alex Certify
ಕನ್ನಡ ದುನಿಯಾ       Mobile App
       

Kannada Duniya

ಕೃಷಿ ಕ್ಷೇತ್ರಕ್ಕೂ ಲಗ್ಗೆ ಇಟ್ಟ ರೋಬೊಟ್

Robot

ಟೋಕಿಯೋ: ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ಮುಂದುವರೆದಂತೆಲ್ಲಾ ಹೊಸ ಹೊಸ ಆವಿಷ್ಕಾರಗಳನ್ನು ಮಾಡಲಾಗುತ್ತಿದೆ. ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಜಪಾನ್ ಸೇರಿದಂತೆ ವಿವಿಧ ದೇಶಗಳಲ್ಲಿ ಹಲವಾರು ಕಾರ್ಯಗಳಿಗೆ ರೋಬೊಟ್ ಬಳಸುತ್ತಿರುವುದು ಗೊತ್ತೇ ಇದೆ.

ಇದೀಗ ರೋಬೊಟ್ ಕೃಷಿ ಕೆಲಸಗಳನ್ನೂ ಮಾಡಲಿದೆ. ಜಪಾನ್ ಅಭಿವೃದ್ಧಿಪಡಿಸಿರುವ ಈ ರೋಬೊಟ್ ವಿಶ್ವದ ಪ್ರಥಮ ಸ್ವಯಂಚಾಲಿತ ರೋಬೊಟ್ ಆಗಿದ್ದು, ಬೆಳೆಗಳಿಗೆ ನೀರು ಹರಿಸುತ್ತದೆ. ಬೆಳೆ ಕಟಾವು ಮಾಡುತ್ತದೆ. ಹೀಗೆ ಕೃಷಿಗೆ ಸಂಬಂಧಿಸಿದ ಅನೇಕ ಕೆಲಸಗಳನ್ನು ತಾನೇ ನಿರ್ವಹಿಸಲಿದೆ. ಕ್ಯುಟೋ ಮೂಲದ ಸ್ಟ್ರೆಡ್ ಕಂಪನಿ ಈ ವಿಶೇಷ ರೋಬೊಟ್ ಅನ್ನು ಅಭಿವೃದ್ಧಿಪಡಿಸಿದ್ದು, ಇದನ್ನು ಬಳಸಿಕೊಂಡು ಮುಂದಿನ ವರ್ಷದ ಮಧ್ಯದಲ್ಲಿ ಕೃಷಿ ಚಟುವಟಿಕೆ ಆರಂಭಿಸಲಾಗುವುದು. ಸೊಪ್ಪು, ಕೋಸು ಬೆಳೆಸಲಾಗುವುದು.

ಸ್ಟ್ರೆಡ್ ಕಂಪನಿಯ ಅಧಿಕಾರಿ ಕೊಜಿ ಮೊರಿಸದಾ ಅವರು ಈ ಕುರಿತು ಮಾಹಿತಿ ನೀಡಿದ್ದು, ಬೀಜ ಬಿತ್ತನೆ ಹೊರತಾಗಿ ಎಲ್ಲಾ ಕೃಷಿ ಚಟುವಟಿಕೆಗಳನ್ನು ರೋಬೊಟ್ ಗಳೇ ನಿರ್ವಹಣೆ ಮಾಡಲಿವೆ. ಮುಂದಿನ 5 ವರ್ಷಗಳಲ್ಲಿ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಲಾಗುವುದು ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...