alex Certify
ಕನ್ನಡ ದುನಿಯಾ       Mobile App
       

Kannada Duniya

ಕಚೇರಿ ಒತ್ತಡ ಕಡಿಮೆ ಮಾಡುತ್ತೆ ಸೆಕ್ಸ್

couple_s_650_120814125331_1490187607_618x347

ದಿನಪೂರ್ತಿ ಕಚೇರಿಯಲ್ಲಿ ಕೆಲಸ ಮಾಡಿ ಸುಸ್ತಾಗಿ ಮನೆಗೆ ಬಂದವರು ರೋಮ್ಯಾನ್ಸ್ ಮಾಡಿ. ನಿಮ್ಮ ಆಯಾಸವೆಲ್ಲ ಕಡಿಮೆಯಾಗಿ ಮತ್ತೆ ಉತ್ಸಾಹ ಹೆಚ್ಚುತ್ತೆ. ಹೀಗಂತ ನಾವು ಹೇಳ್ತಿಲ್ಲ ಸ್ವಾಮಿ. ಇತ್ತೀಚೆಗೆ ನಡೆದ ಸಂಶೋಧನೆಯೊಂದು ಇದನ್ನು ಹೇಳಿದೆ.

ಓರೆಗಾನ್ ವಿಶ್ವವಿದ್ಯಾನಿಲಯ ಹಾಗೂ ವಾಷಿಂಗ್ಟನ್ ವಿಶ್ವವಿದ್ಯಾನಿಲಯ ಸೇರಿ ಈ ಸಂಶೋಧನೆ ನಡೆಸಿದೆ. 159 ದಂಪತಿಗಳನ್ನು ಸಂಶೋಧನೆಗೆ ಬಳಸಿಕೊಳ್ಳಲಾಗಿತ್ತು. ಎರಡು ವಾರಗಳ ಕಾಲ ದಂಪತಿ ಚಲನವಲನಗಳ ಬಗ್ಗೆ ಗಮನ ನೀಡಲಾಗಿತ್ತು.

ಯಾರು ಕಚೇರಿಯಿಂದ ಮನೆಗೆ ಬಂದ ಮೇಲೆ ಶಾರೀರಿಕ ಸಂಬಂಧ ಬೆಳೆಸ್ತಾರೋ ಅವರು ಮರುದಿನ ಕಚೇರಿಯಲ್ಲಿ ಸಕಾರಾತ್ಮಕವಾಗಿ ಕೆಲಸ ಮಾಡಿದ್ರಂತೆ. ಮರುದಿನ ಅವರ ಮೂಡ್ ತುಂಬಾ ಚೆನ್ನಾಗಿತ್ತು. ಉತ್ಸಾಹಿತರಾಗಿದ್ದ ಅವರು ಇಡೀ ದಿನ ಲವಲವಿಕೆಯಿಂದ ಕೆಲಸ ಮಾಡಿದ್ರಂತೆ.

ದಾಂಪತ್ಯದಲ್ಲಿ ಸೆಕ್ಸ್ ಕೂಡ ಮಹತ್ವದ ಪಾತ್ರ ವಹಿಸುತ್ತದೆ. ಹಾಗಾಗಿ ಏನೇ ಕೆಲಸವಿದ್ದರೂ ಮಾನಸಿಕ, ಭಾವನಾತ್ಮಕ, ಶಾರೀರಿಕವಾಗಿ ಪ್ರಯೋಜನಕಾರಿಯಾಗಿರುವ ಸೆಕ್ಸ್ ಗೆ ಸಮಯ ನೀಡಬೇಕೆಂದು ಸಂಶೋಧನೆಯಲ್ಲಿ ಹೇಳಲಾಗಿದೆ.

ಇದು ಕೇವಲ ಪುರುಷರಿಗೆ ಮಾತ್ರ ಸೀಮಿತವಾಗಿಲ್ಲ. ಮಹಿಳೆ ಹಾಗೂ ಪುರುಷ ಇಬ್ಬರೂ ಉತ್ಸಾಹಿತರಾಗಿ ಕೆಲಸ ಮಾಡಲು ಇದು ಸಹಾಯಕಾರಿ ಎನ್ನುತ್ತದೆ ಸಂಶೋಧನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...