alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರಿನ ಏರ್ ಬ್ಯಾಗ್ ಕೆಲಸ ಮಾಡುವುದಾದರೂ ಹೇಗೆ…?

airbag-system-

ಸರಿ ಸುಮಾರು 20 ವರ್ಷಗಳ ಹಿಂದೆ ಫೋರ್ಡ್ ಕಂಪನಿ ಕಾರಿನ ಏರ್ ಬ್ಯಾಗ್ ಸಿಸ್ಟಂ ನ್ನು ಮಾರುಕಟ್ಟೆಗೆ ತಂದಾಗ ಜನರು ನಗೆಯಾಡಿದ್ದರು. ಅದನ್ನು ಬಲೂನಿಗೆ ಹೋಲಿಸಿದ್ದರು.

ಏರ್ ಬ್ಯಾಗ್ ಕಾರಿನ ಚಾಲಕ ಮತ್ತು ಪ್ರಯಾಣಿಕರ ವೇಗವನ್ನು ಶೂನ್ಯಕ್ಕೆ ತರುತ್ತದೆ. ಉದಾಹರಣೆಗೆ ಒಂದು ಕಾರು ಪ್ರತಿ ಗಂಟೆಗೆ 40 ಕಿ.ಮೀ. ವೇಗದಲ್ಲಿ ಚಲಿಸುತಿದ್ದರೆ ಅದರಲ್ಲಿರುವ ನಿಮ್ಮ ದೇಹವು ಕೂಡ ಅಷ್ಟೇ ವೇಗದಲ್ಲಿ ಚಲಿಸುತ್ತಿರುತ್ತದೆ. ಒಂದು ವೇಳೆ ಸಡನ್ ಆಗಿ ಕಾರು ಒಂದು ಗೋಡೆಗೆ ಡಿಕ್ಕಿ ಹೊಡೆದರೆ ನೀವು ಇನ್ನೂ ಅದೇ ವೇಗದಲ್ಲಿರುತ್ತೀರಿ.

ಆಗ ನಿಮ್ಮ ದೇಹ ಕಾರಿನ ಮುಂಭಾಗದಲ್ಲಿರುವ ಸ್ಟೀರಿಂಗ್ ಅಥವಾ ಡ್ಯಾಶ್ ಬೋರ್ಡಿಗೆ ಡಿಕ್ಕಿಯಾಗುತ್ತದೆ. ಹಾಗಾಗಿ ನಿಮ್ಮ ದೇಹವನ್ನು ಒಂದೇ ಸ್ಥಳದಲ್ಲಿಡುವಂತೆ ಕೆಲಸ ಮಾಡಬೇಕಾಗುತ್ತದೆ. ಆ ಕೆಲಸ ಸೀಟ್ ಬೆಲ್ಟಿನದು. ಕಾರು ಅಪಘಾತವನ್ನು ನ್ಯೂಟನ್ನಿನ ಲಾ ಆಫ್ ಮೋಷನ್ ಕಂಟ್ರೋಲ್ ಮಾಡುತ್ತದೆ.

ನಿಮಗೆ ಆಶ್ಚರ್ಯವಾಗಬಹುದು, ಕಾರ್ ರೇಸಿನಲ್ಲಿ ಭಯಾನಕವಾದ ಅಪಘಾತವಾದಾಗಲು ಕೆಲವೊಮ್ಮೆ ಚಾಲಕರು ಸೂಪರ್ ಮ್ಯಾನ್ ನಂತೆ ಹೊರ ಬರುವುದುಂಟು. ಒಂಚೂರು ಗಾಯವಿಲ್ಲದೆಯೇ ! ಇದಕ್ಕೆ ನೀವು ರೇಸ್ ಕಾರಿನ Designನ ಒಮ್ಮೆ ನೋಡಬೇಕು. ಅಲ್ಲಿ ಚಾಲಕ ಮುಂದೆಯೂ ಹೋಗಲಾಗದೆ ಹಿಂದೆಯೂ ಸರಿಯಲಾಗದೆ Stiff ಆಗಿ ಕೂತಿರುತ್ತಾನೆ. ಸೀಟ್ ಬೆಲ್ಟಿನ ಸಹಾಯದಿಂದ. ಆತನ ಕಾರು 200 ಕಿ.ಮೀ. ವೇಗದಲ್ಲಿ ಅಪಘಾತವಾದಾಗಲು ಆತ ಏನು ಆಗಿಲ್ಲವೇನೋ ಎಂಬಂತೆ ಎದ್ದು ಬರುತ್ತಾನೆ. ಕಾರಣ ಆತನ ದೇಹ ಕಾರು ನಿಂತಾಗಲೇ ನಿಂತಿರುತ್ತದೆ. ಸೀಟ್ ಬೆಲ್ಟ್ ಅಲ್ಲಿ ಪ್ರಮುಖವಾದ ಕೆಲಸ ಮಾಡಿರುತ್ತದೆ.

