alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಶ್ಮೀರಿ ಯುವಕನ ವರಿಸುವ ಟೀನಾ ನಿರ್ಧಾರಕ್ಕೆ ಹಿಂದೂ ಮಹಾಸಭಾ ವಿರೋಧ

tina-dubai_02015ರಲ್ಲಿ ಯು.ಪಿ.ಎಸ್.ಇ. ಟಾಪರ್ ಆಗಿದ್ದ ಟೀನಾ ದಾಬಿ, ಎರಡನೇ ರ್ಯಾಂಕ್ ಬಂದಿದ್ದ ಕಾಶ್ಮೀರದ ಯುವಕ ಅತರ್ ಅಮೀರ್-ಉಲ್ ಶಫಿ ಖಾನ್ ನನ್ನು ಮದುವೆಯಾಗುವುದಾಗಿ ಫೇಸ್ ಬುಕ್ ನಲ್ಲಿ ಪ್ರಕಟಿಸಿರೋದು ಅಖಿಲ ಭಾರತೀಯ ಹಿಂದೂ ಮಹಾಸಭಾದ ಕಣ್ಣು ಕೆಂಪಗಾಗಿಸಿದೆ.

ಇದೊಂದು ಲವ್ ಜಿಹಾದ್ ಎಂದು ಖಂಡಿಸಿರುವ ಮಹಾಸಭಾ, ಟೀನಾಳನ್ನು ‘ಮರು-ಪರಿವರ್ತನೆ’ ಮಾಡಿ ಘರ್ ವಾಪ್ಸಿಗೆ ಕುಟುಂಬದವರಿಗೆ ನೆರವಾಗುವುದಾಗಿ ಹೇಳಿದೆ.

ಟೀನಾಳ ತಂದೆ ತಮ್ಮ ನಿರ್ಧಾರವನ್ನು ಮರುಪರಿಶೀಲಿಸಬೇಕು, ಜೊತೆಗೆ ಲವ್ ಜಿಹಾದ್ ಅನ್ನು ತಡೆಯಬೇಕೆಂದು ಹಿಂದೂ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಮುನ್ನಾ ಕುಮಾರ್ ಒತ್ತಾಯಿಸಿದ್ದಾರೆ.

ಇಡೀ ದೇಶವನ್ನೇ ಮುಸ್ಲಿಂಮಯವಾಗಿಸುವ ಪ್ರಯತ್ನವನ್ನು ತಡೆಯಬೇಕೆಂದು ಹಿಂದೂ ಮಹಾಸಭಾ ಕರೆಕೊಟ್ಟಿದೆ. ಮದುವೆ ಮಾಡಿಕೊಡಲು ಕುಟುಂಬದವರು ನಿರ್ಧರಿಸಿದ್ದೇ ಆದಲ್ಲಿ ಯುವಕ ಅಥರ್ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲಿ ಅಂತಾ ಸಲಹೆ ನೀಡಿದೆ. ಆಗ ಅತರ್ ಅಮೀರ್ ನ ಘರ್ ವಾಪ್ಸಿಗೆ ಹಿಂದೂ ಮಹಾಸಭಾ ಸಂಪೂರ್ಣ ಬೆಂಬಲ ನೀಡಲಿದೆ ಅಂತಾ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಸದ್ಯ ಟೀನಾ ದಾಬಿ ಮಸ್ಸೂರಿಯಲ್ಲಿ ಐಎಎಸ್ ತರಬೇತಿ ಪಡೆಯುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...