alex Certify
ಕನ್ನಡ ದುನಿಯಾ       Mobile App
       

Kannada Duniya

ಹಿಮಾಲಯದ ತುತ್ತತುದಿಯಲ್ಲಿದೆ ಸೇನೆಯ ದೇಗುಲ

army-temple

ಹಿಮಾಲಯದ ಗ್ಯಾಂಗ್ಟಕ್ ನಲ್ಲಿರುವ ಹನುಮಾನ್ ದೇವಾಲಯ ಆಕರ್ಷಣೆಯ ಕೇಂದ್ರಬಿಂದು. ಹಿಮಾಲಯದ ಅದ್ಭುತ ನೋಟವನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ಆಂಜನೇಯನ ಆಶೀರ್ವಾದ ಪಡೆಯಲು ಎಲ್ಲರೂ ಹನುಮಾನ್ ಟೋಕ್ ಗೆ ಬರ್ತಾರೆ.

ವಿಶೇಷ ಅಂದ್ರೆ ಇಲ್ಲಿ ಪೂಜೆ ಸಲ್ಲಿಸುವವರು ಸೈನಿಕರು. ನಂಬಿಕೆಯನ್ನೂ ಮೀರಿದ ಕರ್ತವ್ಯ ಎಂಬ ತತ್ವದ ಮೇಲೆ ಅವರು ಹನುಮಂತನ ಸೇವೆ ಮಾಡ್ತಿದ್ದಾರೆ. ಜಗತ್ತಿನ ಮೂರನೇ ಅತಿದೊಡ್ಡ ಶಿಖರ ಕಾಂಚನಗಂಗಾದ ರಮಣೀಯತೆಯನ್ನು ನೀವು ಇಲ್ಲಿಂದ ವೀಕ್ಷಿಸಬಹುದು ಯಾಕಂದ್ರೆ ಈ ದೇವಾಲಯ 7200 ಅಡಿ ಎತ್ತರದಲ್ಲಿದೆ.

ಸೇನೆಯ ಬ್ಲಾಕ್ ಕ್ಯಾಟ್ ತಂಡದ ಯೋಧ ಸಜಿನ್ ಕುಮಾರ್, ಸೇನಾ ಸಮವಸ್ತ್ರ ಧರಿಸಿಯೇ ಪೂಜೆ ಸಲ್ಲಿಸ್ತಾರೆ. ಭಕ್ತಾದಿಗಳಿಗೆಲ್ಲ ತಿಲಕವಿಟ್ಟು ಪ್ರಸಾದ ಕೊಡ್ತಾರೆ. ಮೂಲತಃ ಅವರೊಬ್ಬ ಕ್ರಿಶ್ಚಿಯನ್, ಆದ್ರೂ ಆಂಜನೇಯನ ಭಕ್ತರು. ಈ ದೇವಸ್ಥಾನದ ನಿರ್ವಹಣೆ ಹೊಣೆಯನ್ನು ಭಾರತೀಯ ಸೇನೆಯೇ ಹೊತ್ತುಕೊಂಡಿದೆ.

ಇದಕ್ಕೂ ಮುನ್ನ ಮುಸ್ಲಿಂ ಯೋಧನೊಬ್ಬ ಇಲ್ಲಿ ಪೂಜೆ ಸಲ್ಲಿಸುತ್ತಿದ್ದ ಅನ್ನೋದು ವಿಶೇಷ. ಹಿಮಾಲಯದಿಂದ ಲಂಕೆಗೆ ಸಂಜೀವಿನಿ ಪರ್ವತ ಕೊಂಡೊಯ್ಯುವ ಸಂದರ್ಭದಲ್ಲಿ ಹನುಮಂತ ಇದೇ ಜಾಗದಲ್ಲಿ ವಿರಮಿಸಿದ್ದ ಎಂಬ ಪ್ರತೀತಿ ಇದೆ. ದೇವಸ್ಥಾನ ನಿರ್ಮಾಣಕ್ಕೂ ಮುನ್ನ 1950ರಲ್ಲಿ ಭಕ್ತರು ಹನುಮಾನ್ ಮೂರ್ತಿಯನ್ನಿಟ್ಟು ಪೂಜೆ ಮಾಡ್ತಾ ಇದ್ರು. ದೇಶ- ವಿದೇಶಗಳಿಂದಲೂ ಭಕ್ತರು ಇಲ್ಲಿಗೆ ಹರಿದು ಬರ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...