸಿಯಾದ ಎಣ್ಣೆ ಮೈ ಕೈ ಮೇಲೆ ಬಿದ್ದರೆ ಪ್ರಾಣ ಹೋದಂತಾಗುತ್ತದೆ. ಆದರೆ ಅಲಹಾಬಾದಿನ ಈ ವ್ಯಕ್ತಿ ಮಾತ್ರ ಜಾಲರಿ ಸೌಟು ಬಳಸದೇ ಬರಿಗೈಯಲ್ಲೇ ಪಕೋಡಾ ಕರಿಯುವ ಮೂಲಕ ನೋಡುಗರನ್ನು ಬೆಚ್ಚಿ ಬೀಳಿಸಿದ್ದಾರೆ.

ಹೌದು. ಅಲಹಾಬಾದಿನ 60 ವರ್ಷದ ರಾಮ್ ಬಾಬು 200 ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶದ ಕುದಿಯುತ್ತಿರುವ ಎಣ್ಣೆಯ ಬಾಣಲಿಯಲ್ಲಿ ಬರಿಗೈನಲ್ಲೇ ಪಕೋಡಾ ಕರಿಯುತ್ತಾರೆ. ಇದಕ್ಕಾಗಿ ಅವರು ಈಗ ಫೇಮಸ್ ಆಗಿದ್ದಾರೆ. ಇವರು ಬರಿಗೈನಲ್ಲಿ ಪಕೋಡಾ ಕರಿಯುವುದನ್ನು ನೋಡಲೆಂದೇ ಬಹಳಷ್ಟು ಜನ ಬರುತ್ತಾರಂತೆ. ಇದರಿಂದಾಗಿ ರಾಮ್ ಬಾಬು ವ್ಯಾಪಾರವೂ ಚೆನ್ನಾಗಿ ನಡೆದಿದೆ.

ಕಳೆದ 40 ವರ್ಷಗಳಿಂದ ಬರಿಗೈನಲ್ಲಿ ತಾವು ಪಕೋಡಾ ಕರಿಯುತ್ತಿದ್ದು, ಇದುವರೆಗೂ ಒಂದು ಸಣ್ಣ ಸುಟ್ಟ ಗಾಯವೂ ಆಗಿಲ್ಲವೆನ್ನುತ್ತಾರೆ ಅವರು. ಒಮ್ಮೆ ಜಾಲರಿ ಸೌಟು ಮರೆತು ಕುದಿಯುತ್ತಿದ್ದ ಎಣ್ಣೆಯ ಬಾಣಲೆಗೆ ರಾಮ್ ಬಾಬು ಕೈ ಹಾಕಿದ್ದರಂತೆ. ಆಗ ಅವರಿಗೆ ಯಾವ ಬಿಸಿಯ ಅನುಭವ ಆಗದ ಕಾರಣ ಅಂದಿನಿಂದಲೂ ಬರಿಗೈನಲ್ಲೇ ಪಕೋಡಾ ಕರಿಯುತ್ತಿದ್ದಾರಂತೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...