alex Certify
ಕನ್ನಡ ದುನಿಯಾ       Mobile App
       

Kannada Duniya

ಮೂರು ಬಾರಿ ಮದುವೆಯಾಗಿದ್ದಾರೆ ಈ ಯುವ ದಂಪತಿ

faiz-and-ankita-1ಸಾಮಾನ್ಯವಾಗಿ ಪ್ರೇಮ ವಿವಾಹಕ್ಕೆ ಪೋಷಕರುಗಳ ಒಪ್ಪಿಗೆ ಸಿಗುವುದು ಕಷ್ಟ. ಅದರಲ್ಲೂ ಅಂತರ್ಜಾತಿಯ ವಿವಾಹವಾದರಂತೂ ಕೆಲ ಪೋಷಕರು ಆಕಾಶವೇ ತಲೆ ಮೇಲೆ ಕಳಚಿ ಬಿದ್ದವರಂತೆ ವರ್ತಿಸುತ್ತಾರೆ. ಅಲ್ಲದೇ ಈ ಕಾರಣಕ್ಕೆ ಹತ್ಯೆಗಳೂ ನಡೆದಿವೆ. ಆದರೆ ಈ ಜೋಡಿಯ ವಿವಾಹ ಮಾತ್ರ ವಿಶೇಷವಾಗಿದೆ.

ಹಿಂದೂ- ಮುಸ್ಲಿಂ ಜೋಡಿಯಾದ ಅಂಕಿತಾ ಹಾಗೂ ಫೈಯಾಜ್ ಉನ್ನತ ವ್ಯಾಸಂಗ ಮಾಡಿದವರು. ಆಗಿನಿಂದಲೂ ಪರಸ್ಪರ ಪ್ರೀತಿಸುತ್ತಿದ್ದ ಇವರುಗಳು ವಿದ್ಯಾಭ್ಯಾಸ ಮುಗಿದ ಬಳಿಕ ವಿವಾಹಕ್ಕೆ ಪೋಷಕರ ಒಪ್ಪಿಗೆ ಕೇಳಿದ್ದಾರೆ. ಸಹಜವಾಗಿಯೇ ಇಬ್ಬರ ಮನೆಗಳಲ್ಲೂ ವಿರೋಧ ವ್ಯಕ್ತವಾಗಿದೆ.

ಆದರೂ ಪಟ್ಟು ಬಿಡದ ಅವರುಗಳು ನಿರಂತರವಾಗಿ ತಮ್ಮ ಪೋಷಕರುಗಳ ಮೇಲೆ ಒತ್ತಡ ಹೇರುತ್ತಲೇ ಬಂದಿದ್ದಾರೆ. ಅಷ್ಟಾದರೂ ಅವರುಗಳ ಒಪ್ಪಿಗೆ ಸಿಕ್ಕಿಲ್ಲ. ಕೊನೆಗೆ ಬೇರೆ ದಾರಿ ಕಾಣದೆ ನ್ಯಾಯಾಲಯದಲ್ಲಿ ವಿವಾಹವಾದ ಇವರುಗಳು ಬಳಿಕ ಹಿಂದೂ ಹಾಗೂ ಮುಸ್ಲಿಂ ಸಂಪ್ರದಾಯದಂತೆ ಮತ್ತೇ ಎರಡು ಬಾರಿ ವಿವಾಹವಾಗಿದ್ದಾರೆ. ವಿವಾಹವಾಗಿ ವಾಪಾಸ್ ಬಂದ ಇವರುಗಳಿಗೆ ಅಚ್ಚರಿಯಾಗುವಂತೆ ಎರಡೂ ಕುಟುಂಬದವರು ವಿವಾಹಕ್ಕೆ ಒಪ್ಪಿಗೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...