alex Certify
ಕನ್ನಡ ದುನಿಯಾ       Mobile App
       

Kannada Duniya

ಮುಟ್ಟಿನ ಸೆಕ್ಸ್ ವೇಳೆ ಮತ್ತಷ್ಟು ಉತ್ತೇಜಿತರಾಗ್ತಾರೆ ಮಹಿಳೆಯರು

ದಿನಗಳಲ್ಲಿ ಸೆಕ್ಸ್ ಬಗ್ಗೆ ಮಾತನಾಡಿದ್ರೆ ಮೂಗು ಮುರಿಯುವ ಮಹಿಳೆಯರಿದ್ದಾರೆ. ಮುಟ್ಟಿನ ಬಗ್ಗೆ ಧಾರ್ಮಿಕ ನಂಬಿಕೆಯೂ ಇದಕ್ಕೆ ಕಾರಣ. ಜೊತೆಗೆ ಲೈಂಗಿಕ ನೈರ್ಮಲ್ಯ, ಮುಟ್ಟಿನ ವೇಳೆ ಕಾಡುವ ನೋವು ಮಹಿಳೆಯರನ್ನು ಆ ದಿನಗಳಲ್ಲಿ ಸೆಕ್ಸ್ ನಿಂದ ದೂರ ಓಡುವಂತೆ ಮಾಡುತ್ತದೆ. ಆದ್ರೆ ಮುಟ್ಟಿನ ವೇಳೆ ಶಾರೀರಿಕ ಸಂಬಂಧ ಬೆಳೆಸುವವರ ಸಂಖ್ಯೆ ಕಡಿಮೆಯೇನಿಲ್ಲ.

ಬಹುತೇಕ ಮಹಿಳೆಯರು ಮುಟ್ಟಿನ ದಿನಗಳಲ್ಲಿ ಅತಿ ಹೆಚ್ಚು ಉತ್ತೇಜಿತರಾಗ್ತಾರೆ. ವಿಜ್ಞಾನಿಗಳ ಪ್ರಕಾರ ಮುಟ್ಟಿನ ಮೊದಲ ದಿನವಿದ್ದ ನೋವು ಹಾಗೂ ಕೆಟ್ಟ ಮೂಡ್ ಎರಡನೇ ದಿನ ಇರೋದಿಲ್ಲ. ಎರಡು ಹಾಗೂ ಮೂರನೇ ದಿನ ಶಾರೀರಿಕ ಸಂಬಂಧ ಬೆಳೆಸಿದ್ರೆ ಯಾವುದೇ ಅಪಾಯವಿಲ್ಲ. ಈ ವೇಳೆ ಮಹಿಳೆಯರು ಮತ್ತಷ್ಟು ಉತ್ತೇಜಿತರಾಗುವುದ್ರಿಂದ ಮುಟ್ಟಿನ ವೇಳೆ ಶಾರೀರಿಕ ಸಂಬಂಧ ಬೆಳೆಸಿದ್ರೆ ಹೆಚ್ಚು ಖುಷಿ ಸಿಗುತ್ತೆ ಎನ್ನುತ್ತಾರೆ ವಿಜ್ಞಾನಿಗಳು.

ಮುಟ್ಟಿನ ದಿನಗಳಲ್ಲಿ ಶಾರೀರಿಕ ಸಂಬಂಧ ಬೆಳೆಸುವುದು ದೊಡ್ಡ ವಿಷ್ಯವಲ್ಲ. ಇತ್ತೀಚಿನ ದಿನಗಳಲ್ಲಿ ಇದು ಸಾಮಾನ್ಯ ಎನ್ನುವಂತಾಗಿದೆ. ಆದ್ರೆ ಈ ವೇಳೆ ಸಂಬಂಧ ಬೆಳೆಸುವ ಮುನ್ನ ಕಾಂಡೋಮ್ ಅವಶ್ಯಕವಾಗಿ ಬಳಸಿ ಎಂದು ವೈದ್ಯರು ಸಲಹೆ ನೀಡುತ್ತಾರೆ. ಮುಟ್ಟಿನ ವೇಳೆ ಕಾಂಡೋಮ್ ಬಳಸೋದ್ರಿಂದ ಸೋಂಕು ಹಾಗೂ ಹೆಚ್ ಐ ವಿ ಯಂತಹ ರೋಗದಿಂದ ರಕ್ಷಣೆ ಸಿಗುತ್ತದೆ. ಗರ್ಭನಿರೋಧಕ ಮಾತ್ರೆ ಬಳಸುತ್ತಿದ್ದರೂ ಮುಟ್ಟಿನ ವೇಳೆ ಸಂಬಂಧ ಬೆಳೆಸುವುದಾದ್ರೆ ಕಾಂಡೋಮ್ ಬಳಸಿ ಎನ್ನುತ್ತಾರೆ ವೈದ್ಯರು.

ಮುಟ್ಟಿನ ವೇಳೆ ಸಂಬಂಧ ಬೆಳೆಸುವ ಮುನ್ನ ಸಂಗಾತಿಗೆ ಈ ಬಗ್ಗೆ ತಿಳಿಸುವುದು ಒಳ್ಳೆಯದು. ಹಾಗೆ ಅವರ ಅಭಿಪ್ರಾಯಕ್ಕೂ ಮಹತ್ವ ನೀಡಬೇಕಾಗುತ್ತದೆ. ಈ ಬಗ್ಗೆ ಕುಳಿತು ಮಾತನಾಡಿ ನಂತ್ರ ಸಂಬಂಧ ಬೆಳೆಸುವುದು ಸೂಕ್ತ. ಮಹಿಳೆ ಮುಟ್ಟಿನ ವೇಳೆ ಸಂಬಂಧ ಬೆಳೆಸಲು ಮುಂದಾದ್ರೂ ಪತಿ ಇದಕ್ಕೆ ಒಪ್ಪದಿರಬಹುದು. ಹಾಗಾಗಿ ಇಬ್ಬರು ಈ ಬಗ್ಗೆ ಮಾತನಾಡಿ ತೀರ್ಮಾನಕ್ಕೆ ಬರಬೇಕಾಗುತ್ತದೆ.

ಮುಟ್ಟಿನ ವೇಳೆ ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಪ್ರಶ್ನೆ ಕೊಳಕು. ಈ ವೇಳೆ ಸಂಬಂಧ ಬೆಳೆಸಿದ್ರೆ ಬಟ್ಟೆಯೆಲ್ಲ ಕೊಳಕಾಗುತ್ತದೆ ಎಂಬ ಚಿಂತೆ ಅನೇಕರನ್ನು ಕಾಡುತ್ತದೆ. ಸಂಬಂಧ ಬೆಳೆಸುವ ಮೊದಲು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾಗುತ್ತದೆ. ಕೆಲವರು ಬಾತ್ ರೂಮಿನಲ್ಲಿಯೇ ಸಂಬಂಧ ಬೆಳೆಸಿದ್ರೆ ಮತ್ತೆ ಕೆಲವರು ಪ್ಲಾಸ್ಟಿಕ್ ಟೇಬಲ್ ಕ್ಲಾತ್ ಅಥವಾ ಪ್ರತ್ಯೇಕ ಬಟ್ಟೆಯನ್ನು ಹಾಸಿಗೆ ಮೇಲೆ ಹಾಕಿ ಕೊಳಕಾಗದಂತೆ ನೋಡಿಕೊಳ್ಳುತ್ತಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...