alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಟರ್ನೆಟ್ ಸ್ಟಾರ್ ಆಗಿದ್ದಾಳೆ 2 ತಿಂಗಳ ಈ ಪುಟ್ಟ ಬಾಲೆ

Isabelle_Kaplanಈ ಪುಟ್ಟ ಬಾಲಕಿಯ ವಯಸ್ಸು ಇನ್ನೂ ಎರಡು ತಿಂಗಳಷ್ಟೇ. ಈಗಾಗಲೇ ಆಕೆ ಇಂಟರ್ನೆಟ್ ನಲ್ಲಿ ಸ್ಟಾರ್ ಆಗಿ ಬಿಟ್ಟಿದ್ದಾಳೆ. ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವ ಆಕೆಯ ಫೋಟೋವನ್ನು ಲಕ್ಷಾಂತರ ಮಂದಿ ಲೈಕ್ ಮಾಡಿ, ಶೇರ್ ಮಾಡಿದ್ದಾರೆ.

ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಡೇವ್ ಮತ್ತು ಮೆಕೆಂಜಿ ಕಪ್ಲಾನ್ ದಂಪತಿಗಳ ಪುತ್ರಿ ಎರಡು ತಿಂಗಳ ಇಸಾಬೆಲ್ ಕಪ್ಲಾನಾಳ ಚಿತ್ರ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವುದಕ್ಕೆ ಕಾರಣ ಆಕೆಯ ತಲೆಗೂದಲು. ಹೌದು ಇಸಾಬೆಲ್ ಗೆ ಇಷ್ಟು ಸಣ್ಣ ವಯಸ್ಸಿಗೇ ತಲೆ ತುಂಬಾ ಕೂದಲಿದೆ. ಕೆಲ ದಿನ ಕಳೆದರೆ ಕಟ್ಟಿಂಗ್ ಮಾಡಿಸುವಷ್ಟು ಉದ್ದದ ಕೂದಲು ಆಕೆಗೆ ಬರಲಿದೆ.

ಮಗುವನ್ನು ನೋಡಲು ಬಂದ ಸಂಬಂಧಿಯೊಬ್ಬರು ಇದನ್ನು ಗಮನಿಸಿ ಇಸಾಬೆಲ್ ಳ ಫೋಟೋ ತೆಗೆದು ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ್ದಾರೆ. ಅದೀಗ ವೈರಲ್ ಆಗಿದೆ. ತಮ್ಮ ಮಗಳಿಗೆ ಇಷ್ಟು ಉದ್ದದ ಕೂದಲು ಬೆಳೆದಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸುವ ಆಕೆಯ ತಂದೆ, ತಾನು ಮಗುವಾಗಿದ್ದಾಗಲೂ ಇದೇ ರೀತಿ ಕೂದಲು ಹೊಂದಿದ್ದಾಗಿ ಹೇಳಿಕೊಂಡಿದ್ದಾರೆ. ತನಗೆ ಮೂರು ತಿಂಗಳಿದ್ದಾಗಲೇ ಕೂದಲು ಕಣ್ಣಿಗೆ ಬರುತ್ತದೆಂಬ ಕಾರಣಕ್ಕೆ ತನ್ನ ತಾಯಿ ಹೇರ್ ಕಟ್ ಮಾಡಿದ್ದರಂತೆ ಎಂದು ಅವರು ಸ್ಮರಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...