alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರಿಶ್ಚಿಯನ್ನರ ಪ್ರಮುಖ ಹಬ್ಬ ಈಸ್ಟರ್

ಕ್ರಿಶ್ಚಿಯನ್ನರ ಪ್ರಮುಖ ಹಬ್ಬ ಗುಡ್ ಫ್ರೈಡೇ ಬಂದೇ ಬಿಟ್ಟಿದೆ. ಕ್ರಿಸ್ಮಸ್, ಗುಡ್ ಫ್ರೈಡೆ ಜೊತೆಗೆ ಈಸ್ಟರ್ ಕೂಡ ಕ್ರೈಸ್ತ ಧರ್ಮೀಯರಿಗೆ ಪ್ರಮುಖ ಹಬ್ಬ. ಶುಭ ಶುಕ್ರವಾರದ ಆನಂತರ ಬರುವ ಭಾನುವಾರವೇ ಈಸ್ಟರ್ ಹಬ್ಬ. ಹಾಗಿದ್ರೆ ಏನಿದು ಈಸ್ಟರ್ ಹಬ್ಬ? ಕ್ರಿಶ್ಚಿಯನ್ನರಿಗೆ ಇದೆಷ್ಟು ಮುಖ್ಯ..? ಹಬ್ಬವನ್ನು ಹೇಗೆ ಆಚರಿಸುತ್ತಾರೆ ಅನ್ನೋದನ್ನು ನೋಡೋಣ.

ಈಸ್ಟರ್ ಅನ್ನೋ ಪದದ ಮೂಲ ಎರಡು ಹಳೆಯ ವಸಂತ ಹಬ್ಬಗಳು. ಹಳೆಯ ಯುರೋಪಿಯನ್ ಹಬ್ಬವಾದ ಒಸ್ಟಾರಾ ಹಾಗೂ ಅರಾಬಿಯನ್ ಸನ್ ಫೆಸ್ಟಿವಲ್ ಇಸ್ಟಾರ್ ಎಂಬುದರಿಂದ  ಈಸ್ಟರ್ ಪದ ಉಗಮವಾಗಿದೆ.

ಕ್ರಿಸ್ತನ ಪುನರುತ್ಥಾನದ ವಾರ್ಷಿಕ ಸ್ಮರಣೆಗಾಗಿ ಈಸ್ಟರ್ ಹಬ್ಬ ಆಚರಿಸಲಾಗುತ್ತದೆ. ಇದಕ್ಕೆ ಕ್ರಿಶ್ಚಿಯನ್ನರಲ್ಲಿ ವಿಶೇಷ ಪ್ರಾಮುಖ್ಯತೆಯಿದೆ.

ಭೂಮಿಯ ಮೇಲಿನ ಮನುಷ್ಯರೆಲ್ಲರೂ ಪಾಪದಿಂದ ವಿಮೋಚನೆ ಹೊಂದಲು ಯೇಸು ಕ್ರಿಸ್ತ ಶುಕ್ರವಾರದಂದು ಮರಣಕ್ಕೆ ಅರ್ಪಿಸಿಕೊಂಡರು. ಈಸ್ಟರ್ ಅನ್ನುವುದು ಯೇಸು ಕ್ರಿಸ್ತ ಮನುಷ್ಯರೊಂದಿಗೆ ಸದಾಕಾಲ ಜೀವಿಸುವುದಕ್ಕೆ ಮರಣ ಹೊಂದಿದ ಮೂರನೇ ದಿನ ಪುನರುತ್ಥಾನ ಹೊಂದಿ ಬಂದ ದಿನವಾಗಿದೆ. ಹೀಗಾಗಿ ಇದು ಅತ್ಯಂತ ಮಹತ್ವ ಪಡೆದಿದೆ.

ವಿಶ್ವದಾದ್ಯಂತ ಈಸ್ಟರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಮೇಣದ ಬತ್ತಿಗಳನ್ನು ಹಚ್ಚಿ ಈ ಹಬ್ಬ ಆಚರಣೆ ಮಾಡುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...