ಈಗ ನಮ್ಮೆಲ್ಲರ ಸಾಮಾನ್ಯ ಕಾರುಗಳನ್ನ ತೆಗೆದುಕೊಳ್ಳೋಣ. ಬೆಂಗಳೂರಿನಂತ ಟ್ರಾಫಿಕ್0 ನಲ್ಲಿ ಅಥವಾ ಹಾಯಾಗಿ ಲಾಂಗ್ ಡ್ರೈವ್ ಗೆ ಹೋಗುವ ಸಂದರ್ಭದಲ್ಲಿ ನಾವು ರೇಸರ್ ಚಾಲಕನ ತರಹ ಸ್ಟಿಫ್ ಆಗಿ ಕೂರಲು ಇಚ್ಚಿಸುವುದಿಲ್ಲ. ಹಾಗಾಗಿ ನಮ್ಮ ಕಾರಿನ ಸೀಟ್ ಬೆಲ್ಟ್, ರೇಸ್ ಕಾರಿಗೆ ಹೋಲಿಸಿದರೆ ಸ್ವಲ್ಪ ಸಡಿಲ ಆಗಿರುತ್ತದೆ. ಹಾಗಾಗಿ ಅಪಘಾತವಾದಾಗ ನಾವು ಕಾರಿನ ಮುಂಭಾಗದಲ್ಲಿರುವ ಸ್ಟೀರಿಂಗಿಗೆ ಡಿಕ್ಕಿ ಹೊಡೆಯುತ್ತೇವೆ.

ಆಗ ಉಪಯೋಗಕ್ಕೆ ಬರುವುದೇ ಏರ್ ಬ್ಯಾಗ್ ಅಥವಾ ಸಪ್ಲಿಮೆಂಟ್.

ಒಂದು ಕ್ರಿಯೆಯನ್ನು ಪೂರ್ಣಗೊಳಿಸಲು ಒಂದು ವಸ್ತುವಿನ ಜೊತೆಗೆ ಅಥವಾ ಅದರ ಬದಲು ಸೇರಿಸುವ ವಸ್ತುವನ್ನು ಸಪ್ಲಿಮೆಂಟ್ ಎಂದು ಕರೆಯಬಹುದು. ಇಲ್ಲಿ ಕಾರಿನ ಸೀಟ್ ಬೆಲ್ಟಿಗೆ ಏರ್ ಬ್ಯಾಗ್, ಸಪ್ಲಿಮೆಂಟ್ ಆಗಿ ಕೆಲಸ ಮಾಡುತ್ತದೆ. ನೀವು ಸೀಟ್ ಬೆಲ್ಟ್ ಉಪಯೋಗಿಸದೆ ಕೇವಲ ಏರ್ ಬ್ಯಾಗ್ ಉಪಯೋಗಿಸಿದರೆ ಕೆಲವೊಮ್ಮೆ ಜೀವಕ್ಕೆ ಹಾನಿಯುಂಟಾಗಬಹುದು.

ಏರ್ ಬ್ಯಾಗ್ ಹೇಗೆ ಕೆಲಸ ಮಾಡುತ್ತದೆ ?
ಇದನ್ನು ನೀವು ಅರ್ಥಮಾಡ್ಕೊಬೇಕಾದ್ರೆ ಏರ್ ಬ್ಯಾಗ್ ಸಿಸ್ಟಂ ಅನ್ನು 3 ಭಾಗಗಳಾಗಿ ವಿಂಗಡಿಸಬೇಕು. ಏರ್ ಬ್ಯಾಗ್, ಸೆನ್ಸರ್ ಹಾಗೂ ಇನ್ ಫ್ಲೇಷನ್.

ಏರ್ ಬ್ಯಾಗ್: ಏರ್ ಬ್ಯಾಗ್ ಅನ್ನು ನೈಲಾನಿನಿಂದ ಮಾಡಿರುತ್ತಾರೆ ಮತ್ತು ಅದನ್ನು ಮಡಚಿ ಸ್ಟೀರಿಂಗ್, ಡ್ಯಾಶ್ ಬೋರ್ಡ್, ಡೋರ್ ಅಥವಾ roof rail ಗಳಲ್ಲಿ ಕೂಡ ಇಡುವುದುಂಟು. ಆದರೆ ಇದು ನಿಮ್ಮ ಕಾರಿನ ಲಕ್ಸುರಿಯನ್ನು ಅವಲಂಬಿಸಿರುತ್ತದೆ.

Sensor–Airbag operate ಆಗಲಿಕ್ಕೆ ಮುಖ್ಯ ಕಾರಣವಾಗಿರುವುದು Sensors. ಕಾರನ್ನು ಸಡನ್ ಆಗಿ ನಿಲ್ಲಿಸಿದರೆ ಅಥವಾ ಇನ್ನೊಂದು ವಸ್ತುವಿಗೆ ಬಲವಾಗಿ ಗುದ್ದಿದರೆ ಈ ಸೆನ್ಸರ್ ಗಳು Electronic Signalಗಳನ್ನು ಕಳಿಸುತ್ತವೆ. ಚಕ್ರದ ವೇಗ, ಬ್ರೇಕ್ ಅಪ್ಲೇ ಮಾಡಿದ ಪ್ರೆಶರ್ ಗಳ ಮೇಲೂ ಈ ಸಿಗ್ನಲ್ ಗಳು depend ಆಗಿರುತ್ತವೆ. ಏರ್ ಬ್ಯಾಗ್ ನ ಫಲಿತಾಂಶ ಸಂಪೂರ್ಣವಾಗಿ ನಿಂತಿರುವುದೇ sensor ಗಳ accuracy ಮತ್ತು ಅವುಗಳು react ಮಾಡುವ ಸ್ಪೀಡಿನ ಮೇಲೆ.

