alex Certify
ಕನ್ನಡ ದುನಿಯಾ       Mobile App
       

Kannada Duniya

101ರ ಹರೆಯದ ಅದ್ಭುತ ಕಥಕ್ ಕಲಾವಿದ….

kathak

ಕಥಕ್ಕಳಿ ಕಲಿಯಬೇಕೆಂದು ಮನೆ ಬಿಟ್ಟು ಹೋದಾಗ ಅವರಿಗಿನ್ನೂ 15 ವರ್ಷ, ಯಾಕಂದ್ರೆ ಕಲೆಯ ಬಗ್ಗೆ ಅವರಿಗಿದ್ದ ಆಸಕ್ತಿಗೆ ಕೇರಳದ ಸಾಂಪ್ರದಾಯಿಕ ನಾಯರ್ ಕುಟುಂಬದಲ್ಲಿ ಪ್ರೋತ್ಸಾಹ ಸಿಕ್ಕಿರಲಿಲ್ಲ. ಚೆಮ್ಮಂಚೇರಿ ಕುನ್ಹಿರಾಮನ್ ನಾಯರ್ ಅವರಿಗೆ ಈಗ 101 ವರ್ಷ, ಅತಿ ಹಿರಿಯ ಕಥಕ್ ಡ್ಯಾನ್ಸರ್ ಎಂಬ ಹೆಗ್ಗಳಿಕೆ ಇವರದ್ದು.

ಕಥಕ್ ಕಲಾವಿದರಾಗಿ ಚೆಮ್ಮಂಚೇರಿ ಅವರ ಬದುಕು ತುಂಬಾನೇ ಚಾಲೆಂಜಿಂಗ್ ಆಗಿತ್ತು. ಆದ್ರೆ ಕಥಕ್ ಅವರನ್ನು ಕಲಾರಾಧಕರನ್ನಾಗಿ ಮಾಡಿದೆ. ವಿಶ್ವಾಮಿತ್ರ, ಕೀಚಕ ಹೀಗೆ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡ್ರೂ ಅವರು ಹೆಚ್ಚು ಜನಪ್ರಿಯರಾಗಿರೋದು ಕೃಷ್ಣನ ಅವತಾರದಲ್ಲಿ. ಚೆಮ್ಮಂಚೇರಿ ಕೃಷ್ಣನ ಭಕ್ತರು, ಹಾಗಾಗಿಯೇ ಇಷ್ಟು ವರ್ಷ ಒಬ್ಬ ಕಲಾವಿದರಾಗಿ ಗುರುತಿಸಿಕೊಳ್ಳಲು ಸಾಧ್ಯವಾಯ್ತು ಎನ್ನುತ್ತಾರೆ. ಮೊದಲು ಸ್ತ್ರೀಪಾತ್ರಗಳಲ್ಲಿ ಮಿಂಚುತ್ತಿದ್ದ ಚೆಮ್ಮಂಚೇರಿ ನಾಯರ್, ತಮ್ಮ ಗುರುವಿನ ಸಲಹೆಯಂತೆ ಕೃಷ್ಣಾವತಾರದಲ್ಲಿ ಕಥಕ್ ನೃತ್ಯ ಮಾಡಲಾರಂಭಿಸಿದ್ರು.

1945 ರಲ್ಲಿ ಭರತನಾಟ್ಯಂನಿಂದ ಆರಂಭವಾದ ಅವರ ಪಯಣ ಕಲ್ಲು-ಮುಳ್ಳಿನ ಹಾದಿಯಾಗಿತ್ತು. 1948ರಲ್ಲಿ ಫೇರಿ ಸರ್ಕಸ್ ಕಂಪನಿ ಸೇರಿದ ಅವರು ಕೃಷ್ಣ-ಗೋಪಿಕಾ ನೃತ್ಯದ ಮೂಲಕ ಜನರನ್ನು ರಂಜಿಸುತ್ತಿದ್ರು. ಕೇರಳ ಸಂಗೀತ ನಾಟಕ ಅಕಾಡೆಮಿ ಗೌರವ ಸೇರಿದಂತೆ ಹಲವು ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...