Inflator (Sudden Increase/Decrease): ಇದರಲ್ಲಿ potassium nitrate(KNO3) ಮತ್ತು Sodium azide (NaN3) ಇರುತ್ತದೆ. ಇವೆರಡು ಸೇರಿ nitrogen ಆಗುತ್ತದೆ. ಈ ಅನಿಲ sudden ಆಗಿ ಹೊರಬರುವುದರಿಂದ nylon ಬ್ಯಾಗ್ ಬಲೂನ್ ತರಹ ಊದಿಕೊಳ್ಳುತ್ತದೆ. ಆ ವೇಗ ಸುಮಾರು 200 mph ಆಗಿರುತ್ತದೆ. ತದನಂತರ ಏರ್ ಬ್ಯಾಗ್ ನಲ್ಲಿರುವ ಸಣ್ಣ ರಂಧ್ರದ ಮೂಲಕ nitrogen ಗ್ಯಾಸ್ ಹೊರಹೋಗುತ್ತದೆ.

ಒಮ್ಮೆ ಅಪಘಾತವಾಗಿ airbag open ಆಗುವುದಕ್ಕೆ ಬೇಕಾದ ಸಮಯ 1/25 th of second. ಅಂದರೆ ನೀವು ಕಣ್ಣು ಮುಚ್ಚಿ ಬಿಡುವುದರೊಳಗೆ ಅಪಘಾತವಾಗಿ ಏರ್ ಬ್ಯಾಗ್ ಹೊರಬಂದಿರುತ್ತದೆ !

ಇದನ್ನ ಇನ್ನೂ ಸರಳೀಕರಿಸಿ ಹೇಳುವುದಾದರೆ ಇದು physics+chemistry ಯ ಮಿಶ್ರಣದಂತಿದೆ.

1) ಒಂದು ಕಾರು ಅಪಘಾತಕ್ಕೀಡಾದರೆ automatically ಅದರ ವೇಗ ಕಡಿಮೆಯಾಗುತ್ತದೆ.

2) Accelometer (ವೇಗದ ಉಪಕರಣ) ವೇಗದಲ್ಲಾದ ಬದಲಾವಣೆಯನ್ನು ಗ್ರಹಿಸುತ್ತದೆ.

3) ಆ ವೇಗದಲ್ಲಿ ಅಸಾಮಾನ್ಯವಾದ ವ್ಯತ್ಯಾಸಗಳಿದ್ದಲ್ಲಿ ಏರ್ ಬ್ಯಾಗ್ ನ circuit trigger ಆಗುತ್ತದೆ (ಸಾಮಾನ್ಯ ವೇಗದಲ್ಲಿ ಬ್ರೇಕ್ ಹಾಕಿದಾಗ ಇದು ಅನ್ವಯಿಸುವುದಿಲ್ಲ )

4) ಏರ್ ಬ್ಯಾಗ್ circuit ತನ್ನ ಮೂಲಕ ವಿದ್ಯುಚ್ಛಕ್ತಿಯನ್ನ ಕಳಿಸುತ್ತದೆ (ಬಿಸಿಯ ಮೂಲಕ)

5) ಆ ಬಿಸಿಯು ಏರ್ ಬ್ಯಾಗ್ ನ ಮುಖಾಂತರ ಕೆಮಿಕಲ್ ಹೊರಗಡೆ ಬರಲು ಕಾರಣವಾಗುತ್ತದೆ (KNO3+NaN3)

6) Bag ದೊಡ್ಡದಾದ ಕಾರಣ steering wheel ನಿಂದ ಆಚೆ ಬಂದು ಡ್ರೈವರ್ ನ cover ಮಾಡುತ್ತದೆ. ಡ್ರೈವರ್ ಗೂ ಏರ್ ಬ್ಯಾಗ್ ಗೂ ಘರ್ಷಣೆಯಾಗಬಾರದೆಂದು ಮುನ್ನೆಚ್ಚರಿಕೆಯಾಗಿ powder ಅನ್ನು ಉಪಯೋಗಿಸಿರುತ್ತಾರೆ.

7) ಡ್ರೈವರ್ ಏರ್ ಬ್ಯಾಗ್ ನ ಒತ್ತಿದಾಗ ಅವನಿಗೆ ಯಾವುದೇ ಹಾನಿಯಾಗದ ರೀತಿ ಬ್ಯಾಗ್ ನಲ್ಲಿರುವ ರಂಧ್ರದಿಂದ ಗ್ಯಾಸ್ ಹೊರಹೋಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...